ಬಾಲಿವುಡ್‌ನಲ್ಲಿ ಡ್ರಗ್ಸ್ ದಂಧೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಧರ್ಮಾ ಪ್ರೊಡಕ್ಷನ್ ಸಂಸ್ಥೆಯ ಮಾಜಿ ಉದ್ಯೋಗಿ ಕ್ಷಿತಿಜ್ ರವಿ ಅರೆಸ್ಟ್‌ ಆದ ನಂತರ ಇನ್ನಿತರ ಸೆಲೆಬ್ರಿಟಿಗಳು ಆತಂಕದಲ್ಲಿದ್ದಾರೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಬಾಲಿವುಡ್‌ನಲ್ಲಿ ದೊಡ್ಡ ತಿರುವಿಗೆ ದಾರಿ ಮಾಡಿಕೊಟ್ಟಿದೆ. ಸುಶಾಂತ್ ಮಾದಕ/ ಡ್ರಗ್ಸ್ ಸೇವಿಸುತ್ತಿದ್ದ ಎಂದು ತಿಳಿದು ಬಂದ ಕಾರಣ ವಿಚಾರಣೆ ಆರಂಭವಾಗಿದ್ದು ಈಗ ಬಾಲಿವುಡ್‌ ಸ್ಟಾರ್ ನಟಿಯರ ಹೆಸರು ಬಯಲು ಮಾಡುವ ಮಟ್ಟಕ್ಕೆ ತಿರುವು ಪಡೆದುಕೊಂಡಿದೆ.

ಸ್ಟಾರ್‌ ನಟಿಯರ ನಂತರ ಕರಣ್‌ ಆಪ್ತನಿಗೆ NCB ಸಮನ್ಸ್, ಕೂಡಲೇ ಬನ್ನಿ! 

ಕರಣ್ ಜೋಹರ್‌ ಹಾಗೂ ಧರ್ಮಾ ಪ್ರೋಡಕ್ಷನ್ ಸಂಸ್ಥೆಯ ಮಾಜಿ ಉದ್ಯೋಗಿ ಕ್ಷಿತಿಜ್ ರವಿ ಪಾರ್ಟಿ ಆಯೋಜಿಸುತ್ತಿದ್ದರು ಸ್ಟಾರ್ ನಟ-ನಟಿಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ವಿಚಾರಣೆ ಆರಂಭಿಸಿದ ಎನ್‌ಸಿಬಿ ಅಧಿಕಾರಿಗಳು ಈಗ ಕ್ಷಿತಿಜ್ ರವಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ನನಗೂ ಕ್ಷಿತಿಜ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಕರಣ್ ಜೋಹರ ಈಗ ಆತಂಕದಲ್ಲಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಕ್ಷಿತಿಜ್ ನಿವಾಸ ರೈಡ್ ಮಾಡಲಾಗಿದ್ದು marijiuana ಹಾಗೂ weed ಇದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕರಣ್ ಆಪ್ತನ ಮನೆಯಲ್ಲಿ ಸಿಕ್ತು ಗಾಂಜಾ..! 4 ಟಾಪ್ ನಟರ ಹೆಸರು ಬಾಯ್ಬಿಟ್ಟ ರಾಕುಲ್ 

ಇನ್ನು ನಿನ್ನೆ ವಿಚಾರಣೆಯಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ತಪ್ಪು ಒಪ್ಪಿಕೊಂಡಿದ್ದಾರೆ. ಮ್ಯಾನೇಜರ್ ಕರೀಷ್ಮಾಳ ಜೊತೆ ಮಾಡಿದ ಚಾಟ್‌ ಬಗ್ಗೆ ಹೇಳಿದ್ದಾರೆ. ರಾಕುಲ್, ಸಾರಾ ಹಾಗೂ ಶ್ರದ್ಧಾ ಕಪೂರ್ ವಿಚಾರಣೆಯಲ್ಲಿ ಹೇಗಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ ಆದರೆ ಕ್ಷಿತಿಜ್ ಬಂಧನದಿಂದ ಬಾಲಿವುಡ್‌ ಕಂಗಾಲು ಆಗಿದೆ.

"