Asianet Suvarna News

ಸ್ಟಾರ್‌ ನಟಿಯರ ನಂತರ ಕರಣ್‌ ಆಪ್ತನಿಗೆ  NCB ಸಮನ್ಸ್,  ಕೂಡಲೇ ಬನ್ನಿ!

ಬಾಲಿವುಡ್ ನಲ್ಲಿ ಡ್ರಗ್ಸ್ ಘಾಟು/ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌ ಗೆ ನೋಟಿಸ್/  ಇದೀಗ ಕರಣ್ ಜೋಹರ್‌ ಮೇಲೆ ಕಣ್ಣು/ ಕರಣ್ ಜೋಹರ್ ಡ್ರಾಮಾ ಪ್ರೊಡಕ್ಷನ್ ಸಿಬ್ಬಂದಿ ಕ್ಷಿಜಿಜ್ ರವಿಪ್ರಸಾದ್‌ಗೆ ಸಮನ್ಸ್

NCB summons Kshitij Raviprasad of Karan Johar s Dharma Productions drugs probe mah
Author
Bengaluru, First Published Sep 24, 2020, 5:18 PM IST
  • Facebook
  • Twitter
  • Whatsapp

ಮುಂಬೈ( ಸೆ. 24)  ಸುಶಾಂತ್ ಸಿಂಗ್ ಸಾವು ಮತ್ತು ಡ್ರಗ್ಸ್ ಪ್ರಕರಣ ವಿಚಾರಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)  ಕರಣ್ ಜೋಹರ್ ಡ್ರಾಮಾ ಪ್ರೊಡಕ್ಷನ್ ಸಿಬ್ಬಂದಿ ಕ್ಷಿಜಿಜ್ ರವಿಪ್ರಸಾದ್‌ಗೆ ಸಮನ್ಸ್ ನೀಡಿದೆ. 

ನಟಿ ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್‌ಗೆ ಬುಧವಾರ ಸಮನ್ಸ್ ನೀಡಲಾಗಿತ್ತು.

"

ದೀಪಿಕಾ, ಸಾರಾ, ರಾಕುಲ್ ಸೇರಿ ಮತ್ತೊಬ್ಬ ನಟಿಗೆ ಸಮನ್ಸ್

ಕ್ಷಿತಿಜ್ ಶನಿವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ತಿಳಿಸಿದೆ.  ರಾಕುಲ್ ಗೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು ಅವರ ಕಾನೂನು ತಂಡ ಸಮನ್ಸ್  ಬಂದಿಲ್ಲ ಎಂದು ಹೇಳಿತ್ತು. ನಟಿ ರಿಯಾ ಚಕ್ರವರ್ತಿ ವಿಚಾರಣೆ ಮುಂದುವರಿದಿದ್ದು ಒಂದಾದ ಮೇಲೆ ಒಂದು ಮಾಹಿತಿ ಹೊರಗೆ ಬರುತ್ತಿದೆ. 

ಬಾಲಿವುಡ್ ಎರಡು ವರ್ಗವಾಗಿದ್ದು  ಡ್ರಗ್ಸ್ ಘಾಟಿನಲ್ಲಿ ದೊಡ್ಡವರ ಮಕ್ಕಳು ಇದ್ದಾರೆ ಎಲ್ಲರ ವಿಚಾರಣೆಯಾಗಬೇಕು ಎಂದು ಒಂದು ವರ್ಗ ಮೊದಲಿನಿಂದಲೂ ಒತ್ತಾಯ ಮಾಡಿಕೊಂಡೆ ಬಂದಿದೆ.  ನಿರ್ದೇಶಕ ಕರಣ್ ಜೋಹರ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದವರ ವಿಚಾರಣೆಯಾಗಬೇಕು ಎಂಬ ಒತ್ತಾಯವೂ ಬಂದಿತ್ತು.

Follow Us:
Download App:
  • android
  • ios