Asianet Suvarna News Asianet Suvarna News

ಸಿದ್ದಾರ್ಥ್‌ಗಾಗಿ ಶೆಹನಾಜ್‌ ಹೊಸ ಹಾಡು : 'ತು ಯಹೀಂ ಹೈ' ಎಂದ ಪಂಜಾಬ್‌ ಬೆಡಗಿ!

*ಸಿದ್ದಾರ್ಥ್‌ಗಾಗಿ ಶಹನಾಜ್‌ ಹೊಸ ಹಾಡು
*'ನೀನು ಇಲ್ಲೇ ಇದ್ದೀಯಾ' ಎಂದ  ಪಂಜಾಬ್‌ ಬೆಡಗಿ
*ಬಹುದಿನಗಳ ನಂತರ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಗಿಲ್

Shehnaaz Gill records a song as a tribute to Sidharth Shukla
Author
Bengaluru, First Published Oct 28, 2021, 2:56 PM IST
  • Facebook
  • Twitter
  • Whatsapp

ಮುಂಬೈ(ಅ. 28) : ಬಾಲಿವುಡ್ (Bollywood) ನಟ ಹಾಗೂ ಕಿರುತೆರೆಯ ಜನಪ್ರಿಯ ತಾರೆ, ಬಿಗ್ ಬಾಸ್-ಹಿಂದಿಯ ಸೀಸನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ (Sidharth Shukla) ಕೊನೆಯುಸಿರೆಳೆದು ಸುಮಾರು ಒಂದೂವರೆ ತಿಂಗಳು ಕಳೆದಿದೆ. ಸಿದ್ದಾರ್ಥ್ ಅಕಾಲಿಕ ನಿಧನ ಎಲ್ಲರನ್ನು ಆಘಾತಕ್ಕೊಳಗಾಗಿಸಿತ್ತು. ಅವರ ನಿಧನವಾಗಿ ಒಂದೂವರೆ ತಿಂಗಳು ಕಳೆದರೂ ಅವರ ಪ್ರೀತಿ ಪಾತ್ರರು ಇನ್ನೂ  ಕಂಬನಿ ಮಿಡಿಯುತ್ತಿದ್ದಾರೆ. ಬಿಗ್‌ ಬಾಸ್‌ನಲ್ಲಿ ಸಿದ್ದಾರ್ಥ್ ಜತೆ ಭಾಗವಹಿಸಿದ್ದ ಅವರ ಆಪ್ತ ಸ್ನೇಹಿತೆ, ಶೆಹನಾಜ್ ಗಿಲ್ (Shehnaaz Gill) ಸಿದ್ಧಾರ್ಥ್ ಅಗಲುವಿಕೆಯ ನಂತರ ಈವರೆಗೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಸಿದ್ದಾರ್ಥ್‌ರಿಗ ಸಂಗೀತದ ಮೂಲಕ ಗೌರವ ಸಲ್ಲಿಸಲು ಮುಂದಾಗಿದ್ದಾರೆ ಶೆಹನಾಜ್‌.

ತಂದೆ ಕಳೆದುಕೊಂಡ ಮಗನಿಗಾಗಿ ಅನೇಕ ತ್ಯಾಗ ಮಾಡಿದ ಸಿದ್ಧಾರ್ಥ್ ತಾಯಿ!

ಸಿದ್ಧಾರ್ಥ್ ಮತ್ತು ಶೆಹನಾಜ್ ಜೋಡಿ ಬಿಗ್‌ ಬಾಸ್‌ ವೀಕ್ಷಕರ ಮನ ಗೆದ್ದಿತ್ತು. ಬಿಗ್ ಬಾಸ್‌ ಮನೆಯಲ್ಲಿ ಈ ಜೋಡಿ ಮಾಡಿದ್ದ ತುಂಟಾಟ, ಹಾಸ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಂಡಿದ್ದವು. ಸಿದ್ದಾರ್ಥ್ ಮರಣದ ನಂತರ ಅವರ ಗೆಳತಿ ಶೆಹನಾಜ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.  ಶೆಹನಾಜ್‌ಗೆ ಈ ನೋವನ್ನು ದಾಟಿ ಬರುವುದು ಕಷ್ಟವೆಂದೆನಿಸರಬಹುದು. ಸದಾ ಹಸನ್ಮುಖಿಯಾಗಿರುತ್ತಿದ್ದ ಶೆಹನಾಜ್‌ ಸಿದ್ದಾರ್ಥ್‌ರನ್ನು ಕಳೆದುಕೊಂಡ ನಂತರ ಖಿನ್ನತೆಗೆ ಒಳಗಾದಂತೆ ಕಾಣುತ್ತಿದ್ದರು.

ಸಿದ್ಧಾರ್ಥ್‌ಗೆ ಸಂಗೀತದ ಮೂಲಕ ಗೌರವ!

ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಶೆಹನಾಜ್ ಈಗ  ಸಿದ್ಧಾರ್ಥ್ ಅವರಿಗೆ ಸಂಗೀತದ ಮೂಲಕ ಗೌರವ ಸಲ್ಲಿಸಲು ಸಿದ್ಧರಾಗಿದ್ದಾರೆ.  ಸಿದ್ದಾರ್ಥ್ ಅಗಲಿದ ನಂತರ ಮೊದಲ ಬಾರಿಗೆ ಇನ್ಸ್ಟಾಗ್ರಾಮ್‌‌ (Instagarm) ಪೋಸ್ಟ್‌ ಮಾಡಿರುವ ಶೆಹನಾಜ್‌ ಈ ಬಗ್ಗೆ ತಿಳಿಸಿದ್ದಾರೆ. ಸಿದ್ಧಾರ್ಥ್‌ ಮರಣದ ನಂತರ ಶೆಹನಾಜ್ ಸಾಕಷ್ಟು ನೋವನ್ನ ಅನುಭವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಸ್ನೇಹಿತ ಸಿದ್ಧಾರ್ಥ್‌ಗಾಗಿ ಶೆಹಾನಾಜ್ ಮಾಡಲು ಬಯಸಿದ ಮೊದಲ ಕೆಲಸವೆಂದರೆ ಪ್ರತಿಯೊಬ್ಬರ ನೆನಪಿನಲ್ಲಿ ಉಳಿಯುವಂತೆ ಅವರಿಗೆ ಗೌರವವನ್ನು ಸಲ್ಲಿಸುವುದು. ಹಾಗಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ಮಾರ್ಗವೆಂದರೆ ಅದು ಸಂಗೀತ.  'ತು ಯಹೀಂ ಹೈ' (ನೀನು ಇಲ್ಲೇ ಇದ್ದಿಯಾ) ಎಂಬ ವಿಶೇಷ ಹಾಡನ್ನು ರೆಕಾರ್ಡ್ ಮಾಡಿರುವ ಶೆಹನಾಜ್ ಅದಕ್ಕಾಗಿ ವಿಡಿಯೋ ಕೂಡ ಶೂಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಹಾಡಿನಲ್ಲಿ ಬಿಗ್ ಬಾಸ್ 13 ರಲ್ಲಿ ಅವರು ಮತ್ತು ಸಿದ್ಧಾರ್ಥ್ ಕಳೆದಿರುವ ಕೆಲವು ಸುಂದರ ಕ್ಷಣಗಳ ವಿಡಿಯೋಗಳನ್ನು ಕೂಡ ಇದರಲ್ಲಿ ಸೇರಿಸಿರಬಹುದು ಎಂದು ಹೇಳಲಾಗಿದೆ.  

ಸ್ಟೀವ್‌ ಹಫ್  ಮಾತನಾಡಿಸಿದಾಗ ಸಿದ್ಧಾರ್ಥ್ ಆತ್ಮ ಹೇಳಿದ  ಒಂದು ಮಾತು!

ಈ ಬಗ್ಗೆ ಶೆಹನಾಜ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು ಸಿದ್ದಾರ್ಥ್ ಮತ್ತು ಶೆಹನಾಜ್ ಇಬ್ಬರು ಪೋಟೋದಲ್ಲಿದ್ದಾರೆ. ಜತೆಗೆ  'ತು ಯಹೀಂ ಹೈ' ಎಂದು ಅದರ ಮೇಲೆ ಬರೆಯಲಾಗಿದೆ. ಕಾಪ್ಷನ್‌ ನಲ್ಲಿ ಕೇವಲ 'ತು ಮೇರಾ ಹೈ ......'  (ನೀನು ನನ್ನವನು) ಎಂದು ಬರೆದಿದ್ದಾರೆ. ಅಲ್ಲದೇ ಹಾಡು ನಾಳೆ (ಅ. 29)  12 ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

ಬಿಗ್ ಬಾಸ್-ಹಿಂದಿಯ ಸೀಸನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಸೆಪ್ಟೆಂಬರ್ 2ರಂದು ಹೃದಯಘಾತದಿಂದ ಕೊನೆಯುಸಿರೆಳೆದಿದ್ದರು. 40ರ ಸಿದ್ಧಾರ್ಥ್ ಅಗಲಿಕೆಗೆ ಬೆಳ್ಳಿತೆರೆ, ಕಿರುತೆರೆ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿತ್ತು. ಡಿಸೆಂಬರ್ 12, 1980 ರಂದು ಜನಿಸಿದ ಸಿದ್ಧಾರ್ಥ್ ಶುಕ್ಲಾ ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು ಮತ್ತು ಒಳಾಂಗಣ ವಿನ್ಯಾಸದಲ್ಲಿ (Interior Design) ಪದವಿ ಪಡೆದರು. ಬಾಲ್ಯದಲ್ಲಿ ಕ್ರೀಡಾಪಟುವಾಗಿದ್ದ ಅವರು ಶಾಲೆಯಲ್ಲಿ ಫುಟ್ಬಾಲ್ ಮತ್ತು ಟೆನಿಸ್ ಆಡುತ್ತಿದ್ದರು.  

ಪ್ರಿಯತಮನ ಕಳೆದುಕೊಂಡ ಮಗಳ ಹೆಸರು ಟ್ಯಾಟೂ ಹಾಕಿಸಿದ ತಂದೆ

ಮಾಡೆಲ್ ಆಗಿ ವೃತ್ತಿ ಆರಂಭಿಸಿದ್ದ ಸಿದ್ದಾರ್ಥ್ 2004 ರಲ್ಲಿ ಟಿವಿಯ ಮೂಲಕ  ನಟನೆಯ ಕೆರಿಯರ್‌ ಶುರು ಮಾಡಿದರು. ಸಿದ್ಧಾರ್ಥ್ ಶುಕ್ಲಾ ಬಾಲಿಕಾ ವಧು ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಸಿದ್ಧಾರ್ಥ್ 2013 ರಲ್ಲಿ ಬಾಲಿಕಾ ವಧು ಟಿವಿ ಶೋಗಾಗಿ  ITA ಯಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. 2015 ರಲ್ಲಿ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರಕ್ಕಾಗಿ ಅವರಿಗೆ ಸ್ಟಾರ್‌ಡಸ್ಟ್ ಆವಾರ್ಡ್‌ ಪಡೆದಿದ್ದರು. ಸಿದ್ಧಾರ್ಥ್ ಶುಕ್ಲಾ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದರು.

Follow Us:
Download App:
  • android
  • ios