ಬಾಲಿವುಡ್​ ತಾರೆಯರಾದ ಸನ್ನಿ ಲಿಯೋನ್ ಮತ್ತು ಇಮ್ರಾನ್​ ಹಶ್ಮಿ ಮಗ ಬಿಹಾರದಲ್ಲಿ ಸಿಕ್ಕಿದ್ದು, ಈತನ ಮನೆ ಇರುವುದು ರೆಡ್​ಲೈಟ್​ ಏರಿಯಾದಲ್ಲಂತೆ. ಏನಿದು ಸುದ್ದಿ?  

ಬಾಲಿವುಡ್​ ತಾರೆಯರಾದ ಇಮ್ರಾನ್ ಹಶ್ಮಿ ಮತ್ತು ಸನ್ನಿ ಲಿಯೋನ್ (Sunny Leone) ತನ್ನ ಅಪ್ಪ-ಅಮ್ಮ ಎಂದು ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಫಾರ್ಮ್​ನಲ್ಲಿ ಬರೆದು ಎಲ್ಲರೂ ಶಾಕ್​ಗೆ ಒಳಗಾಗಿರುವ ಘಟನೆ ಬಿಹಾರದಲ್ಲಿ ನಡೆದಿದ್ದು, ಈ ಅರ್ಜಿ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಿಹಾರದ ಧನರಾಜ್ ಮಹತೋ ಕಾಲೇಜ್‌ನಲ್ಲಿರುವ ಕುಂದನ್ ಕುಮಾರ್ ಎಂಬ ವಿದ್ಯಾರ್ಥಿ ಇಂಥದ್ದೊಂದು ಕೆಲಸ ಮಾಡಿದ್ದಾನೆ. ಎರಡನೇ ಬಿಎ ಪರೀಕ್ಷಾ ಪ್ರವೇಶ ಪತ್ರದಲ್ಲಿ ಇರುವ ಪಾಲಕರ ಜಾಗದಲ್ಲಿ ತಾಯಿ ಸನ್ನಿ ಲಿಯೋನ್ ಮತ್ತು ತಂದೆ ಇಮ್ರಾನ್ ಹಶ್ಮಿ ಎಂದು ಬರೆದಿದ್ದಾನೆ. ಇದಲ್ಲದೇ ಮನೆಯ ವಿಳಾಸದ ಸ್ಥಳದಲ್ಲಿ ಬಿಹಾರದ ಪ್ರಖ್ಯಾತ ರೆಡ್ ಲೈಟ್ ಏರಿಯಾದ ಚತುರ್ಭುಜ್ ಸ್ಥಾನ್ ಎಂದು ಉಲ್ಲೇಖಿಸಿದ್ದಾನೆ!

 ಈ ಪ್ರವೇಶ ಪರೀಕ್ಷಾ ಪತ್ರದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 2017ರದ್ದು ಎನ್ನಲಾಗಿದ್ದು, ಮತ್ತೊಮ್ಮೆ ವೈರಲ್ ಆಗಿದೆ. ವಿದ್ಯಾರ್ಥಿಯು ಜಾತಿ ಜಾಗದಲ್ಲಿ ‘ಬಿಸಿ’ (ಹಿಂದುಳಿದ ವರ್ಗ) ಎಂದು ಬರೆದಿದ್ದು, ಧರ್ಮ ‘ಹಿಂದೂ’ ಎಂದು ಉಲ್ಲೇಖಿಸಿದ್ದಾನೆ. ತಂದೆಯ ಹೆಸರು ಮುಸ್ಲಿಂ ಆಗಿದ್ದರೂ ವಿದ್ಯಾರ್ಥಿ ತನ್ನ ಧರ್ಮವನ್ನು ಹಿಂದೂ ಎಂದು ಬರೆದಿರುವುದನ್ನು ವೈರಲ್​ ಪೋಸ್ಟ್​ನಲ್ಲಿ ಕಾಣಬಹುದು. ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದು, ಹಲವರು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ.

ಸೀತಾರಾಮ ಸೀತಾಳ ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ವೈರಲ್​: ಸುಸ್ತಾದ ಫ್ಯಾನ್ಸ್​!

ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ರೆಡ್​ಲೈಟ್​ ಏರಿಯಾದಲ್ಲಿ ಸನ್ನಿ ಮತ್ತು ಇಮ್ರಾನ್ ಮದ್ವೆಯಾಗಿದ್ದು ಗೊತ್ತೇ ಇರಲಿಲ್ಲ ಎಂದು ಒಬ್ಬರು ಬರೆದಿದ್ದರೆ, ಈ ಆಸಾಮಿಗೆ ಪ್ರಚಾರದಲ್ಲಿರುವುದು ಹೇಗೆ ಎನ್ನುವುದು ಗೊತ್ತು, ಅದಕ್ಕೇ ಹೀಗೆ ಮಾಡಿದ್ದಾನೆ ಎಂದಿದ್ದಾರೆ ಮತ್ತೊಬ್ಬರು. ಬಿಹಾರದಲ್ಲಿ ಯಾವುದೂ ಅಸಾಧ್ಯವಲ್ಲ, ಇಲ್ಲಿ ಏನು ಬೇಕಾದರೂ ಆಗಬಹುದು ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬ, ಜಾನಿ ಸಿಂಗ್ ಇವನ ಅಜ್ಜ ಮತ್ತು ಮಿಯಾ ಖಲೀಫಾ ಇವನ ಅಜ್ಜಿಯಾಗಿರಬಹುದು ಎಂದು ತಮಾಷೆ ಮಾಡಿದ್ದಾರೆ. ಈತ ನೆಪೋಟಿಸಂ ವಿದ್ಯಾರ್ಥಿ, ನಾವು ಈತನ ಪರವಾಗಿ ಇದ್ದೇವೆ ಎಂದು ಮತ್ತೆ ಕೆಲವರು ಕಾಲೆಳೆದಿದ್ದಾರೆ. 

ಈ ಈ ಕಿತಾಪತಿ ಮಾಡಿರುವ ವಿದ್ಯಾರ್ಥಿ ಕುರಿತು ಹೇಳುವುದಾದರೆ, ಕುಂದನ್ ಕುಮಾರ್ ಬಿಹಾರದ ಬಾಬಾ ಸಾಹೇಬ್ ಭೀಮ್‌ರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 2017ರಿಂದ 2020ರ ಅವಧಿಯಲ್ಲಿ ಈ ವ್ಯಕ್ತಿ ಈ ವಿಶ್ವವಿದ್ಯಾಲಯಕ್ಕೆ ಸೇರುವ ಧನರಾಜ್ ಮಹತೋ ಕಾಲೇಜ್‌ನಲ್ಲಿ ಬಿಎ ವ್ಯಾಸಂಗವನ್ನು ಮಾಡುತ್ತಿದ್ದ. ಅಷ್ಟಕ್ಕೂ, ಪರೀಕ್ಷಾ ದಾಖಲೆಯಲ್ಲಿ ಬಾಲಿವುಡ್ ತಾರೆಯರ ಹೆಸರು ಬರೆಯುವುದು ಇದೇ ಮೊದಲೇನಲ್ಲ. ಇದರಲ್ಲಿ ಹೆಚ್ಚು ಕಾಣಿಸಿಕೊಳ್ತಿರೋದು ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಎನ್ನುವುದೇ ವಿಶೇಷ. ಕಳೆದ ಫೆಬ್ರವರಿಯಲ್ಲಿ ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಹೆಸರು ಬಂದಿತ್ತು. ಪರೀಕ್ಷಾ ಕೇಂದ್ರವನ್ನು ಕನೌಜ್‌ನ ಶ್ರೀಮತಿ ಸೋನೆಶ್ರೀ ಸ್ಮಾರಕ ಬಾಲಕಿಯರ ಕಾಲೇಜು ಎಂದು ಗುರುತಿಸಲಾಗಿತ್ತು.

ಶೂಟಿಂಗ್​ ವೇಳೆ ಭಾರಿ ಅವಘಡ: ನಟಿ ತುಳಸಿ ಕೂದಲೆಳೆಯಲ್ಲಿ ಪಾರು! ಶಾಕಿಂಗ್​ ವಿಡಿಯೋ ವೈರಲ್​