ಬಾಲಿವುಡ್‌ ಒಂದು ವಿಚಿತ್ರಗಳ ಸಂತೆ. ಅಲ್ಲಿ ಆಗುವ ಮದುವೆಗಳು ಒಂಥರಾ ಈ ಜಗತ್ತಿನ ಹಾಗೆಯೇ ವಿಚಿತ್ರವಾಗಿರುತ್ತವೆ. ಇಲ್ಲಿ ಯಾರೆಂದರೆ ಯಾರನ್ನೋ ಮದುವೆ ಆದವರಿದ್ದಾರೆ. ತಮ್ಮ ಫ್ಯಾನ್‌ಗಳನ್ನೇ ಮದುವೆಯಾದ ತಾರೆಯರೂ ಬಹಳ ಇದ್ದಾರೆ. ಇವರಲ್ಲಿ ಹೀರೋಗಳೂ, ಹೀರೋಯಿನ್‌ಗಳೂ ಸಾಕಷ್ಟು. ಮುಂದೆ ದಂಪತಿಗಳಾದ ಮೇಲೆ ವರ್ಷಗಟ್ಟಲೆಯಿಂದ ಜೊತೆಯಾಗಿರುವವರೂ, ಡೈವೋರ್ಸ್ ಮಾಡಿ ಹೋದವರೂ ಇದ್ದಾರೆ. ಹೀಗೆ ಫ್ಯಾನ್‌ಗಳನ್ನೇ ಮದುವೆಯಾದವರು ಯಾರು ಬಲ್ಲಿರಾ?

ಅಮೀರ್ ಖಾನ್
ಅಮೀರ್ ಖಾನ್‌ನ ಈಗಿನ ಪತ್ನಿ ಕಿರಣ್ ರಾವ್. ಈಕೆ ಲಗಾನ್ ಚಿತ್ರದ ಶೂಟಿಂಗ್ ವೇಳೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಳು. ಅಮೀರ್‌ನ ಅಭಿಮಾನಿ ಹಾಗೂ ನಿರ್ದೇಶನದಲ್ಲಿ ಸದಾ ಆತನ ಜೊತೆಗಾತಿಯಾಗಿದ್ದಳು. ಅಮೀರ್ ಮೊದಲ ಪತ್ನಿಗೆ ಡೈವೋರ್ಸ್ ಕೊಟ್ಟ ಬಳಿಕ ಈತನನ್ನು ಮದುವೆಯಾದಳು. 

ನಮ್ಮ ಧರ್ಮ ಗೌರವಿಸುತ್ತೇನೆ ಇದು ತಮಾಷೆಗಾಗಿ; ಸರಸ್ವತಿ ಅವತಾರದಲ್ಲಿ ರಶ್ಮಿಕಾ ಮಂದಣ್ಣ! ...

ದಿಲೀಪ್ ಕುಮಾರ್
ಈತನ ಪತ್ನಿ ಸಾಯಿರಾ ಬಾನು, ಸಣ್ಣಂದಿನಿಂದಲೂ ದಿಲೀಪ್ ಕುಮಾರ್‌ನ ಫಿಲಂಗಳನ್ನು ನೋಡಿ ಆತನ ಅಭಿಮಾನಿಯಾಗಿದ್ದಳು. ಚೆಲುವೆಯಾಗಿದ್ದ ಈಕೆ ಮುಂದೆ ಇವನನ್ನೇ ಮದುವೆಯಾದಳು. ಆಗ ಈಕೆಗೆ ೨೨ ವರ್ಷ, ದಿಲೀಪ್‌ ಕುಮಾರ್‌ಗೆ ೪೫ ವರ್ಷ ವಯಸ್ಸು. 

ಶಿಲ್ಪಾ ಶೆಟ್ಟಿ
ರಾಜ್‌ ಕುಂದ್ರಾ, ಶಿಲ್ಪಾ ಶೆಟ್ಟಿಯನ್ನು ಬಾಜಿಗರ್ ಫಿಲಂನ ದಿನಗಳಿಂದ ಆರಾಧಿಸುತ್ತ ಬಂದವನು. ಈತನಿಗೊಂದು ಮದುವೆಯೂ ಆಗಿತ್ತು. ಆದರೆ ಈತ ಬಾಲಿವುಡ್ ಪಾರ್ಟಿಗಳಿಗೆ ಬರಲು ಶುರು ಮಾಡಿದಾಗಿನಿಂದ ಶಿಲ್ಪಾಳ ಪರಿಚಯವಾಯಿತು. ಆಕೆಯ ಬಗೆಗಿದ್ದ ಗುಪ್ತ ಆರಾಧನೆ ಪ್ರೇಮವಾಗಿ, ನಂತರ ವಿವಾಹಕ್ಕೆ ತಿರುಗಿತು. ಶಿಲ್ಪಾಳಿಗಾಗಿ ಆತ ಒಂದು ಫಿಲಂ ಪ್ರೊಡಕ್ಷನ್ ಹೌಸನ್ನೂ ಆರಂಭಿಸಿದ.

ಕಿಚ್ಚ ಸುದೀಪ್ ಜೊತೆಗೆ ಜಿಮ್‌ಗೆ ಬಂದಿದ್ದು ಯಾರು ಗೊತ್ತಾ? ...
ರಾಜೇಶ್ ಖನ್ನಾ
ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್‌ಗಿಂತಲೂ ಮೊದಲೇ ಬಾಲಿವುಡ್ ಕಂಡ ಸೂಪರ್ ಸ್ಟಾರ್. ಡಿಂಪಲ್ ಕಪಾಡಿಯಾ ಈತನನ್ನು ಹದಿನಾರರ ವಯಸ್ಸಿನಿಂದಲೇ ನೋಡಿ ಆರಾಧಿಸಿ ಪ್ರೀತಿಸಿದ್ದಳು. ಖನ್ನಾನನ್ನು ಭೇಟಿಯಾದಾಗ ಆಕೆಗಿನ್ನೂ ಹದಿನಾರು ಹಾಗೂ ತನ್ನ ಮೊದಲ ಫಿಲಂನಲ್ಲೂ ಇನ್ನೂ ನಟಿಸಿರಲಿಲ್ಲ. ಎಂಟು ವರ್ಷಗಳ ದಾಂಪತ್ಯದ ನಂತರ ಡಿಂಪಲ್ ಬೇರೆಯಾದರೂ, ಖನ್ನಾ ಕೊನೆಯುಸಿರು ಎಳೆಯುವಾಗ ಆತನ ಬಳಿಯಲ್ಲೇ ಇದ್ದಳು.

ಜಿತೇಂದ್ರ
ಒಂದು ಕಾಲದಲ್ಲಿ ಶ್ರೀದೇವಿಯ ಜೊತೆ ಈತನ ಜೊತೆಗಾರಿಕೆ ಎಲ್ಲರ ಹೃದಯದಲ್ಲಿ ಕಿಚ್ಚೆಬ್ಬಿಸಿತ್ತು. ಬ್ರಿಟಿಷ್ ಏರ್‌ವೇಸ್‌ನಲ್ಲಿ ಏರ್‌ಹೋಸ್ಟೆಸ್ ಆಗಿದ್ದ ಶೋಭಾ ಕಪೂರ್ ಈತನ ಬೆನ್ನು ಬಿದ್ದಿದ್ದಳು. ನಂತರ ಇವರಿಬ್ಬರೂ ಪ್ರೇಮಿಸಿ ಮದುವೆಯಾದರು. 

ನೇಹಾ To ನೀನಾ: ಮದ್ವೆಗೂ ಮೊದಲೇ ಪ್ರೆಗ್ನೆಂಟ್ ಆದವರಿವರು..! ...

ಇಶಾ ಡಿಯೋಲ್
ಹೇಮಾಮಾಲಿನಿಯ ಮಗಳು ಇಶಾ ಡಿಯೋಲ್ ಮದುವೆಯಾಗಿರುವುದು ತನ್ನ ಫ್ಯಾನ್ ಆದ ಭರತ್ ತಕ್ತಾನಿ ಎಂಬಾತನನ್ನು. ಇಬ್ಬರೂ ಸ್ಕೂಲ್ ಸಹಪಾಠಿಗಳು. ಆದರೆ ಇಶಾ ಬಾಲಿವುಡ್ ಸೇರಿಕೊಂಡ ನಂತರ, ಆಕೆಯನ್ನು ಮದುವೆಯಾಗುವ ಆಸೆಯನ್ನೇ ಆತ ಕೈಬಿಟ್ಟಿದ್ದನಂತೆ. ಈತ ಬ್ಯುಸಿನೆಸ್ ಕುಟುಂಬದಿಂದ ಬಂದವನು. ಆದರೆ ಇಶಾಳ ದೊಡ್ಡ ಫ್ಯಾನ್.

ವಿವೇಕ್ ಒಬೆರಾಯ್
ವಿವೇಕ್ ಒಬೆರಾಯ್ ತನ್ನ ವೃತ್ತಿ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾನೆ. ಆದರೆ ಆತನ ಪತ್ನಿಯಾದ ಪ್ರಿಯಾಂಕ ಆಳ್ವಾ ಮೊದಲಿನಿಂದಲೂ ಅವನ ಫ್ಯಾನೇ ಆಗಿದ್ದವಳು. ಆದರೆ ಇಬ್ಬರದೂ ಅರೇಂಜ್ಡ್ ಮ್ಯಾರೀಜ್. ಎರಡೂ ಕುಟುಂಬಗಳೂ ಮೊದಲಿನಿಂದಲೂ ಮಿತ್ರರಾಗಿದ್ದವು.