Asianet Suvarna News Asianet Suvarna News

Shehnaaz Gill Father Attacked: ನಟಿ ತಂದೆ ಸಂತೋಖ್ ಮೇಲೆ ಗುಂಡಿನ ದಾಳಿ!

ಎರಡು ಗುಂಡು ಹೊಡೆದರೂ ಪಾರಾದ ಸಂತೋಖ್. ಶಾಕ್‌ನಲ್ಲಿರುವ ಶೆಹನಾಜ್‌ಗೆ ನೆಟ್ಟಿಗರ ಸಮಾಧಾನ... 

Bollywood Bigg boss Shehnaaz gill father gets shot by two men in Amritsar vcs
Author
Bangalore, First Published Dec 28, 2021, 10:42 AM IST
  • Facebook
  • Twitter
  • Whatsapp

ಬಾಲಿವುಡ್ (Bollywood) ನಟಿ, ಜನಪ್ರಿಯ ಗಾಯಕಿ (Singer) ಹಾಗೂ ಬಿಗ್ ಬಾಸ್ (Bigg Boss Hindi) ಸ್ಪರ್ಧಿ ಶೆಹನಾಜ್‌ (Shehnaaz Gill) ಜೀವನದಲ್ಲಿ ಮತ್ತೆ ಮತ್ತೆ ಆಘಾತಗಳು ಎದುರಾಗುತ್ತಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಿಯಕರನನ್ನು ಕಳೆದುಕೊಂಡು ಶೆಹನಾಜ್ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನುವಷ್ಟರಲ್ಲಿಯೇ ಅವರ ತಂದೆ ಮೇಲೆ ಗುಂಡಿನ ದಾಳಿ ನಡೆದಿದೆ. ಇಡೀ ಕುಟುಂಬವೇ ಇದರಿಂದ ಆತಂಕಕ್ಕೆ ಒಳಗಾಗಿದೆ. 

ಹೌದು! ಡಿಸೆಂಬರ್ 24ರಂದು ಅಮೃತಸರದಲ್ಲಿ (Amritsar) ಶೆಹನಾಜ್ ಗಿಲ್ ಅವರ ತಂದೆ ಸಂತೋಖ್ (Santhok Singh) ಸಿಂಗ್ ಅಲಿಯಾಸ್ ಸುಖ್ ಅವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗಳು ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡರೆ, ತಂದೆ ಪಂಜಾಬ್ ರಾಜಕೀಯದಲ್ಲಿ (Punjab Politics) ಗುರುತಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದಯಷ್ಟೇ ಸಂತೋಖ್‌ ಅವರು ಬಿಜೆಪಿ (BJP)ಗೆ  ಸೇರ್ಪಡೆಯಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಹೀಗಾಗಿ ಅವರ ಮೇಲೆ ದ್ವೇಷದಿಂದ ದಾಳಿ ನಡೆದಿದೆ ಎನ್ನಲಾಗಿದೆ. 

ಸಿದ್ದಾರ್ಥ್‌ಗಾಗಿ ಶೆಹನಾಜ್‌ ಹೊಸ ಹಾಡು : 'ತು ಯಹೀಂ ಹೈ' ಎಂದ ಪಂಜಾಬ್‌ ಬೆಡಗಿ!

ಏನಿದು ಘಟನೆ?
ಅಮೃತಸರದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಬೈಕಿನಲ್ಲಿ (Bike) ಬಂದು ಸಂತೋಖ್ ಸಿಂಗ್ ಇದ್ದ ಕಾರಿನ (Car) ಮೇಲೆ ನಾಲ್ಕು ಬಾರಿ ಗುಂಡಿನ ದಾಳಿ ಮಾಡಿದ್ದಾರೆ. ಅಷ್ಟೊರೊಳಗೆ ಸಂತೋಖ್ ಸಿಂಗ್ ಅವರ ಭದ್ರತಾ ಸಿಬ್ಬಂದಿ (Security Guard) ತಡೆದಿದ್ದಾರೆ. ತಕ್ಷಣವೇ ಸ್ಥಳದಿಂದ ದುಷ್ಕರ್ಮಿಗಳು ಪಾರಾಗಿದ್ದಾರೆ. ನಾಲ್ಕು ಸಲ ನಡೆಸಿದ ಗುಂಡಿನ ದಾಳಿ (Gun Shot) ವೇಳೆ ಎರಡು ಗುಂಡು ಸಂತೋಖ್ ಸಿಂಗ್ ಅವರ ಸಮೀಪವೇ ಹಾದು ಹೋಗಿವೆ.ಅವರು ತಕ್ಷಣವೇ ಹಿಂದಿನ ಸೀಟ್‌ಗೆ ಜಂಪ್ ಮಾಡಿ ಪಾರಾಗಿದ್ದಾರೆ ಎನ್ನಲಾಗಿದೆ. 

Bollywood Bigg boss Shehnaaz gill father gets shot by two men in Amritsar vcs

ಸಂತೋಖ್ ಅವರ ಭಧ್ರತಾ ಸಿಬ್ಬಂದಿ ಗುರು ಪೊಲೀಸ್ ಠಾಣೆಗೆ (Guru Police Station) ದೂರು ನೀಡಿ ತಕ್ಷಣವೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರಂತೆ. ಸ್ಥಳದಲ್ಲಿದ್ದ ನಾಲ್ಕು ಬುಲೆಟ್‌ಗಳನ್ನು (Bullet) ವಶ ಪಡಿಸಿಕೊಂಡಿದ್ದಾರೆ. ಸಂತೋಖ್‌ ಅವರಿಗೆ ಯಾವುದೇ ತೊಂದರೆ ಆಗಿಲ್ಲವಾದರೂ ವೈದ್ಯರ (Doctor) ಬಳಿ ಚೆಕಪ್ ಮಾಡಿಸಿದ್ದಾರೆ. 'ಪ್ರಾಥಮಿಕ ತನಿಖೆ ಆರಂಭವಾಗಿದೆ. ಇದೊಂದು ಅನುಮಾನಾಸ್ಪದ ಘಟನೆ. ಅಗತ್ಯ ತನಿಖೆ ಪ್ರಗತಿಯಲ್ಲಿದೆ,' ಎಂದು ಗುರು ಪೊಲೀಸ್‌ ಠಾಣೆಯ ಹರ್‌ಪ್ರೀತ್‌ ಸಿಂಗ್ ಹೇಳಿದ್ದಾರೆ. 

ಸಂತೋಖ್ ಸಿಂಗ್ ರಾಜಕೀಯ ಪ್ರವೇಶ ಮಾಡುವ ಸಮಯದಲ್ಲಿ ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು (Criminal Cases) ಬೆಳಕಿಗೆ ಬಂದಿದ್ದವು. ಅವೆಲ್ಲವೂ ದಾಖಲಾಗಿದ್ದರಿಂದ ಅವರಿಗೆ ಸರ್ಕಾರ (Government Security) ನೀಡಿದ ಭದ್ರತೆಯನ್ನು ಹಿಂಪಡೆದುಕೊಂಡಿತ್ತು ಎನ್ನಲಾಗಿದೆ. 

ಈ ಘಟನೆ ಬಗ್ಗೆ ಶೆಹನಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದು ಅವರ ಮ್ಯಾನೇಜರ್‌ ಕೌಶಲ್ ಜೋಷಿ (Kaushal Joshi) ಅವರು ನಿಶ್ಚಿತಾರ್ಥ (Engagement) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಎನ್ನಲಾಗಿದೆ. 

Top Searched Personalities 2021: ಗೂಗಲ್‌ ಸರ್ಚ್ ಟಾಪ್ 10ನಲ್ಲಿ ರಾಜ್‌ ಕುಂದ್ರಾ, ಆರ್ಯನ್‌ ಖಾನ್!

ಬಿಗ್ ಬಾಸ್‌ನಲ್ಲಿ ಶೆಹನಾಜ್ ಸ್ಪರ್ಧಿಸಿದ್ದಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಅವರ ಮುಗ್ಧತೆ (Innocence) ಮತ್ತು ಸಿದ್ಧಾರ್ಥ್ ಶುಕ್ಲಾ (siddharth shukla) ಅವರನ್ನು ಪ್ರೀತಿಸುತ್ತಿದ್ದ ರೀತಿಗೆ ವೀಕ್ಷಕರು ಫಿದಾ ಆಗಿದ್ದರು. ಅವರಿಬ್ಬರ ಪ್ರೀತಿಗೆ ಅಭಿಮಾನಿಗಳ (Fans) ಸಪೋರ್ಟ್‌ ಇತ್ತು, ಅವರಿಬ್ಬರ ಹೆಸರಿನಲ್ಲಿ ತುಂಬಾನೇ ಫ್ಯಾನ್ ಪೇಜ್ (Fan Page) ಕ್ರಿಯೇಟ್ ಮಾಡಿದ್ದರು. ಸಿದ್ಧಾರ್ಥ್ ಇನ್ನಿಲ್ಲವಾದರೂ ಅವರಿಬ್ಬರ ವಿಡಿಯೋಗಳನ್ನು ಹಾಗಾಗ ಶೇರ್ ಮಾಡಿಕೊಳ್ಳುತ್ತಾರೆ.  ಸಿದ್ಧಾರ್ಥ್ ನಿಧನದ ನಂತರ ಶೆಹನಾಜ್‌ ಬಗ್ಗೆ ಗೂಗಲ್‌ನಲ್ಲಿ ಜನರು ಸರ್ಚ್ (Google Top Searched Personalities 2021) ಮಾಡಿದ್ದಾರೆ. ಹೀಗಾಗಿ ಆಕೆ ಅತಿ ಹೆಚ್ಚು ಗೂಗಲ್ ಸರ್ಚ್ ಆದ ವ್ಯಕ್ತಿಯಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Follow Us:
Download App:
  • android
  • ios