'ಹಿಂದಿ ನಮ್ಮ ರಾಷ್ಟ್ರ ಭಾಷೆ, ನಾವು ಗೌರವ ಕೊಡಬೇಕು': ನಟ ಅರ್ಜುನ್ ರಾಮ್‌ಪಾಲ್
ಅಜಯ್ ದೇವಗನ್ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿ ನೆಟ್ಟಿಗರಿಂದ ಬುದ್ಧಿ ಪಾಠ ಮಾಡಿಸಿಕೊಂಡರು ಈಗ ಆ ಸಾಲಿಗೆ ಅರ್ಜುನ್ ರಾಮ್‌ಪಾಲ್ ಸೇರಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ನಡುವೆ ಹಿಂದಿ ಭಾಷೆ ಹೇರಿಕೆ ಚರ್ಚೆ ದೊಡ್ಡ ಮಟ್ಟದಲ್ಲಿ ಚರ್ಚೆ ಶುರು ಮಾಡಿತ್ತು. ಹಿಂದಿನೇ ರಾಷ್ಟ್ರ ಭಾಷೆ ಎಂದು ವಾದ ಮಾಡಿದ ಅಜಯ್‌ಗೆ ಸುದೀಪ್ ಪ್ರೀತಿಯಿಂದ ಬುದ್ಧಿ ಹೇಳಿದ್ದರು. ಟ್ರೋಲಿಗರ ಕಾಟಕ್ಕೆ ಅಜಯ್ ಕೂಡ ಕ್ಷಮೆ ಕೇಳಿದ್ದರು. ಸಿನಿಮಾ ಸೆಲೆಬ್ರಿಟಿಗಳು ಮಾತ್ರವಲ್ಲ ರಾಜಕಾರಣಿಗಳು (Politicians) ಮತ್ತು ಜನ ಸಾಮಾನ್ಯರು ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದರು. ಎಲ್ಲವೂ ತಣ್ಣಗಾಯ್ತು ಅಂದುಕೊಳ್ಳುತ್ತಿದ್ದಂತೆ ಅರ್ಜುನ್ ರಾಮ್‌ಪಾಲ್ ಎಂಟ್ರಿ ಕೊಟ್ಟಿದ್ದಾರೆ.
ಅರ್ಜುನ್ ಮಾತು:
'ನಮ್ಮ ಭಾರತದಲ್ಲಿ ವಿವಿಧ ಭಾಷೆಗಳಿದೆ, ಸಂಸ್ಕೃತಿಗಳಿದೆ, ಹಬ್ಬಗಳನ್ನು ಮತ್ತು ಧರ್ಮಗಳನ್ನು ಹೊಂದು ವೈವಿಧ್ಯಮಯ, ಜಾತ್ಯತೀತ ಮತ್ತು ವರ್ಣರಂಜಿತ ದೇಶವಾಗಿದೆ. ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿ ಸಂತೋಷದಿಂದ ಜೀವನ ಮಾಡುತ್ತಿದ್ದೀವಿ. ಇಲ್ಲಿ ಭಾಷೆ ಏನೂ ಅಲ್ಲ. ಭಾಷೆಗಿಂತ ನಮ್ಮಲ್ಲಿರುವ ಭಾವನೆಗಳು ಮುಖ್ಯವಾಗುತ್ತದೆ. ನನ್ನ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿತ್ತು ಹೀಗಾಗಿ ನಾನು ಅದನ್ನು ಗೌರವಿಸಬೇಕು. ಬಹುತೇಕ ಮಂದಿ ಹಿಂದಿ ಮಾತನಾಡುತ್ತಾರೆ ಹಾಗೂ ಅನೇಕ ದೇಶಗಳನ್ನು ಈ ಭಾಷೆಯನ್ನು ಅರ್ಥ ಮಾಡಿಕೊಳ್ಳುವವರು ಇದ್ದಾರೆ' ಎಂದು ಅರ್ಜುನ್ ರಾಮ್‌ಪಾಲ್ (Arjun Rampal) ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಎಲ್ಲಾ ಭಾಷೆಯನ್ನು ಆಚರಿಸಬೇಕು:
'ಹಿಂದಿ ಎಂದು ಹೇಳಿದ ಮಾತ್ರಕ್ಕೆ ಬೇರೆ ಭಾಷೆಯನ್ನು ಕಡೆಗಣಿಸಬಾರದು. ಡೈವರ್ಸ್ ನೇಷನ್‌ನಲ್ಲಿರುವ ನಾವು ಎಲ್ಲಾ ಭಾಷೆಗಳು ಮತ್ತು ಆಚರಣೆಗಳನ್ನು ಸಂಭ್ರಮಿಸಬೇಕು. ಸ್ವಲ್ಪ ತಮಿಳು ಭಾಷೆ ಸ್ವಲ್ಪ ತೆಲುಗು ಭಾಷೆಯನ್ನು ಕಲಿಯಬೇಕು. ವಿದ್ಯಾಭ್ಯಾಸಕ್ಕೆಂದು ನಾನು ತಮಿಳು ನಾಡಿನಲ್ಲಿದ್ದೆ, ಹೀಗಾಗಿ ಸ್ವಲ್ಪ ತಮಿಳು ಮಾತನಾಡುತ್ತೀನಿ. ಆನಂತರ ಪಂಜಾಬ್‌ಗೆ ತೆರಳಿ ಅಲ್ಲಿ ಸ್ವಲ್ಪ ತಿಂಗಳು ಚಿತ್ರೀಕರಣ ಮಾಡಿದ ಕಾರಣ ಅಲ್ಲಿನ ಭಾಷೆಯನ್ನು ನಾನು ಕಲಿತಿರುವೆ. ಗುಜರಾತ್‌ಗೆ ಹೋದರೆ ನೀವು ಗುಜರಾತಿ ಕಲಿಯುತ್ತೀರಾ. ನಾನು ಮಹಾರಾಷ್ಟ್ರದಲ್ಲಿ ಇರುವುದಕ್ಕೆ ಮರಾಠಿ ಕಲಿತಿರುವೆ. ಇದು ಅದ್ಭುತ ನಾವು ಎಲ್ಲಾ ಭಾಷೆಯನ್ನು ಕಲಿಯಬಹುದು. ಎಲ್ಲಾ ಭಾಷೆಯನ್ನು ನಾನು ಆಚರಿಸುತ್ತೀನಿ'
ಪಾರ್ಟಿಯಲ್ಲಿ Ajay Devgn ಮತ್ತು Arjun Rampal ಪುತ್ರಿಯರು ಫೋಟೋ ವೈರಲ್!
ಇಂಡಿಯಾ ಡೈವರ್ಸಿಟಿ:
'ಭಾರತದ ವೈವಿಧ್ಯತೆಯು ಅದನ್ನು ಅನಪೇಕ್ಷಿತವಾಗಿಸುತ್ತದೆ. ಬೇರೆ ದೇಶಗಳಿಗಿಂತ ನಾವು ವಿಭಿನ್ನರು. ಹೀಗಾಗಿ ನಾವು ಭಾಷೆ ಜಗಳ ಮಾಡದೆ ಆಚರಿಸಬೇಕು. ಮತ್ತೊಬ್ಬರಿಗೆ ಬೆರಳು ತೋರಿಸಿ ಜಗಳ ಮಾಡಬಾರದು. ನನ್ನ ಪ್ರಕಾರ ನಾವು ಎಲ್ಲರ ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಬೇಕು ಅದನ್ನು ಒಮ್ಮೆ ಆಚರಿಸಿದರೆ ಇಷ್ಟ ಪಡುತ್ತೀನಿ. ನಮ್ಮ ದೇಶದಲ್ಲಿ ಇಷ್ಟೆಲ್ಲಾ ಇರುವುದಕ್ಕೆ ನಾವು ಖುಷಿ ಮತ್ತು ಹೆಮ್ಮೆ ಪಡಬೇಕು' ಎಂದು ಅರ್ಜುನ್ ರಾಮ್‌ಪಾಲ್ ಹೇಳಿದ್ದಾರೆ.
15 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ಆರ್ಜುನ್
ಅರ್ಜುನ್ ರಾಂಪಾಲ್ ಮತ್ತು ಗೇಬ್ರಿಯೆಲಾ ಡಿಮೆಟ್ರಿಡೆಸ್ ಇಬ್ಬರೂ 2018 ರಲ್ಲಿ ಐಪಿಎಲ್ ನಂತರದ ಪಾರ್ಟಿಯಲ್ಲಿ ಭೇಟಿಯಾದರು. ಕೆಲವು ವರ್ಷಗಳ ನಂತರ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ನಂತರ ಗೇಬ್ರಿಯೆಲಾ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಪತ್ನಿ ಮೆಹರ್‌ನಿಂದ ಬೇರ್ಪಟ್ಟ ನಂತರ ಅರ್ಜುನ್ ಗೆಳತಿ ಗೇಬ್ರಿಯೆಲಾ ಅವರೊಂದಿಗೆ ಮುಂಬೈನ ಪಾಲಿ ಹಿಲ್ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡರು. ಮದುವೆಯಾಗದೆ ಅರ್ಜುನ್ ರಾಂಪಾಲ್ ಜೊತೆ ಲಿವ್ ಇನ್ ರಿಲೆಷನ್‌ಶಿಪ್‌ನಲ್ಲಿರುವ ಗೇಬ್ರಿಯೆಲ್ಲಾ 2019 ರಲ್ಲಿ ಅರ್ಜುನ್ ರಾಂಪಾಲ್ ಅವರ ಮಗ ಆರಿಕ್‌ಗೆ ಜನ್ಮ ನೀಡಿದ್ದರು.
ಅರ್ಜುನ್ ರಾಂಪಾಲ್ - ಗ್ರಾಬಿಯೆಲ್ಲಾ ರಿಲೆಷನ್‌ಶಿಪ್: ನಟನ ಮಕ್ಕಳ ರಿಯಾಕ್ಷನ್ ಏನು?
ಗೇಬ್ರಿಯೆಲಾ ಗರ್ಭಿಣಿಯಾದ ನಂತರವೇ ಅರ್ಜುನ್ ರಾಂಪಾಲ್ ಮಾಧ್ಯಮಗಳಲ್ಲಿ ಆಕೆಯೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅರಿಕ್ ಅರ್ಜುನ್ ರಾಂಪಾಲ್ ಅವರ ಮೂರನೇ ಮಗು. ಅರ್ಜುನ್ ಮತ್ತು ಮೆಹರ್ ಜೆಸಿಯಾ ನಡುವಿನ ಬಿರುಕು ಸುದ್ದಿ 2011 ರಿಂದಲೇ ಬರಲಾರಂಭಿಸಿತು. ಹೇಗಾದರೂ, ಇಬ್ಬರೂ ತಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ನಂತರ ಇಬ್ಬರೂ 2018ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. ಇದಾದ ಬಳಿಕ ಅರ್ಜುನ್ ರಾಂಪಾಲ್ ಬಾಡಿಗೆ ಮನೆಗೆ ತೆರಳಿದ್ದರು.