ನಟಿ ಜೂಹಿ ಚಾವ್ಲಾ 1984ರಲ್ಲಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಗ ಅವರು ನ್ಯಾಷನಲ್ ಕಾಸ್ಟ್ಯೂಮ್ ರೌಂಡ್‌ನಲ್ಲಿ ಗೆದ್ದಿದ್ದು, ಭಾರತೀಯ ಸಂಪ್ರದಾಯಿಕ ಲೆಹಂಗಾ ಮತ್ತು ಸುಂದರ ಮೂಗುತಿ ಮೂಲಕ.

1984ರ ವಿಶ್ವ ಸುಂದರಿ ಸ್ಪರ್ಧೆಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ನಟಿ ಜೂಹಿ ಚಾವ್ಲಾ ತಮ್ಮನ್ನು ತಾವು ನಮಸ್ತೆ ಮೂಲಕ ಪರಿಚಯಿಸಿಕೊಂಡ ವಿಡಿಯೋ ವೈರಲ್ ಆಗುತ್ತಿದೆ.

ಹೀರೋ ಇವರೇ; ಇಂಟರೆಸ್ಟಿಂಗ್ ಲವ್ ಕಹಾನಿ!

ಸುಂದರ ಕಸೂತಿಯ ಲೆಹಂಗಾ, ನೆತ್ತಿ ಬೊಟ್ಟು ಹಾಗೂ ಮೂಗುತಿಯಲ್ಲಿ ಜೂಹಿ ಸುಂದರವಾಗಿ ಕಾಣಿಸಿದ್ದಾರೆ. ಭಾರತೀಯ ಸಂಪ್ರದಾಯಿಕ ಉಡುಗೆಗಳಲ್ಲಿ ಒಂದಾದ ಲೆಹಂಗಾದಲ್ಲಿ ಮಿಂಚಿದ ನಟಿ ಸುಂದರ ನಗುವಿನೊಂದಿಗೆ ತಮ್ಮನ್ನು ತಾವು ಪರಿಚಯಿಸಿಕೊಂಡು, ನಮಸ್ತೆ, ನಾನು ಜೂಹಿ ಚಾವ್ಲಾ, ಬಾಂಬೆ, ಇಂಡಿಯಾ, ಎಂದಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆಗೆ ಹೋಗುವ ಮುನ್ನ ನಟಿ ಜೂಹಿ ಚಾವ್ಲಾ 1984ರಲ್ಲಿ ಮಿಸ್‌ ಇಂಡಿಯಾ ಆಗಿ ಹೊರಹೊಮ್ಮಿದ್ದರು.

ನಟಿ ಜೂಹಿ ಚಾವ್ಲಾ ಒಂದು ಬಾರಿ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದರು. ಎಲ್ಲವೂ ನಡೆಯಿತು. ಗೆಲುವು, ಸೋಲು, ನಿಧಾನವಾಗಿ ಕೆಲವೊಮ್ಮೆ ಅದುವೇ ಅಮಲೇರಿಸುತ್ತಿತ್ತು. ಬಹಳಷ್ಟು ಅಮಲು. ನನಗದನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ನನಗೆ ಹುಚ್ಚು ಹಿಡಿದಂತಾಗಿತ್ತು. ನಾನೊಂದು ಸಿನಿಮಾಗೆ ನೋ ಹೇಳಿದರೆ ಚಿತ್ರ ರಂಗ ಉರುಳಿ ಬೀಳಬಹುದು ಎಂದುಕೊಂಡಿದ್ದೆ. ಏನೂ ಆಗಲಿಲ್ಲ. ನಾನು ಸಿನಿಮಾಗಳನ್ನು ಕಳೆದುಕೊಂಡೆ. ನಾನು ಎಲ್ಲ ಏರಿಳಿತವನ್ನು ಕಂಡಿದ್ದೇನೆ. ಕೆಲವೊಂದು ಡಂಬ್, ಕೆಲವೊಮ್ಮೆ ಖುಷಿ, ಕೆಲವೊಂದು ಮೂರ್ಖತನ, ಕೆಲವೊಂದು ಅತ್ಯಂತ ಖುಷಿಯ ಸಮಯ, ವೈಯಕ್ತಿಕ ನಷ್ಟಗಳಿಂದಾಗಿ ಕೆಲವೊಂದು ನೋವಿನ ಸಮಯ. ಆದರೆ ಇದೊಂದು ನಂಬಲಾಗದಂತಹ ಪಯಣ. ನಾನು ಹಿಂದಿರುಗಿ ನೋಡಿದಾಗ ನಾನೇ ವಾವ್ ಎನ್ನುತ್ತೇನೆ ಎಂದಿದ್ದಾರೆ.

ಸಲ್ಮಾನ್‌‌ಗೆ ಮಗಳನ್ನು ಕೊಡಲು ನಿರಾಕರಿಸಿದ ಜೂಹಿ ಚಾವ್ಲಾ ತಂದೆ

ತಮ್ಮ ಔದ್ಯೋಗಿಕ ಜೀವನ ಕಟ್ಟಿಕೊಳ್ಳಲು ಎದುರಿಸಿದ ಸವಾಲಿನ ಬಗ್ಗೆ ಪ್ರತಿಕ್ರಿಯಿಸಿ, ಅದೇನೆಂದು ಗೊತ್ತಿಲ್ಲ. 30 ವರ್ಷ ಸುಂದರ ವರ್ಷಗಳು. 30 ವರ್ಷ ಇಂಡಸ್ಟ್ರಿಯಲ್ಲಿರುತ್ತೇನೆ ಎಂದುಕೊಂಡಿರಲಿಲ್ಲ. ದೇವರು ಕರುಣಾಮಯಿ ಎಂದಿದ್ದರು.