ಬಾಲಿವುಡ್‌ ಡಿಂಪಲ್‌ ಕ್ವೀನ್‌ ದೀಪಿಕಾ ಪಡುಕೋಣೆ ಅಂದ್ರೆ ಯಾರಿಗೆ ತಾನೆ ಇಷ್ಟವಾಗೋಲ್ಲ ಹೇಳಿ? ಅದರಲ್ಲೂ ಆಕೆಯನ್ನು ವಿಭಿನ್ನ ವೇಷ-ಭೂಷಣದಲ್ಲಿ ನೋಡೋದು ಅಂದ್ರೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟ. ಅದಕ್ಕೆ ಸರಿಯಾಗಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸುವ ದೀಪಿಕಾ ಡ್ರೆಸ್ ಸೆನ್ಸ್ ಎಂಥವರಿಗಾದರೂ ಮುದ ನೀಡುವಂತೆ ಇದ್ದಿದ್ದು ಸುಳ್ಳಲ್ಲ. 

ದೀಪಿಕಾ ಫ್ರಾಕ್‌ನಿಂದ ಟೀ ಶರ್ಟ್ ಹೊಲಿಸ್ಕೊಂಡ್ರಾ ರಣವೀರ್?

ಟಾಪ್‌ ಸೆಲೆಬ್ರಿಟಿ ಆದ್ರೂ ಲೈಫಲ್ಲಿ ಸಿಂಪಲ್‌ ಆಗಿದ್ದ ದೀಪಿಕಾ, ರಣವೀರ್‌ ಸಿಂಗ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಯಾಕೋ ವಿಚಿತ್ರವಾಗಿ ಡ್ರೆಸ್‌ ಹಾಕೊಳ್ಲಿಕ್ಕೆ ಶುರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಕಾರ್ಯಕ್ರವೊಂದರಲ್ಲಿ ಪಾಲ್ಗೊಂಡ ದೀಪಿಕಾ ಡ್ಯಾನ್ಸ್‌ ಡ್ರೆಸ್‌ ರೀತಿಯ ಗೋಲ್ಡ್‌ ಕ್ರಾಪ್‌ ಟಾಪ್‌ ಹಾಗೂ ಶೈನಿಂಗ್ ಬ್ಲ್ಯಾಕ್‌ ಪ್ಯಾಂಟ್‌ ಧರಿಸಿದ್ದರು. ಬಿಡ್ತಾರಾ ನೆಟ್ಟಿಗರು? ಕಾಳೆಲೆದಿದ್ದಾರೆ.

ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!

ಈ ಹಿಂದೆ ರಣವೀರ್‌ ತಮ್ಮ ಸಿನಿಮಾ ಪ್ರಚಾರದಲ್ಲಿ ಗೋಲ್ಡ್‌ ಫ್ಯಾಂಟ್‌ ಮತ್ತು ಶರ್ಟ್‌ ಧರಿಸಿ ಟ್ರೋಲ್‌ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೀಪಿಕಾ ಫೋಟೋಗೂ ಇದೀಗ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. 'ಚಾಕೋಲೆಟ್‌ ತಿಂದ್ಮೇಲೆ ರಾಪರ್‌ ಯಾಕೆ ವೇಸ್ಟ್‌ ಮಾಡೋದು ಅಂತ ಡ್ರೆಸ್‌ ಮಾಡಿಸಿಕೊಂಡಿದ್ದೀರಾ ಇಬ್ರೂ? ','ಯಾವ ಸರ್ಕಸ್‌ನಿಂದ ತಂದಿದ್ದೀರಾ ಈ ಡ್ರೆಸ್? ಚೋಕರ್‌ ನಿಮ್ಮಗಿಂತ ಸೂಪರ್‌ ಅಗಿ ಕಾಣಿಸುತ್ತಾರೆ' ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜನರ ಬಾಲಿವುಡ್ ಮಂದಿಯ ಡ್ರೆಸ್ ಹೇಗೆ ಫಾಲೋ ಮಾಡುತ್ತಾರೆಂಬುವದುಕ್ಕೆ ಇದೇ ಸಾಕ್ಷಿ.

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ