ಮದುವೆಯ ವಿಷಯದಲ್ಲಿ ಬಾಲಿವುಡ್‌ನಷ್ಟು ಖತರ್‌ನಾಕ್‌ ಫೀಲ್ಡ್ ಇನ್ನೊಂದಿಲ್ಲ. ಇಲ್ಲಿನ ಖ್ಯಾತನಾಮ ನಾಯಕಿಯರು ಯಾರನ್ನು ಮದುವೆಯಾಗಿದ್ದಾರೆ ಅಂತ ನೋಡಿ. ಎಲ್ಲರೂ ದೊಡ್ಡ ಉದ್ಯಮಪತಿಗಳನ್ನು ಮದುವೆಯಾಗಿದ್ದಾರೆ. ನಟರನ್ನೇ ಮದುವೆಯಾದವರು ಕಡಿಮೆ. ನಟರು ತಮ್ಮ ಸಂಬಂಧಗಳಲ್ಲಿ ದೃಢವಾಗಿ ಯಾವತ್ತೂ ಇರುವುದಿಲ್ಲ, ಸಿನಿಮಾ ಸೆಟ್‌ಗಳನ್ನು ಸೊಗಸಾದ ಇನ್ನೊಬ್ಬ ನಾಯಕಿಯೋ ಸುಂದರಿಯೋ ಸಿಕ್ಕಿದರೆ ಆಕೆಯ ಹಿಂದೆ ಓಡಿಬಿಡುತ್ತಾರೆ ಎನ್ನುತ್ತಾರೆ ಎನ್ನುವುದು ಒಂದು ಕಾರಣ ಇರಬಹುಉದ; ಇನ್ನೊಂದು ಕಾರಣ, ದೊಡ್ಡ ಉದ್ಯಮಿಗಳಲ್ಲಿರುವ ಹಣಕಾಸಿನ ಭದ್ರತೆ. ಅದಿರಲಿ. ಈ ನಟೀಮಣಿಯರು ತಮ್ಮ ಮದುವೆಗಾಗಿ ಇನ್ನೊಬ್ಬರ ದಾಂಪತ್ಯವನ್ನು ಮುರಿದ ಉದಾಹರಣೆಗಳೇ ಹೆಚ್ಚು. ಒಂದೊಂದಾಗಿ ಉದಾಹರಣೆ ನೋಡಿ:

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ೨೦೦೯ರಲ್ಲಿ ಮದುವೆಯಾದರು. ರಾಜ್‌ ಕುಂದ್ರಾ, ಶಿಲ್ಪಾರನ್ನು ತುಂಬಾ ಪ್ರೀತಿಸುತ್ತಾರೆ ಎಂಬುದು ನಿಜ. ಈತ ಮೂಲತಃ ಬ್ರಿಟಿಷ್‌ ಬಿಸಿನೆಸ್‌ಮನ್‌. ೨೦೦೭ರಲ್ಲಿ ಬ್ರಿಟಿಷ್‌ ಟಿವಿ ಶೋ ಬಿಗ್ ಬ್ರದರ್‌ನಲ್ಲಿ ಶಿಲ್ಪಾ ಕಾಣಿಸಿಕೊಂಡ ನಂತರ ಇವರಿಬ್ಬರೂ ಪರಿಚಯವಾದರು. ಪರಿಚಯ ಪ್ರೇಮಕ್ಕೆ ತಿರುಗಿತು. ಇದಕ್ಕೂ ಮೊದಲು ರಾಜ್‌, ಕವಿತಾ ಎಂಬಾಕೆಯನ್ನು ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಮೂರು ವರ್ಷವಾಗಿತ್ತು. ಒಂದು ಹೆಣ್ಣುಮಗು ಜನಿಸಿತು. ಜನಿಸಿ ಮೂರೇ ತಿಂಗಳಲ್ಲಿ ರಾಜ್‌ ಕುಂದ್ರಾ ಕವಿತಾಗೆ ಡೈವೋರ್ಸ್ ನೀಡಿದರು. ಅದಕ್ಕೆ ಕಾರಣ ಶಿಲ್ಪಾ. ಶಿಲ್ಪಾಳ ಪ್ರೇಮದ ಹುಚ್ಚಿನಲ್ಲಿ ಬಿದ್ದ ರಾಜ್, ಬ್ರಿಟನ್‌ ಅನ್ನು ಬಿಟ್ಟು ಮುಂಬಯಿಗೆ ಬಂದು ಸೆಟಲ್‌ ಆದರು. ಶಿಲ್ಪಾ ಫಿಲಂಗಳನ್ನು ಪ್ರೊಡ್ಯೂಸ್ ಮಾಡಿದರು. ಆಕೆಗಾಗಿ ಪ್ರೊಡಕ್ಷನ್ ಹೌಸ್‌ ತೆರೆದರು. ಕವಿತಾ ಕುಂದ್ರಾ, ಮುಂದೊಮ್ಮೆ, ತಮ್ಮ ಡೈವೋರ್ಸಿಗೆ ಶಿಲ್ಪಾಳೇ ಕಾರಣ ಎಂದು ಹೇಳಿಕೊಂಡಿದ್ದಳು.

ಶ್ರೀದೇವಿ
 

ಶ್ರೀದೇವಿ ಮೊದಲು ಬೋನಿ ಕಪೂರ್‌ನ ಮನೆಗೆ ಹೋದದ್ದು ಒಬ್ಬಾಕೆ ಗೆಸ್ಟ್ ಆಗಿ. ಅಲ್ಲಿ ಬೋನಿಯ ಮೊದಲ ಪತ್ನಿ ಮೋನಾ ಜೊತೆಗೆ ಆಪ್ತವಾಗಿ ಫೋಟೋ ಕೂಡಾ ತೆಗೆಸಿಕೊಂಡಿದ್ದಳು. ನಂತರ ಬೋನಿಗೆ ತುಂಬಾ ಕ್ಲೋಸ್ ಆಗಿ ಮೂವ್ ಆಗತೊಡಗಿದಳು. ಶ್ರೀಮಂತ ಬೋನಿ ಕಪೂರ್, ಮೋನಾಳನ್ನೂ ಅವಳ ಮೂಲಕ ತನಗೆ ಹುಟ್ಟಿದ ಇಬ್ಬರು ಮಕ್ಕಳನ್ನೂ ಬಿಟ್ಟು ಶ್ರೀದೇವಿಯ ಹಿಂದೆ ಬಂದುಬಿಟ್ಟ. ಆದರೆ ಮೋನಾ, ಕೊನೆಯವರೆಗೂ ಬೋನಿಯ ಜೊತೆಗೆ ತನಗೆ ಡೈವೋರ್ಸ್ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲು ತಯಾರೇ ಇರಲಿಲ್ಲ. ಶ್ರೀದೇವಿಗೆ ಬೋನಿ ಬಗ್ಗೆ ಎಷ್ಟು ಪೊಸೆಸಿವ್‌ನೆಸ್ ಹಾಗೂ ಅನುಮಾನ ಇತ್ತು ಅಂದರೆ, ಒಮ್ಮೆ ಬೋನಿ ಮೋನಾಳನ್ನೂ ಆಕೆಯ ಇಬ್ಬರು ಮಕ್ಕಳನ್ನೂ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿದ್ದ. ಆತ ಮರಳಿ ಬಂಧ ಮೇಲೆ ಇಡೀ ಅಪಾರ್ಟ್‌ಮೆಂಟ್‌ನವರು ಕೇಳಿಸಿಕೊಳ್ಳುವಂತೆ ಶ್ರೀದೇವಿ ಶರಂಪರ ಕೂಗಾಡಿದಳು. ಶ್ರೀದೇವಿಯ ಅನುಮಾನ ಸಹಿಸಿಕೊಳ್ಳಲು ಬೋನಿಗೆ ಸಾಧ್ಯವಾಗಲಿಲ್ಲವಾ? ಆಕೆಯ ಆಕಸ್ಮಿಕ ಸಾವಿನ ಹಿಂದೆ ಈ ನಿಗೂಢತೆಯೂ ಇದೆ.

ಎಲ್ಲರನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದ ರಿಯಾ.. ಬಾಕಿಯವರಿಗೆ ನೋ ಚಾನ್ಸ್! ...

ರವೀನಾ ಟಂಡನ್‌
 

ರವೀನಾ ಟಂಡನ್‌ಳ ಪತಿ ಅನಿಲ್‌ ತಡಾನಿ ಕೂಡ ಉದ್ಯಮಿ. ಈತನ ಮೊದಲ ಪತ್ನಿ, ರಾಮು ಸಿಪ್ಪಿಯ ಮಗಳು ನತಾಶಾ ಸಿಪ್ಪಿ. ರವೀನಾಳ ಪರಿಚಯ ಆದ ಬಳಿಕ ಈಕೆ ಆತನೊಂದಿಗೆ ತುಂಬಾ ಕ್ಲೋಸ್ ಆದಳು. ರವೀನಾಳನ್ನು ಮದುವೆಯಾಗುವ ಉದ್ದೇಶದಿಂದ ತಡಾನಿ, ನತಾಶಗೆ ಡೈವೋರ್ಸ್ ನೀಡಿದ.

ಹೇಮಾಮಾಲಿನಿ

ಧರ್ಮೇಂದ್ರ ಮತ್ತು ಹೇಮಾಮಾಲಿನಿ ೨೮ ಯಶಸ್ವಿ ಫಿಲಂಗಳನ್ನು ಜೊತೆಯಾಗಿ ಕೊಟ್ಟಿದ್ದಾರೆ. ಇವರಿಬ್ಬರೂ ಡ್ರೀಮ್ ಕಪಲ್ ಅಂತಲೇ ಜನಪ್ರಿಯ. ಧರ್ಮೇಂದ್ರನ ಮೊದಲ ಪತ್ನಿ ಪ್ರಕಾಶ್ ಕೌರ್. ಹೇಮಾಮಾಲಿನಿ ಮತ್ತು ಧರ್ಮೇಂದ್ರ ಮದುವೆಯಾಘಲು ನಿಶ್ಚಯಿಸಿದರಾದರೂ, ಪ್ರಕಾಶ್‌ ಕೌರ್ ವಿಚ್ಛೇದನ ನೀಡಲು ಒಪ್ಪಲಿಲ್ಲ. ಅದಕ್ಕಾಗಿಯೇ ಇಬ್ಬರೂ ಓಡಿಹೋಗಿ, ಧಮ ಬದಲಾಯಿಸಿಕೊಂಡು, ನಂತರ ಮದುವೆಯಾದರು.

ಚೆಂದದ ನಟಿಯರಿಗೆ ಮಾಲ್ಡೀವ್ಸ್‌ ಮರ್ಯಾದೆ;ಹೋಗಿದ್ದು ಸ್ವಂತ ಖರ್ಚಲ್ಲಿ ಅಲ್ಲ? ...

ರಾಣಿ ಮುಖರ್ಜಿ

ರಾಣಿ ಮುಖರ್ಜಿ, ಯಶ್ ಚೋಪ್ರಾ ಅವರ ಫಿಲಂಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಗ, ಯಶ್ ಅವರ ಪುತ್ರ ಆದಿತ್ಯನ ಪರಿಚಯವಾಯಿತು ಪಾರ್ಟಿಗಳಲ್ಲಿ. ನಂತರ ಅದು ಪ್ರೇಮಕ್ಕೆ ತಿರುಗಿತು. ಆದಿತ್ಯ ಮತ್ತು ಪಾಯಲ್ ಚೋಪ್ರಾ ಅವರ ದಾಂಪತ್ಯ ಜೀವನದಲ್ಲಿ ಕಹಿ ಮೂಡಿತು. ನಂತರ ಪಾಯಲ್‌ಗೆ ಡೈವೋರ್ಸ್ ನೀಡಿದ ಆದಿತ್ಯ, ರಾಣಿ ಮುಖರ್ಜಿಯನ್ನು ಮದುವೆಯಾದರು.

ಲಾರಾ ದತ್ತಾ

ಮಹೇಶ್ ಭೂಪತಿ ಹಾಗೂ ಲಾರಾ ದತ್ತಾ ಮದುವೆಯಾದುದು ನಿಮಗೆ ಗೊತ್ತು. ಆದರೆ ಮಹೇಶ್ ಭೂಪತಿ, ಲಾರಾಳನ್ನು ಡೇಟಿಂಗ್ ಮಾಡಲು ಶುರು ಮಾಡಿದಾಗ ಆತನಿನ್ನೂ ತನ್ನ ಮೊದಲ ಪತ್ನಿ ಶ್ವೇತಾ ಜೈಶಂಕರ್‌ಗೆ ಡೈವೋರ್ಸ್ ನೀಡಿರಲಿಲ್ಲ. ಲಾರಾಳನ್ನು ಮದುವೆಯಾಗುವುದು ಉದ್ದೇಶದಿಂದಲೇ ಶ್ವೇತಾಗೆ ಮಹೇಶ್ ಡೈವೋರ್ಸ್ ನೀಡಿದನೆಂದು ಶ್ವೇತಾ ಈಗಲೂ ದೂರುತ್ತಾಳೆ.

ಹಾಟ್‌ ಲುಕ್‌ನಲ್ಲಿ ಮಿಂಚಿದ ಪೂನಂ..! ಬಿಕಿನಿ ಫೋಟೋ ಶೂಟ್ ವೈರಲ್ ...