ಅನುಚಿತವಾಗಿ ವರ್ತಿಸಿದ ಗೋವಾ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ ಖ್ಯಾತ ನಟಿ.
ಟಾರ್ಜನ್: ದಿ ವಂಡರ್ ಕಾರ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ಆಯೆಷಾ ಟಾಕಿಯಾ ಮತ್ತು ಅವರ ಪತಿ ಫರ್ಹಾನ್ ಆಜ್ಮಿ ಹಾಗೂ ಪುತ್ರ ಗೋವಾದಿಂದ ಮುಂಬೈಗೆ ಹಿಂತಿರುಗುವಾ ಸಿಐಎಸ್‌ಎಫ್ ಅಧಿಕಾರಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ನಮಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ನಡೆದ ಸಂಪೂರ್ಣ ಘಟನೆ ಬಗ್ಗೆ ಟ್ವಿಟರ್ ಖಾತೆಯಲ್ಲಿ ಫರ್ಹಾನ್ ಮಾಹಿತಿ ನೀಡಿದ್ದಾರೆ.
ಫರ್ಹಾನ್ ಟ್ವೀಟ್:
'ಡಿಯರ್ ಸಿಐಸ್‌ಎಫ್‌ಹೆಚ್‌ಕ್ಯೂ ಅವರೇ ನಾವು ಇಂಡಿಗೋ ವಿಮಾನ 6386ನಲ್ಲಿ ಸಂಜೆ 6.40ಕ್ಕೆ ಪ್ರಯಾಣ ಮಾಡುವಾಗ ರೇಸಿಸ್ಟ್ ಆಫೀಸರ್ ಆರ್‌ಪಿ ಸಿಂಗ್, ಏ.ಕೆ ಯಾದವ್ ಮತ್ತು ಕಮ್ಯಾಂಡರ್ ರೂಟ್ ಮತ್ತು ಸೀನಿಯರ್ ಆಫೀಸರ್ ಬಹದೂರ್ ಅವರು ಬೇಕಂತಲೇ ನನ್ನ ಹೆಸರನ್ನು ಜೋರಾಗಿ ಓದಿ ತಮ್ಮ ಇಡೀ ಟೀಂಗೆ ಸಿಗ್ನಲ್ ಕೊಟ್ಟರು. ನನ್ನ ಪತ್ನಿ ಮತ್ತು ಮಗು ಗಾಬರಿಗೊಂಡರು. ನಮ್ಮ ನಡುವೆ ಜೋರು ಮಾತಕತೆ ಶುರುವಾಗಲು ಕಾರಣವೇ ಅಲ್ಲಿದ್ದ ಸೆಕ್ಯೂರಿಟಿ ಡೆಸ್ಕ್ ವ್ಯಕ್ತಿ ನನ್ನ ಪತ್ನಿಯನ್ನು ಅಸಭ್ಯವಾಗಿ ಮುಟ್ಟಿದ್ದು ಅವರಿಗೆ ಬೇರೆ ಲೈನ್‌ನಲ್ಲಿ ನಿಲ್ಲುವಂತೆ ಒತ್ತಾಯ ಮಾಡಿದ್ದು. ಯಾವ ಹೆಣ್ಣಿನನ್ನೂ ಈ ರೀತಿ ಮುಟ್ಟಬೇಡ ದೂರು ನಿಂತು ಕೆಲಸ ಮಾಡು ಎಂದು ನಾನು ಮೇರು ಧ್ವನಿಯಲ್ಲಿ ಹೇಳಿದೆ' ಎಂದು ಟ್ಟೀಟ್ ಮಾಡಿದ್ದಾರೆ.
'ಈ ಜಗಳ ಮಾತುಕಥೆ ಇಲ್ಲಿಗೆ ನಿಲ್ಲಲಿಲ್ಲ. ಹಿರಿಯ ಅಧಿಕಾರಿ ಬಹದ್ದೂರ್ ಅವರ ಇನ್ನಿತ್ತರ ಅಧಿಕಾರಿಗಳಿಗೆ ಸಿಗ್ನಲ್ ಕೊಟ್ಟು ನನ್ನ ಕೈ ಹಿಡಿದು ಸಂಪೂರ್ಣ ಪರೀಕ್ಷೆ ಮಾಡುವಂತೆ ಹೇಳಿದ್ದರು. ನನ್ನ ಪ್ಯಾಂಟ್ ಪಾಕೇಟ್ ಚೆಕ್ ಮಾಡುವಾಗ ಕೆಟ್ಟ ಕಾಮೆಂಟ್ ಮಾಡಿದ್ದರು. ನನ್ನ ಜೇಬಿನಲ್ಲಿ ಕೇವಲ 550 ರೂಪಾಯಿ ಇತ್ತು ಅಂತ ಟೀಕೆ ಮಾಡಿದ್ದರು. ಸಿಸಿಟಿವಿ ವಿಡಿಯೋಗಳನ್ನು ಚೆಕ್ ಮಾಡಿ ಅದರ ಆಧಾರದಲ್ಲಿ ಈ ಘಟನೆ ಬಗ್ಗೆ ತನಿಖೆ ಆಗಲಿ ಎಂದು ನಾನು ಒತ್ತಾಯ ಮಾಡುತ್ತಿದ್ದೆ. ಗೋವಾ ವಿಮಾನ ನಿಲ್ದಾಣ, ಸಿಐಎಸ್‌ಎಫ್ ಘಟಕವು ಈ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಇವರು ಮಾಡಿದ್ದು ಜನಾಂಗೀಯ ನಿಂದನೆ. ಇವರಿಗೆ ಮಹಿಳೆಯರ ಬಗ್ಗೆ ಕನಿಷ್ಟ ಗೌರವನೂ ಹೊಂದಿಲ್ಲ ಹೀಗಾಗಿ ಕೆಟ್ಟ ಮನಸ್ಸಿನ ವ್ಯಕ್ತಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು' ಎಂದು ಬರೆದುಕೊಂಡಿದ್ದಾರೆ.
'ಇಷ್ಟೆಲ್ಲಾ ತೊಂದರೆ ನೀಡಿದ ನಂತರವೂ ಹಿರಿಯ ಆಫೀಸರ್ ಬಹದ್ದೂರ್ ನಮ್ಮ ಸಮಸ್ಯೆಯನ್ನು ಸರಿ ಮಾಡುವುದಾಗಿ ಹೇಳಿ ಮುಂದೆ ಬಂದು ನಮ್ಮ ಬೋರ್ಡಿಂಗ್ ಪಾಸ್ ನೋಡಿ ನನ್ನನ್ನು ಪಕ್ಕಕ್ಕೆ ನೂಕಿ ಈತನನ್ನು ಅಲ್ಲಿಗೆ ಕರೆದುಕೊಂಡು ಹೋಗು ಇದು ಮಹಾರಾಷ್ಟ್ರ ಎಂದು ಹೇಳಿ ನನ್ನ ಹೆಸರನ್ನು ಜೋರಾಗಿ ಕೂಗಲು ಅರಂಭಿಸಿದ್ದರು. ವಿಮಾನ ಹೊರಡುವ ಸಮಯ ಹತ್ತಿರವಿತ್ತು' ಎಂದು ಸಂಪೂರ್ಣ ಮಾಹಿತಿಯನ್ನು ಟ್ವೀಟ್ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಜಿಮ್‌ಗೋದ್ರೂ ಸಿಂಪಲ್, ಏರ್‌ಪೋರ್ಟ್‌ಗೂ ಸಿಂಪಲ್!
ಒಂದು ದಿನದ ನಂತರ ಗೋವಾ ಏರ್ಪೋರ್ಟ್ ಟ್ಟೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದೆ. 'ನಿಮ್ಮ ಕುಟುಂಬಕ್ಕೆ ಮತ್ತು ನಿಮಗೆ ಆಗಿರುವ ತೊಂದರೆ ಬಗ್ಗೆ ನಾವು ಕ್ಷಮೆಯಾಚಿಸುತ್ತೇವೆ. ನಾವು ಈ ಘಟನೆ ಬಗ್ಗೆ ತನಿಖೆ ನಡೆಸುತ್ತೇವೆ' ಎಂದರು. 'ತಕ್ಷಣ ಪ್ರತಿಕ್ರಿಯೆ ಕೊಟ್ಟಿದಕ್ಕೆ ಧನ್ಯವಾದಗಳು. ನನ್ನ ಪತ್ನಿ ಮತ್ತು ಪುತ್ರನ ಜೊತೆ ಈ ಘಟನೆ ಎದುರಿಸಿರುವುದಕ್ಕೆ ತುಂಬಾನೇ ಬೇಸರವಾಗಿದೆ, ಮನಸ್ಸಿಗೆ ನೋವಾಗಿದೆ. ಆ ವ್ಯಕ್ತಿಗಳಿಗೆ ಉತ್ತರ ಕೊಡಲು ನಾನು ಕಾನೂನಿನ ಮೊರೆ ಹೋಗುತ್ತೇನೆ. ನೀವು ಮೆಸೇಜ್ ಮಾಡಿದಕ್ಕೆ ಧನ್ಯವಾದಗಳು' ಎಂದು ಫರ್ಹಾನ್ ಆಜ್ಮಿ ರಿಪ್ಲೈ ಮಾಡಿದ್ದಾರೆ.
