ದೀಪಿಕಾ ಪಡುಕೋಣೆ ಈಗ ಕ್ರಿಯಾಶೀಲವಾಗಿದ್ದಾರೆ. ಗಂಡ ರಣವೀರ್‌ ಸಿಂಗ್‌ ಜೊತೆಗೆ ಹ್ಯಾಪಿಯಾಗಿ, ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಾ, ಸಭೆ, ಸಮಾರಂಭಗಳಲ್ಲಿ ಭಾಗಿಯಾಗುತ್ತಾ ನಾಲ್ಕಾರು ಮಂದಿಗೆ ಬುದ್ಧಿ ಹೇಳುತ್ತಾ ಇದ್ದಾರೆ.

ಆದರೆ ಒಂದು ಕಾಲದಲ್ಲಿ ದೀಪಿಕಾ ಖಿನ್ನತೆಗೆ ಒಳಗಾಗಿ ಅದರಿಂದ ಹೊರಬರಲು ಸಾಕಷ್ಟುಸಮಯ ತೆಗೆದುಕೊಂಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಸ್ಥಿತಿಗೆ ಕಾರಣರಾದವರ ಹೆಸರು ಹೇಳದೇ ಕೆಲವು ಕಹಿ ನೆನಪುಗಳನ್ನು ಹೊರಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಷ್ಟೆಲ್ಲಾ ಬ್ರ್ಯಾಂಡ್ ರಾಯಭಾರಿ ದೀಪಿಕಾ ಆಗಿದ್ದಾಳೆಂದರೆ IT ಕಥೆ?

ಹಿಂದೆ ರಣಬೀರ್‌ ಕಪೂರ್‌ ಮತ್ತು ದೀಪಿಕಾ ನಡುವೆ ರಿಲೇಷನ್‌ಶಿಪ್‌ ಇತ್ತು. ಒಂದು ಸಂದರ್ಭದಲ್ಲಿ ಅದು ಮುರಿದು ಹೋಗಿದ್ದರೂ ಮತ್ತೆ ಈ ಜೋಡಿ ಒಂದಾಗಿತ್ತು. ಆಗಲೂ ಇದು ಸರಿಯಾಗದೇ ನಂತರ ಶಾಶ್ವತವಾಗಿ ಇಬ್ಬರೂ ದೂರಾಗಿದ್ದರು. ಆ ಕುರಿತು ಹೆಸರು ಹೇಳದೇ ದೀಪಿಕಾ ಹೇಳಿದ್ದಿಷ್ಟು.

* ಸೆಕ್ಸ್‌ ಎಂದರೆ ಕೇವಲ ದೈಹಿಕ ಸಂಗತಿಯಲ್ಲ. ಅದರೊಂದಿಗೆ ಭಾವನಾತ್ಮಕ ಬೆಸುಗೆಯೂ ಇರುತ್ತದೆ.

* ನಾನು ಒಬ್ಬರಿಗೆ ಎರಡೆರಡು ಅವಕಾಶ ನೀಡಿ ತಪ್ಪು ಮಾಡಿದೆ. ಅದೆಲ್ಲಾ ನೆನೆದರೆ ನಾನು ಫäಲ್‌ ಎನ್ನಿಸುತ್ತದೆ.

ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!

* ನಾನು ಎಂದಿಗೂ ನಂಬಿದ ಸಂಬಂಧಗಳಿಗೆ ಮೋಸ ಮಾಡುವುದಿಲ್ಲ. ನಂಬಿದರೆ ಪೂರ್ಣವಾಗಿ ನಂಬುವೆ. ಇಲ್ಲವೇ ಒಂಟಿಯಾಗಿಯೇ ಇರುವೆ.