ಕೊಡಗಿನ ಕುವರಿ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ಸಿನಿ ಜರ್ನಿ ಶುರು ಮಾಡಿ ಟಾಲಿವುಡ್‌ನಲ್ಲಿ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಕನ್ನಡಕ್ಕಿಂತಲೂ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ.  ವಿಜಯ್ ದೇವರಕೊಂಡ ಜೊತೆ ಹೆಸರು ತಗಲಾಕಿಕೊಂಡ ನಂತರ ಸಿನಿಮಾಗಿಂತ ಹೆಚ್ಚಾಗಿ ಗಾಸಿಪ್‌ಗಳಲ್ಲೇ ಸುದ್ದಿಯಾಗಿದ್ದಾರೆ. 

ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್‌ ಸ್ಟೋರಿಗೆ ಸಾಕ್ಷಿಯಾಯ್ತು ಈ ಫೋಟೋಸ್!

ಇದೀಗ ತಮಿಳಿನಲ್ಲಿ "ಭೀಷ್ಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ನಿತಿನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.  ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಸೆಟ್‌ನಲ್ಲಿ ರಶ್ಮಿಕಾ, ನಿತಿನ್ ಮಸ್ತ್ ಮಜಾ ಮಾಡುತ್ತಿದ್ದಾರೆ. 

ಇತ್ತೀಚಿಗೆ ಹೃತಿಕ್ ರೋಷನ್ 'ವಾರ್' ಸಿನಿಮಾ ಬಿಡುಗಡೆಯಾಗಿ ಬಾಲಿವುಡ್‌ನಲ್ಲಿ ಒಂದು ಮಟ್ಟಕ್ಕೆ ಸಂಚಲನ ಮೂಡಿಸಿತ್ತು. ಈ ಚಿತ್ರದ ಗುಂಗೂರು ಹಾಡಿಗೆ ರಶ್ಮಿಕಾ, ನಿತಿನ್ ಸ್ಟೆಪ್ ಹಾಕಿದ್ದಾರೆ. ಇದನ್ನು ಹೃತಿಕ್ ರೋಷನ್‌ಗೆ ಟ್ಯಾಗ್ ಮಾಡಿದ್ದರು. 

ಸಿಕ್ಕಾಪಟ್ಟೆ ಸ್ಲಿಮ್ ಆಗಿರೋ ಗೋಲ್ಡನ್ ಕ್ವೀನ್ ಹೇಗ್ ಕಾಣತ್ತಾರೆ ನೋಡಿ!

ರಶ್ಮಿಕಾ - ನಿತಿನ್ ಡ್ಯಾನ್ಸ್ ನೋಡಿ ಹೃತಿಕ್ ರೋಷನ್ ಫುಲ್ ಖುಷ್ ಆಗಿದ್ದಾರೆ. ಸ್ವೀಟ್, ರಶ್ಮಿಕಾ, ನಿತಿನ್  ಥ್ಯಾಂಕ್ ಯೂ ಸೋ ಮಚ್. ಭೀಷ್ಮ ಸಿನಿಮಾಗೆ ಒಳ್ಳೆಯದಾಗಲಿ! ಎಂದಿದ್ದಾರೆ. 

ಇದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿ, ನಿಮ್ಮ ಬೆಸ್ಟ್ ವಿಶಸ್‌ಗೆ ಧನ್ಯವಾದಗಳು. ಒಂದು ದಿನ ನಿಮ್ಮನ್ನು ಭೇಟಿ ಆಗುತ್ತೇನೆ ಎಂಬ ಭರವಸೆಯಿದೆ. ನಿಮ್ಮ ಜೊತೆ ಒಂದು ದೃಶ್ಯದಲ್ಲಿ ನಟಿಸಬೇಕೆಂಬ ಆಸೆಯಿದೆ' ಎಂದಿದ್ದಾರೆ. 

'ಭೀಷ್ಮ' ಸಿನಿಮಾದಲ್ಲಿ ರಶ್ಮಿಕಾ, ನಿತಿನ್ ನಟಿಸುತ್ತಿದ್ದಾರೆ. ವೆಂಕಿ ಕುದುಮುಲ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಈ ಚಿತ್ರದ ವಿಶೇಷ. ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿ 21 ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. 

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ