ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈನ ತನ್ನ ಮನೆಯಲ್ಲಿ ನಡೆದ ದಸರಾ ಫೋಟೋ ಶೇರ್ ಮಾಡಿ ಶಿವ ಸೇನಾ ಮುಖಂಡನಿಗೆ ಟಾಂಗ್ ಕೊಟ್ಟಿದ್ದಾರೆ. ಬಿಎಂಸಿ ತೆರವು ಕಾರ್ಯ ನಡೆಸಿದ್ದ ನಟಿ ಕಂಗನಾ ಬಂಗಲೆಯಲ್ಲಿ ದಸರಾ ಹಬ್ಬ ಅಚರಿಸಲಾಗಿದೆ.

ಹಬ್ಬ ಆಚರಿಸಿದ ಫೋಟೋ ಶೇರ್ ಮಾಡಿದ ನಟಿ ಸಂಜಯ್ ರಾವತ್‌ಗೆ ಟಾಂಗ್ ನೀಡಿದ್ದಾರೆ. ನನ್ನ ಒಡೆದ ಕನಸುಗಳು ನಿಮ್ಮ ಮುಖದಲ್ಲಿ ನಗುವಾಗಿದೆ. ಪಪ್ಪು ಸೇನೆ ನನ್ನ ಮನೆಯನ್ನು ಒಡೆಯಬಹುದು, ಉತ್ಸಾಹವನ್ನಲ್ಲ ಎಂದಿದ್ದಾರೆ ನಟಿ.

ಕಸಿನ್ ಮದ್ವೆಗೆ ಕಾಸ್ಟ್ಲಿ ಲೆಹಂಗಾ..! ಕ್ವೀನ್ ಅಂತ ಪ್ರೂವ್ ಮಾಡಿದ್ರು ನಟಿ ಕಂಗನಾ

ಸಹೋದರನ ವಿವಾಹ ಸಂಭ್ರಮದಲ್ಲಿದ್ದ ನಟಿ ಹಿಮಾಚಲಪ್ರದೇಶದಲ್ಲಿಯೇ ಇದ್ದಾರೆ. ಸದ್ಯದಲ್ಲಿಯೇ ಮುಂಬೈಗೆ ಮರಳೋದಾಗಿ ಹೇಳಿದ್ದಾರೆ ನಟಿ. ಇಬ್ಬರು ಸಹೋದರಿಯರ ಮೇಲೆ ಕೋಮು ಪ್ರಚೋದಿತ ಹೇಳಿಕೆ ನೀಡಿದ  ಸಂಬಂಧ ದೂರು ದಾಖಲಾಗಿದೆ.