Asianet Suvarna News Asianet Suvarna News

2023ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ್ದೇ ಈಕೆಯನ್ನು! ಎಲ್ಲಾ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ ಚೆಲುವೆ ಯಾರು?

2023ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ್ದೇ ಈ ಬಾಲಿವುಡ್​ ನಟಿಯನ್ನು.  ಎಲ್ಲಾ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ ಚೆಲುವೆ ಯಾರ್​ ಗೊತ್ತಾ?
 

Bollywood beauty Kiara Advani was the most searched on Google in 2023 suc
Author
First Published Dec 12, 2023, 6:00 PM IST

2023 ರ ವರ್ಷವು ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ  ಗೂಗಲ್ ಇಂಡಿಯಾ ಅತಿ ಹೆಚ್ಚು ಸರ್ಚ್ ಮಾಡಿದವರ ಟಾಪ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ 10 ಜನರ ಪಟ್ಟಿಯಲ್ಲಿ, ಒಬ್ಬ ಬಾಲಿವುಡ್ ತಾರೆಯನ್ನು ಹೆಚ್ಚು ಹುಡುಕಲಾಗಿದೆ. ಅಂದರೆ ಈಕೆ ಟಾಪ್​-1 ಸ್ಥಾನದಲ್ಲಿದ್ದಾರೆ.  ಬಾಲಿವುಡ್​ ನಟರು ಎಂದಾಕ್ಷಣ ಸಾಮಾನ್ಯವಾಗಿ ಶಾರುಖ್ ಖಾನ್, ಸಲ್ಮಾನ್ ಖಾನ್ ಇಂಥವರೇ ನೆನಪಾಗುತ್ತಾರೆ. ಆದರೆ ಈಕೆ ಎಲ್ಲರನ್ನೂ ಮೀರಿ ಗೂಗಲ್​ ಸರ್ಚ್​ನಲ್ಲಿ ಟಾಪ್​-1 ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರ, ಸೆಲೆಬ್ರಿಟಿಗಳನ್ನು ಮೀರಿ ಇವರು ಟಾಪ್​-1 ಸ್ಥಾನ ಪಡೆದಿದ್ದಾರೆ.  ಈ ಪಟ್ಟಿಯಲ್ಲಿ ಕ್ರಿಕೆಟಿಗರು ಮತ್ತು ಬಿ-ಟೌನ್ ತಾರೆಗಳೂ ಸೇರಿದ್ದಾರೆ. ಈಗ ಯೋಚಿಸಬೇಕಾದ ವಿಷಯವೆಂದರೆ ಈ ಟಾಪ್ 10 ಪಟ್ಟಿಯಲ್ಲಿ ಯಾರ ಹೆಸರು ಅಗ್ರಸ್ಥಾನದಲ್ಲಿದೆ ಎಂಬುದು.  ಹಾಗಿದ್ದರೆ ಈ ನಟಿ ಯಾರು ಹಾಗೂ ಟಾಪ್​ 10 ಸ್ಥಾನದಲ್ಲಿ ಇರುವ ವಿವಿಧ ಸೆಲೆಬ್ರಿಟಿಗಳು ಯಾರು ಎಂದು ನೋಡೋಣ. 
 
ಈ ಟಾಪ್​-10 ಪಟ್ಟಿಯಲ್ಲಿ ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಮೂವರು ಇದ್ದಾರೆ. ಉಳಿದವರು ವಿವಿಧ ಕ್ಷೇತ್ರದ ವ್ಯಕ್ತಿಗಳು.  ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ಒಬ್ಬ ಉದ್ಯಮಿ ಅಥವಾ ಕ್ರಿಕೆಟಿಗರಲ್ಲ, ಬದಲಾಗಿ ಬಾಲಿವುಡ್​ನ ನಟನೂ ಅಲ್ಲ, ಬದಲಿಗೆ ಬಾಲಿವುಡ್​​ ನಟಿ.  ಇದರರ್ಥ 2023 ರಲ್ಲಿ ಭಾರತದಲ್ಲಿ ಒಬ್ಬ ಬಿ-ಟೌನ್ ಸ್ಟಾರ್ ಅನ್ನು ಅತಿ ಹೆಚ್ಚು ಹುಡುಕಲಾಗಿದೆ. ಈಕೆಯೇ  ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ. ಕಿಯಾರಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅವರ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಈ ಪಟ್ಟಿಯಲ್ಲಿ ಇತರ ಬಾಲಿವುಡ್ ತಾರೆಯರಿಗಿಂತ ಮೇಲಿದ್ದಾರೆ, ಆದರೆ ಅವರ ಪತ್ನಿಗಿಂತ ಕೆಳಗಿದ್ದಾರೆ. ಸಿದ್ಧಾರ್ಥ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. 

ENTERTAINMENT 2023: ಈ ನಟರಿಗೆ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸುವಂತೆ ಹೊಸಜೀವ ಕೊಟ್ಟ ವರ್ಷವಿದು!

ಈ ಜೋಡಿ ಬಗ್ಗೆ ಹೇಳುವುದಾದರೆ, ಅವರ ಮದುವೆಯ ಬಗ್ಗೆ ಚರ್ಚೆಯಿಂದಾಗಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಫೆಬ್ರುವರಿಯಲ್ಲಷ್ಟೇ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಅವರ ಮದುವೆಯಾಗಿದೆ. ಭರ್ಜರಿ ಮದುವೆ, ಅದ್ಧೂರಿ ಗಿಫ್ಟ್​ ಮೂಲಕ ಈ ಜೋಡಿ ತಿಂಗಳುಗಟ್ಟಲೆ ಭಾರಿ ಸುದ್ದಿಯಲ್ಲಿತ್ತು. ಇದರಿಂದಾಗಿ ನಟಿಯ ಪತಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಇದಾದ ಬಳಿಕ ಮದುವೆಯಾದ ಮೇಲೆ   ಕಿಯಾರಾ ಅಡ್ವಾಣಿಯ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.  ಟಾಪ್​ಲೆಸ್​ ಆಗಿರುವ ಕಿಯಾರಾ ಎಲೆಯಿಂದ ತಮ್ಮ ದೇಹವನ್ನು ಮುಚ್ಚಿಕೊಂಡಿರುವ ಫೋಟೋ ಇದಾಗಿದೆ.  ಇದು ಸುದ್ದಿಯಾಗುತ್ತಲೇ ಕಿಯಾರಾ ಅಡ್ವಾಣಿ ಎಂದು ಹೆಚ್ಚು ಹೆಚ್ಚು ಜನರು ಈಕೆಯನ್ನು ಸರ್ಚ್​ ಮಾಡಿದ್ದೂ ಟಾಪ್​1 ಗೆ ಬರಲು ಕಾರಣ ಎನ್ನಲಾಗುತ್ತಿದೆ. ಇವರಿಬ್ಬರನ್ನು ಹೊರತುಪಡಿಸಿ ಮನರಂಜನಾ ಕ್ಷೇತ್ರದ ಎಲ್ವಿಶ್ ಯಾದವ್ ಹೆಸರು ಟಾಪ್​-10 ಲಿಸ್ಟ್​ನಲ್ಲಿದೆ. 

ಇನ್ನುಳಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಲಿಸ್ಟ್​ನಲ್ಲಿ ಟಾಪ್​-10 ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಹಲವು ಕ್ರಿಕೆಟಿಗರೂ ಇದ್ದಾರೆ. ಶುಭಮನ್ ಗಿಲ್ ಎರಡನೇ ಸ್ಥಾನದಲ್ಲಿದ್ದರೆ, ಮೊಹಮ್ಮದ್ ಶಮಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಮತ್ತು ವಿಶ್ವಕಪ್ ಸಮಯದಲ್ಲಿ ವಿದೇಶಿ ಕ್ರಿಕೆಟ್ ಆಟಗಾರರನ್ನು ಭಾರತದಲ್ಲಿ ವ್ಯಾಪಕವಾಗಿ ಹುಡುಕಲಾಗಿದೆ. 

Entertainment 2023: ಈ ವರ್ಷ ಗೂಗಲ್​ನಲ್ಲಿ ಹುಡುಕಾಟ ನಡೆಸಿದ ಟಾಪ್​-10 ಚಿತ್ರಗಳ ಡಿಟೇಲ್ಸ್​ ಇಲ್ಲಿದೆ...

2023 ರಲ್ಲಿ ಗೂಗಲ್ ಇಂಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ ಕ್ರಮವಾಗಿ ಹೇಳುವುದಾದರೆ: 
ಕಿಯಾರಾ ಅಡ್ವಾಣಿ
ಶುಭಮನ್ ಗಿಲ್
ರಚಿನ್ ರವೀಂದ್ರ
ಮೊಹಮ್ಮದ್ ಶಮಿ
ಎಲ್ವಿಶ್ ಯಾದವ್
ಸಿದ್ಧಾರ್ಥ್ ಮಲ್ಹೋತ್ರಾ
ಗ್ಲೆನ್ ಮ್ಯಾಕ್ಸ್‌ವೆಲ್
ಡೇವಿಡ್ ಬೆಕ್ಹ್ಯಾಮ್
ಸೂರ್ಯಕುಮಾರ್ ಯಾದವ್
ಟ್ರಾವಿಸ್ ಟೇಲ್​ 

Follow Us:
Download App:
  • android
  • ios