ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಫಿಟ್ನೆಸ್‌, ಫುಡ್‌ ಹಾಗೂ ಸ್ಟೈಲಿಶ್‌ ಫೋಟೋ ಹಾಗೂ ವಿಡಿಯೋಗಳ ಬಗ್ಗೆ ಶೇರ್ ಮಾಡಿಕೊಳ್ಳುತ್ತಿದ್ದರು. ತಮ್ಮ ಇನ್‌ಸ್ಟಾ ಫಾಲೋವರ್ಸ್‌ಗೆ ಬೋರ್ ಆಗಬಾರದು ಎಂಬ ಕಾರಣಕ್ಕೆ ಫನ್ನಿ ಶೂಟಿಂಗ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ಆಂಟಿಸಿಪೆಟರಿ ಬೇಲ್‌ ಹಾಕಿದ್ದಾರೆ ಗೊತ್ತಾ?

ಬಾದ್‌ ಶಾ ಜೊತೆ ರಶ್ಮಿಕಾ ಬಾಲಿವುಡ್ ಎಂಟ್ರಿ..! 

ರಶ್ಮಿಕಾ ವಿಡಿಯೋ:

ರಶ್ಮಿಕಾ ಮಂದಣ್ಣ ಶೇರ್ ಮಾಡಿಕೊಂಡಿರುವ ವಿಡಿಯೋ ನಿಖರವಾಗಿ ಯಾವ ಚಿತ್ರದ್ದು ಎಂದು ತಿಳಿದಿಲ್ಲವಾದರೂ ಕಾಮೆಂಟ್‌ನಲ್ಲಿ ನೆಟ್ಟಿಗರು 'ಚಾಲೋ' ಚಿತ್ರದ್ದು ಎಂದಿದ್ದಾರೆ.  'ನಿಮಗೆ ಜ್ಞಾಪಕ ಇದ್ಯಾ ಈ ಸೀನ್' ಎಂದು ಪ್ರಶ್ನಿಸಿರುವ ರಶ್ಮಿಕಾ ಮಂದಣ್ಣ ಡಬಲ್ ಸ್ಟಾರ್ ಹಾಕಿ ಒಂದು ಡಿಸ್ಕ್ಲೇಮರ್  ಹಾಕಿದ್ದಾರೆ. 

'ನಾನು ನಮ್ಮ ಸಂಪ್ರದಾಯ ಹಾಗೂ ಧರ್ಮ ವನ್ನು ಅಗೌರವಿಸುತ್ತಿಲ್ಲ. ದೇವರಾಗಲಿ ಯಾವುದೆ ವಿಚಾರವಾಗಲಿ ತಪ್ಪು ರೀತಿಯಲ್ಲಿ ನೋಡಬೇಡಿ. ಇದು ನಾನು ಶೂಟಿಂಗ್ ಮಾಡುವಾಗ ಸೆರೆ ಹಿಡಿದ ವಿಡಿಯೋ ಇದು ಕೇವಲ ತಮಾಷೆಗಾಗಿ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ರಶ್ಮಿಕಾಗೆ ಮಾತ್ರವಲ್ಲ, ನಟ ದೇವರಕೊಂಡಗೂ ಖುಷಿ ಕೊಡೋದು ಇದೇ ವಿಷ್ಯ 

ರಶ್ಮಿಕಾ ಶೇರ್ ಮಾಡಿಕೊಳ್ಳುವ ಪೋಟೋ ಹಾಗೂ ವಿಡಿಯೋ ಟ್ರೋಲ್ ಆಗುವುದು ತುಂಬಾನೇ ಕಾಮನ್ ಈ ಕಾರಣಕ್ಕೆ ಮುಂಚೆನೇ ವಿಡಿಯೋದಲ್ಲಿ ತಮಾಷೆಗಾಗಿ ಎಂದು ತಿಳಿಸಿದ್ದಾರೆ. ಸ್ಯಾಂಡಲ್‌ವುಡ್‌,ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕೈ ತುಂಬಾ ಸಿನಿಮಾ ಆಫರ್‌ಗಳಿದೆ. ಒಟ್ಟಿನಲ್ಲಿ ನಮ್ಮ ಕನ್ನಡದ ಹುಡುಗಿ ಬೆಳೆಯುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ.