ದೀಪಿಕಾ- ರಣವೀರ್‌ ಸ್ಟೈಲಿಗೆ ಅಭಿಮಾನಿಗಳು ಫುಲ್ ಗರಂ. ನಿಜವಾಗಲೂ ರಣವೀರ್‌ ಸಿಂಗ್ ಪತ್ನಿ ಡ್ರೆಸ್‌ ಮೇಲೆ ಕಣ್ಣಿಟ್ರಾ? ಆದ ಅನಾಹುತವಾದ್ರೂ ಏನು ಇಲ್ಲಿದೆ ನೋಡಿ.... 

ಬಾಲಿವುಡ್‌ ಡಿಫರೆಂಟ್‌ ಕಪಲ್‌ ಅಂದ್ರೆ ಡಿಂಪಲ್ ಕ್ವೀನ್‌ ದೀಪಿಕಾ ಪಡುಕೋಣೆ ಮತ್ತು ಲವರ್‌ ಬಾಯ್ ರಣವೀರ್‌ ಸಿಂಗ್. ಅದರಲ್ಲೂ ಈ ಜೋಡಿ ಅಯ್ಕೆ ಮಾಡುವ ಚಿತ್ರಗಳು ಇನ್ನೂ ವಿಭಿನ್ನ. 

ಬಿ-ಟೌನ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರ '83'. ರಣವೀರ್‌ ಸಿಂಗ್‌ ಕ್ರಿಕೆಟರ್‌ ಕಪಿಲ್‌ ದೇವ್‌ ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್‌‌ನಲ್ಲಿ ಈ ಚಿತ್ರ ತೆರೆ ಕಾಣುವ ಸಾಧ್ಯತೆಗಳಿದ್ದು ಪ್ರೀ-ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಈಗಿಂದಲ್ಲೇ ಪ್ರಚಾರ ಶುರು ಮಾಡಿಕೊಂಡಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ರಣವೀರ್‌ ಸಿಂಗ್‌ ಡ್ರೆಸಿಂಗ್‌ ಹೆಚ್ಚು ಗಮನ ಸೆಳೆಯುತ್ತಿದೆ.

ಮೈಸೂರ್‌ ಪಾಕ್‌, ಚಿಪ್ಸ್ ಇಲ್ಲದೇ ಮನೆಗೆ ಬರಬೇಡ: ಗಂಡನಿಗೆ ದೀಪಿಕಾ ತಾಕೀತು!

ಹೌದು! ಪಿಂಕ್ ಆ್ಯಂಡ್ ಗೋಲ್ಡ್‌ ಪ್ಯಾಂಟ್‌ಗೆ ವಿತ್‌ ಬ್ಲೂ ಆ್ಯಂಡ್ ವೈಟ್‌ ಡಾಟ್‌ ಇರುವ ಪೋಲ್ಕಾ ಶರ್ಟ್‌ ಧರಿಸಿದ್ದಾರೆ. ಇನ್ನು ಡಿಫರೆಂಟ್ ಅಂದ್ರೆ ಶರ್ಟ್‌ ತರಾನೇ ಟೋಪಿಯನ್ನೂ ಧರಿಸಿದ್ದಾರೆ. ಈ ಫೋಟೋವನ್ನು ಸ್ವತಃ ರಣವೀರ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ದೀಪಿಕಾ ಟಾಪ್‌ಗೆ ಹೋಲಿಸಿದ್ದಾರೆ.

Scroll to load tweet…

ರಣಬೀರ್‌ ಸಿಂಗ್‌ ಹಾಗೂ ದೀಪಿಕಾ ಸೂಪರ್‌ ಹಿಟ್ ಚಿತ್ರ 'ತಮಾಷ' ಪ್ರಚಾರದ ವೇಳೆ ದೀಪಿಕಾ ಇಂಥದ್ದೇ ಪೋಲ್ಕಾ ಫ್ರಾಕ್‌ ಧರಿಸಿದ್ದಾರೆ. ಈ ಎರಡೂ ಫೋಟೋಗಳನ್ನು ಅಭಿಮಾನಿಗಳು ಹೋಲಿಸಿ ಟ್ರೋಲ್‌ ಮಾಡಿದ್ದಾರೆ. ಇನ್ನು ಕೆಲವರು 'Deepika ke kapde pehan liya' ಎಂದೂ ಕಾಮೆಂಟ್‌ ಮಾಡಿದ್ದಾರೆ.

ರಣವೀರ್ ಡ್ರೆಸ್ ಸೆನ್ಸ್ ಹಲವರಿಗೆ ಇಷ್ಟವಾಗೋಲ್ಲ. ಅಂಥದ್ರಲ್ಲಿ ಈ ರೀತಿ ಡ್ರೆಸ್ ಹಾಕ್ಕೊಂಡ್ರಂತೂ ಗೋವಿಂದ. ಬಿಡ್ತಾರಾ ಫ್ಯಾನ್ಸ್? ಜನರು ಹಿಗ್ಗಾಮುಗ್ಗಾ ಕಮೆಂಟ್ ಮಾಡಿದ್ದಾರೆ. 

Scroll to load tweet…