ಬಹುಭಾಷಾ ನಟಿ ಜೂಹಿ ಚಾವ್ಲಾ ಕೆಲವು ತಿಂಗಳಿನಿಂದ ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ತಮ್ಮ ಹಳೆ ಸಿನಿಮಾಗಳನ್ನು ಮತ್ತೆ ಮಕ್ಕಳಿಗಾಗಿ ಪ್ಲೇ ಮಾಡಿ ತೋರಿಸುತ್ತಿದ್ದಾರೆ. ಹೆಚ್ಚಾಗಿ ಕಾಮಿಡಿ-ರೊಮ್ಯಾನ್ಸ್ ಸಿನಿಮಾ ಮಾಡಿರುವ ಜೂಹಿ ಮಕ್ಕಳು, ಅಮ್ಮನ ನಟನೆಯನ್ನು ನೋಡಿ ಏನು ಹೇಳಿದ್ದಾರೆ ಗೊತ್ತಾ?

ಮಿಸ್ ಯುನಿವರ್ಸ್‌ ನ್ಯಾಷನಲ್ ಕಾಸ್ಟ್ಯೂಮ್ ರೌಂಡ್‌ನಲ್ಲಿ ಗೆದ್ದ ಜೂಹಿ ಧರಿಸಿದ್ದು ಲೆಹಂಗಾ, ಮೂಗುತಿ 

ಮಕ್ಕಳ ರಿಯಾಕ್ಷನ್ ಶಾಕಿಂಗ್:
ಜೂಹಿ ಪುತ್ರಿ ಜಾಹ್ನವಿ ಹಾಗೂ ಪುತ್ರ ಅರ್ಜುನ್‌ ತಾಯಿ ನಟಿಸಿದ ಸೂಪರ್ ಹಿಟ್‌ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ವೀಕ್ಷಿಸಿದ್ದಾರೆ. ಕೆಲವೊಂದು ರೊಮ್ಯಾನ್ಸ್ ಸನ್ನಿವೇಶ ನೋಡಿ 'very embarrased' ಎಂದು ಹೇಳಿದ್ದಾರಂತೆ. ಈ ವಿಚಾರವನ್ನು ಖಾಸಗಿ ಸಂದರ್ಶನದಲ್ಲಿ ಜೂಹಿ ನಗು ನಗುತ್ತಾ ಹೇಳಿ ಕೊಂಡಿದ್ದಾರೆ.

'ನನ್ನ ಮಕ್ಕಳು ನಾನು ಮಾಡಿದ ರೊಮ್ಯಾನ್ಸ್ ದೃಶ್ಯಗಳನ್ನು ನೀಡಿ ನೋಡಿ ತುಂಬಾ ಮುಜುಗರ ಮಾಡಿಕೊಂಡಿದ್ದಾರೆ. ನನ್ನ ಪತಿ ಜಯ್ 'ಹಮ್ ಹೈ ರಾಹಿ ಪ್ಯಾರ್ ಕೆ' ಸಿನಿಮಾವನ್ನು ತೋರಿಸುವಂತೆ ಸಜೆಸ್ಟ್ ಮಾಡಿದ್ರು. ಅದಕ್ಕೆ ಅರ್ಜುನ್ ಅಮ್ಮ ಈ ಸಿನಿಮಾದಲ್ಲಿ ರೊಮ್ಯಾನ್ಸ್ ಇದ್ರೆ ನಾನು ನೋಡಲ್ಲ. ನಿಮ್ಮ ಆನ್‌ಸ್ಕ್ರೀನ್ ರೊಮ್ಯಾನ್ಸ್ ನೋಡೋಕೆ ನನಗೆ ಇಷ್ಟ ಇಲ್ಲ. ಎಲ್ಲವೂ ಒಂದು ತರ ಸ್ಟ್ರೇಂಜ್ ಅನಿಸುತ್ತದೆ.  ನಿಮ್ಮ ಎಲ್ಲಾ ಸಿನಿಮಾಗಳಲ್ಲೂ ರೊಮ್ಯಾನ್ಸ್ ಇರುತ್ತದೆ. ನಾನು ಇನ್ನು ಮುಂದೆ ನಿಮ್ಮ ಯಾವ ಸಿನಿಮಾನೂ ನೋಡಲ್ಲ,' ಎಂದು ಹೇಳಿದ್ದಾನಂತೆ. ಅರ್ಜುನ್ ಮಾತುಗಳನ್ನು ಕೇಳಿ ಜೂಹಿ ಶಾಕ್ ಆಗಿದ್ದಾರೆ.

'ನನ್ನ ಮಕ್ಕಳು ನನ್ನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ಕೊಂಡೆ. ಆದರೆ ಅವರ ರಿಯಾಕ್ಷನ್ ತುಂಬಾನೇ ಶಾಕಿಂಗ್. ಭೂತ್ ನಾಥ್ ಎಲ್ಲವೂ ತಮಾಷೆಯ ಸಿನಿಮಾ ಆದ ಕಾರಣ ನೋಡಿದ್ದರು. ಆದರೂ ನಮ್ಮ ಮಕ್ಕಳೇ ನನ್ನ ಸಿನಿಮಾ ಒಪ್ಪಿಕೊಂಡಿಲ್ಲ ಅಂತ ಬೇಸರ ಆಯ್ತು,' ಎಂದಿದ್ದಾರೆ.

ಶಾರುಖ್‌ನನ್ನು ಅಮಿರ್‌ಗೆ ಹೋಲಿಸಿ ಕಾಲೆಳೆದ ಕನ್ನಡದ ನಟಿ; ಅಣುಕಿಸಲು ಕಾರಣವೇನು?

ಕನ್ನಡ ಸಿನಿಮಾಗಳಾದ 'ಶಾಂತಿ ಕ್ರಾಂತಿ, 'ಪ್ರೇಮ ಲೋಕ'ಹಾಗೂ 'ಪುಷ್ಪಕ ವಿಮಾನ'ದಲ್ಲಿ ಜೂಹಿ ನಟಿಸಿದ್ದಾರೆ. ಅದರಲ್ಲಿಯೂ ರವಿಚಂದ್ರನ ಜೊತೆ ಅಭಿನಯಿಸಿದ ಪ್ರೇಮಲೋಕದ ಹಾಡುಗಳು ಒಂದಕ್ಕಿಂದ ಒಂದು ಹಿಟ್ ಆಗಿದ್ದು, ನಿಂಬೆ ಹಣ್ಣಿನಂಥ ಹುಡುಗಿ...ಹಾಡಿನಲ್ಲಿ ಜೂಹಿ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. ನಿಂಬೆ ಹಣ್ಣಿನ ಬೆಡಗಿ ಎಂದು ಕನ್ನಡ ಸಿನಿ ರಸಿಕರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು ಈ ಬಾಲಿವುಡ್ ನಟಿ.