ಅಪ್ಪ-ಮಗ ಇಬ್ರನ್ನೂ ತಬ್ಬಿ ರೊಮಾನ್ಸ್​ ಮಾಡಿರೋ ಬಾಲಿವುಡ್​ ಬೆಡಗಿಯರಿವರು

ಅಂದು ಅಪ್ಪ ಧರ್ಮೇಂದ್ರ, ಇಂದು ಮಗ ಸನ್ನಿ ಡಿಯೋಲ್​ ಇಬ್ಬರ ಜೊತೆಯೂ ಪರದೆಯ ಮೇಲೆ ನಾಯಕಿಯಾಗಿ ಕಾಣಿಸಿಕೊಂಡು ರೊಮಾನ್ಸ್​ ಮಾಡಿದ ತಾರೆಯರು ಯಾರು ಗೊತ್ತೆ?
 

Bollywood actresses romanced both Dharmendra and Sunny Deol on silver screens

ಗಂಡು-ಹೆಣ್ಣಿನ ವಯಸ್ಸಿನ ಅಂತರದ ವಿಷಯ ಬಂದಾಗ ಒಬ್ಬೊಬ್ಬರು ಒಂದೊಂದು ರೀತಿಯ ಅಂತರವನ್ನು ಹೇಳುತ್ತಾರೆ. ಅದಕ್ಕೆ ವೈಜ್ಞಾನಿಕ ಕಾರಣಗಳನ್ನೂ ನೀಡುತ್ತಾರೆ. ಆದರೆ ಇತ್ತೀಚಿನ ಕೆಲವು ಉದಾಹರಣೆಗಳನ್ನು ನೋಡಿದರೆ 10-15-20 ವರ್ಷಗಳ ಅಂತರ ಇರುವವರನ್ನು ಮದುವೆಯಾಗಿದ್ದನ್ನು, ಇಲ್ಲವೇ ಹೆಂಡತಿ ಗಂಡನಿಗಿಂತ ತೀರಾ ದೊಡ್ಡವಳು ಇರುವುದನ್ನೂ ಗಮನಿಸುತ್ತಿದ್ದೇವೆ. ಇನ್ನು ಚಿತ್ರರಂಗದ ವಿಷಯಕ್ಕೆ ಬಂದರೆ ಆ ಮಾತೇ ಬೇರೆ ಬಿಡಿ. ಮಗಳ ವಯಸ್ಸಿನ ನಾಯಕಿಯ ಜೊತೆ ಚಿತ್ರದಲ್ಲಿ ರೊಮಾನ್ಸ್​ (Romance) ಮಾಡುವುದು, ನಿಜ ಜೀವನದಲ್ಲಿ ಅವರನ್ನು ಮದುವೆಯಾಗುವುದು ಎಲ್ಲವೂ ನಡೆದೇ ಇದೆ. ಇದು ಒಂದೆಡೆಯಾದರೆ ಕುತೂಹಲದ ವಿಷಯವೆಂದರೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಕೆಲವು ಹೀರೊಯಿನ್​ಗಳು (Heroine) ಅಂದು ಅಪ್ಪನ ಜೊತೆ ಬೆಳ್ಳಿ ಪರದೆಯ ಮೇಲೆ ರೊಮಾನ್ಸ್​ ಮಾಡಿದ್ದರೆ, ನಂತರ ಮಗನ ಜೊತೆಯೂ ನಾಯಕಿಯಾಗಿ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಬಾಲಿವುಡ್​ನ ಎವರ್​ಗ್ರೀನ್​ ತಾರೆ ಎನಿಸಿಕೊಂಡಿರೋ ಧರ್ಮೇಂದ್ರ (Dharmendra) ಹಾಗೂ ಅವರ ಮಗ ಸನ್ನಿ ಡಿಯೋಲ್​ (Sunny Deol) ಜೊತೆಗೆ ಹಲವು ನಾಯಕಿಯರು ಪರದೆಯ ಮೇಲೆ ತಬ್ಬಿ ರೊಮಾನ್ಸ್​ ಮಾಡಿದ್ದಾರೆ. ಅವರ ಪೈಕಿ ಕೆಲವರ ವಿವರ ಇಲ್ಲಿ ನೀಡಲಾಗಿದೆ.   

ಡಿಂಪಲ್ ಕಪಾಡಿಯಾ (Dimple Kapadia), ಅಮೃತಾ ಸಿಂಗ್ 
ಈ ಪಟ್ಟಿಯಲ್ಲಿ ಮೊದಲ ಹೆಸರು ನಟಿ ಡಿಂಪಲ್ ಕಪಾಡಿಯಾ ಅವರದ್ದು. ಡಿಂಪಲ್ ಮತ್ತು ಸನ್ನಿ ಡಿಯೋಲ್ ಕೂಡ ತಮ್ಮ ಸಂಬಂಧಕ್ಕಾಗಿ ಪ್ರಚಾರದಲ್ಲಿದ್ದರು. ಡಿಂಪಲ್ ಸನ್ನಿ ಡಿಯೋಲ್ ಅವರೊಂದಿಗೆ 'ಅರ್ಜುನ್', 'ಗುಣಾ' ಮತ್ತು 'ಆಗ್ ಕಾ ಗೋಲಾ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅವರು ನಟ ಧರ್ಮೇಂದ್ರ ಅವರೊಂದಿಗೆ 'ಬಂಟ್ವಾರ' ಮತ್ತು 'ಶೆಹಜಾದಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ನಟಿ ಅಮೃತಾ ಸಿಂಗ್ (Amrutha Singh) ಅವರು ಧರ್ಮೇಂದ್ರ ಅವರೊಂದಿಗೆ 'ಸಚೈ ಕಿ ತಕ್ತ್' ಚಿತ್ರದಲ್ಲಿ ಕೆಲಸ ಮಾಡಿದ್ದರೆ, ಅವರು ಸನ್ನಿ ಡಿಯೋಲ್ ಜೊತೆ 'ಬೇತಾಬ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

ಜಯಪ್ರದಾ (Jayaprada), ಪೂನಂ ಧಿಲ್ಲೋನ್
ಜಯಪ್ರದಾ ಅವರು ಧರ್ಮೇಂದ್ರ ಅವರೊಂದಿಗೆ 'ಕುಂದನ್' ಚಿತ್ರದಲ್ಲಿ ಕಾಣಿಸಿಕೊಂಡರು, ಅವರು ನಟ ಸನ್ನಿ ಡಿಯೋಲ್ ಅವರೊಂದಿಗೆ 'ವೀರ್ತಾ' ಚಿತ್ರದಲ್ಲಿ ಕೆಲಸ ಮಾಡಿದರು. ನಟಿ ಪೂನಂ ಧಿಲ್ಲೋನ್  (Poonam Dhiloon) 1988 ರ ಚಲನಚಿತ್ರ 'ಸೋನೆ ಪೆ ಸುಹಾಗಾ' ಚಿತ್ರದಲ್ಲಿ ಧರ್ಮೇಂದ್ರ ಎದುರು ಕಾಣಿಸಿಕೊಂಡರು, ಅವರು ಸನ್ನಿ ಡಿಯೋಲ್ ಜೊತೆ 'ಸೋಹ್ನಿ ಮಹಿವಾಲ್' ನಲ್ಲಿ ಕೆಲಸ ಮಾಡಿದರು.

ಶ್ರೀದೇವಿ (Sridevi), ಕಿಮಿ ಕಾಟ್ಕರ್

ನಟಿ ಶ್ರೀದೇವಿ ಅವರು ಧರ್ಮೇಂದ್ರ ಅವರೊಂದಿಗೆ ‘ನಾಕಾಬಂದಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವರು ಸನ್ನಿ ಡಿಯೋಲ್ ಅವರೊಂದಿಗೆ ‘ನಿಗಾಹೆನ್’ ಚಿತ್ರದಲ್ಲಿ ಕೆಲಸ ಮಾಡಿದರು. ನಟಿ ಕಿಮಿ ಕಾಟ್ಕರ್ ಕೂಡ ಈ ತಂದೆ-ಮಗ ಜೋಡಿಯೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಕಿಮಿ ಕಾಟ್ಕರ್ (Kimi Katkar) 'ಹಮ್ಲಾ' ಚಿತ್ರದಲ್ಲಿ ಧರ್ಮೇಂದ್ರ ಎದುರು ಕಾಣಿಸಿಕೊಂಡರು ಮತ್ತು ಕಿಮಿ 'ವರ್ದಿ' ಚಿತ್ರದಲ್ಲಿ ಸನ್ನಿ ಡಿಯೋಲ್‌ಗೆ ರೊಮ್ಯಾನ್ಸ್ ಮಾಡಿದರು.

Valentines Day: ಬೆಡ್​ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!

ಇನ್ನು ಅಪ್ಪ ಮಗನ ಕುರಿತು ಹೇಳುವುದಾದರೆ, ಧರ್ಮೇಂದ್ರ ಅವರು 87 ನೇ ವಯಸ್ಸಿನಲ್ಲಿಯೂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಧರ್ಮೇಂದ್ರ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ.  ಸನ್ನಿ ಡಿಯೋಲ್ ಅವರು ತಮ್ಮ ಮುಂಬರುವ ಚಿತ್ರ 'ಗದರ್ 2' ಗಾಗಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಈ ವರ್ಷ ಆಗಸ್ಟ್ 11 ರಂದು ಚಿತ್ರವು ಚಿತ್ರಮಂದಿರಗಳಿಗೆ ಬರಲಿದೆ.

Latest Videos
Follow Us:
Download App:
  • android
  • ios