ಗರ್ಭಿಣಿ ಆಗಿರುವುದಕ್ಕೆ ಇಷ್ಟು ಬೇಗ ಮದುವೆ ಆಗಿದ್ದಾ, ಎಂದು ಗಾಸಿಪ್ ಹಬ್ಬಿಸುತ್ತಿರುವವರಿಗೆ ಕ್ಲಾರಿಟಿ ಕೊಟ್ಟ ನಟಿ ಶಿಬಾನಿ ದಾಂಡೇಕರ್...

ಇತ್ತೀಚಿಗೆ ಬಾಲಿವುಡ್‌ ಅಂಗಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಶಿಬಾನಿ ದಾಂಡೇಕರ್ (Shibani Dandekar) ಮತ್ತು ಫರ್ಹಾನ್ ಅಖ್ತರ್ (Farhan Akhtar). ಇವರಿಬ್ಬರ ಸರ್ಪ್ರೈಸ್ ಮದುವೆ ಅದೆಷ್ಟೋ ದಿನಗಳ ಕಾಲ ಸುದ್ದಿಯಲ್ಲಿತ್ತು. ಮದುವೆಯಾಗಿ ದಿನಗಳು ಕಳೆಯುತ್ತಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ (Social Media) ಇವರ ಮದುವೆ ಫೋಟೋ, ಪಾರ್ಟಿ ಫೋಟೋ ಸಖತ್ ವೈರಲ್ ಆಗಿದ್ದವು. ಎಲ್ಲಾ ಫೋಟೋದಲ್ಲೂ ಶಿಬಾನಿ ತುಂಬಾನೇ ಡಿಫರೆಂಟ್ ಆಗಿ ಕಾಣಿಸುತ್ತಿದ್ದ ಕಾರಣ ನೀವು ಅಮ್ಮ ಆಗುತ್ತಿದ್ದೀರಾ? ಹೊಟ್ಟ ದಪ್ಪ ಆಗಿದೆ ನೀವು ಗರ್ಭಿಣಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 

ಫೆಬ್ರವರಿ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಫೆಬ್ರವರಿ 21ರಂದು ಮುಂಬೈನಲ್ಲಿ ರಿಜಿಸ್ಟರ್ (Mumabi Register Marriage) ಮಾಡಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ (Instagram) ಒಂದು ಸಲಕ್ಕೆ 10 ಫೋಟೋ ಅಪ್ಲೋಡ್ ಮಾಡಬಹುದು, ಈ ಮೂಲಕ ಶಿಬಾನಿ 100ಕ್ಕೂ ಮದುವೆ ಫೋಟೋ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕೆಂಪು ಔಟ್‌ಫಿಟ್‌ ಗಾಸಿಪ್‌ಗೆ ಗುರಿಯಾಗಿದೆ. ಟೈಟ್‌ ಫಿಟ್ ಕೆಂಪು ಬಣ್ಣದ (Red Gown) ಗೌನ್ ಧರಿಸಿರುವ ಶಿಬಾನಿ ಅವರ ಹೊಟ್ಟೆ ಕಾಣಿಸುತ್ತಿದೆ. ಹೀಗಾಗಿ ನೀವು ಗರ್ಭಿಣಿಯಾ (Pregnant) ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಿಗೆ ಕಾಮೆಂಟ್‌ನಲ್ಲೇ ಉತ್ತರ ಕೊಡಲು ಪ್ರಯತ್ನ ಪಟ್ಟು, ಕೊನೆಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಟ್ಟೆ ತೋರಿಸಿ ಉತ್ತರಿಸಿದ್ದಾರೆ. 

ಚಡ್ಡಿ ಮತ್ತು ಬ್ರಾ ಧರಿಸಿ ಮನೆಯಲ್ಲಿ ವರ್ಕೌಟ್ (Workout) ಮಾಡುತ್ತಿರುವ ಲುಕ್‌ನಲ್ಲಿ ಕನ್ನಡಿ ಮುಂದೆ ನಿಂತುಕೊಂಡು ತಮ್ಮ 6 ಪ್ಯಾಕ್ಸ್‌ ತೋರಿಸುತ್ತಲೇ 'ನಾನು ಮಹಿಳೆ. ನಾನು ಗರ್ಭಿಣಿ ಅಲ್ಲ. ಇದು ಟಕೀಲ (Taquila)' ಎಂದು ಬರೆದುಕೊಂಡಿದ್ದಾರೆ. ಕಾಮೆಂಟ್‌ನಲ್ಲಿ 'ನನ್ನ ಹೊಟೆಯಲ್ಲಿ ಮಗುವಿಲ್ಲ. ನಾನು ಗರ್ಭಿಣಿ ಅಲ್ಲ. ಇದು ಟಕೀಲ ಎಣ್ಣೆಎಂದು ಆಗಿರುವುದು. ಗಾಸಿಪ್ ಹಬ್ಬಿಸಬೇಡಿ,' ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಶುಭವಾಗಲಿ ಶಿಬಿ ಮತ್ತು ಎಫ್. ನಿಮ್ಮ ಮದುವೆ ದಿನಗಳು ಅದ್ಭುತವಾಗಿತ್ತು. ಮದುವೆ ಎಷ್ಟು ಸುಲಭವಾಗಿ ಆಗಿತ್ತು ಹಾಗೇ ನೀವು ಸದಾ ಒಟ್ಟಿಗಿದ್ದರೆ ನಿಮ್ಮ ಜೀವನ ಸುಲಭ ಮತ್ತು ಸ್ಮೂತ್ ಆಗಿರುತ್ತದೆ. ಈಗ ಆ ಟಕೀಲ ಎಣ್ಣಿಯನ್ನು ಇಟ್ಟು ಕೆಲಸ ಶುರು ಮಾಡು,' ಎಂದು ಶಬಾನಿ ಸಹೋದರಿ ಅಪೇಕ್ಷಾ (Apeksha Dandekar) ಬರೆದಿದ್ದಾರೆ. 

'ಸಹೋದರಿಯರಾಗಿ ನಾನು ಈ ಮಧುಮಗಳ ಜೊತೆ ಒಟ್ಟಾಗಿ ನಿಂತಿದ್ದಕ್ಕೂ ಸಾರ್ಥಕವಾಗಿತು. ಕಾರಣ ಈಗ ಆಕೆ ಸಿಂಡ್ರೆಲಾ (Cindrella) ಆಗಿದ್ದಾರೆ. ಫರ್ಹಾನ್ ಈಗ ಅವಳನ್ನು ನಿಮ್ಮ ಮಡಿಲಿಗೆ ಸೇರಿಸಿದ್ದೀವಿ. ನಿಮಗೆ ನಮ್ಮ ಸಹಾಯ ಬೇಕಿದ್ದರೆ, ಯಾವಾಗ ಬೇಕಿದ್ದರೂ ಕರೆ ಮಾಡಿ. ಆದರೆ ನಾವು ನಂಬರ್ ಬದಲಾಯಿಸಿದ್ದೀವಿ,' ಎಂದು ಹಾಸ್ಯ ಮಾಡಿದ್ದಾರೆ ಶಿಬಾ ಸಹೋದರಿ ಅನುಶಾ (Anusha Dandekar). 

48 ವರ್ಷದ ಫರ್ಹಾನ್‌ ಅಖ್ತರ್‌ಗೆ ಶಿಬಾನಿ ಎರಡನೇ ಪತ್ನಿ. 2000ರಲ್ಲಿ ಅಧುನಾ ಭಬಾನಿ (Adhuna Bhabani Akhtar) ಎಂಬುವರ ಜೊತೆ ಫರ್ಹಾನ್ ಮದುವೆಯಾಗಿದ್ದರು. ಆದರೆ 2017ರಲ್ಲಿ ವಿಚ್ಛೇದನ ಪಡೆದುಕೊಂಡರು. 2018ರಲ್ಲಿ ಫರ್ಹಾನ್ ಮತ್ತು ಶಿಬಾನಿ ನಡುವೆ ಪ್ರೀತಿ ಶುರುವಾಗಿತ್ತು. ಇಬ್ಬರೂ ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಶಿಬಾನಿ ಎಂಟ್ರಿ ಕೊಟ್ಟ ಕಾರಣ ಫರ್ಹಾನ್ ಮೊದಲ ಮದುವೆ ಮುರಿದು ಬಿದ್ದಿರಬೇಕು, ಎಂದು ನೆಟ್ಟಿಗರು ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಹಲವು ವರ್ಷಗಳ ಕಾಲ ಇವರ ಪ್ರೀತಿ ವಿಚಾರವನ್ನು ಗುಟ್ಟಾಗಿಟ್ಟಿದ್ದರು.

'ಶಿಬಾನಿ ಡಾಂಡೇಕರ್ ತುಂಬಾನೇ ಒಳ್ಳೆಯ ಹುಡುಗಿ. ಆಕೆಯನ್ನು ನಮ್ಮ ಇಡೀ ಕುಟುಂಬ ಒಪ್ಪಿಕೊಂಡಿದೆ. ಎಲ್ಲರಿಗೂ ಆಕೆ ಅಚ್ಚುಮೆಚ್ಚು. ಫರ್ಹಾನ್ ಮತ್ತು ಶಿಬಾನಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಅನ್ಯೋನ್ಯವಾಗಿದ್ದಾರೆ,' ಎಂದು ಫರ್ಹಾನ್ ತಂದೆ ಜಾವೇದ್ ಹೇಳಿದ್ದರು.