Asianet Suvarna News Asianet Suvarna News

Underworld Dons ಮೋಡಿಗೆ ಸಿಲುಕಿ ಭವಿಷ್ಯ ಕಳಕೊಂಡ ಖ್ಯಾತ ಬಾಲಿವುಡ್ ನಟಿಯರು

ಭೂಗತ ಪಾತಕಿಗಳ ಮೋಡಿಗೆ ಸಿಲುಕಿ ಭವಿಷ್ಯ ಕಳಕೊಂಡಿದ್ದಾರೆ ಕೆಲವು ಖ್ಯಾತನಾಮ ಬಾಲಿವುಡ್​ ನಟಿಯರು. ಅವರ ಪೈಕಿ ಕೆಲವರ ಪರಿಚಯ ಇಲ್ಲಿದೆ. 
 

Bollywood actresses fell in love with underworld dons like dawood ibrahim haji mastan abu salem
Author
First Published Apr 24, 2023, 12:41 PM IST | Last Updated Apr 24, 2023, 2:22 PM IST

ಬಾಲಿವುಡ್​ ಭೂಗತಪಾತಕಿಗಳ (Underworld) ಕೈಯಲ್ಲಿ ಕುಣಿಯುತ್ತಿದೆ ಎಂಬ ಮಾತು ಇಂದು - ನಿನ್ನೆಯದ್ದಲ್ಲ. ಭೂಗತ ಜಗತ್ತು ಮತ್ತು ಗ್ಲಾಮರ್ ನಡುವಣ ಸಂಬಂಧ ಜಗಜ್ಜಾಹೀರವಾಗಿದೆ. ಬಾಲಿವುಡ್,  ಭೂಗತ ಜಗತ್ತು ಮಾತ್ರವಲ್ಲದೇ ಇಲ್ಲಿಯ ಕೆಲ ತಾರೆಯರು ಐಎಸ್​ಐನೊಂದಿಗೂ  ಆಳವಾದ ಸಂಪರ್ಕವನ್ನು ಹೊಂದಿದ್ದಾರೆ ಎಂಬ ಮಾತು ಕೆಲ ವರ್ಷಗಳ ಹಿಂದೆ ಇಂಡಸ್ಟ್ರಿಯನ್ನು ತಲ್ಲಣಗೊಳಿಸಿದ್ದೂ ಇದೆ. ಭೂಗತ ಲೋಕದ ಮಾಫಿಯಾ ಸಿನಿಮಾಗಳಲ್ಲಿ ಹಣ ಹೂಡಿಕೆ ಮಾಡುವುದಲ್ಲದೆ, ನಟಿಯರೊಂದಿಗಿನ ಸಂಬಂಧದಿಂದಲೂ ಸುದ್ದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ನಟರು  ಆಡಿದ್ದ ಮಾತುಗಳು ಸಕತ್​ ವೈರಲ್​ ಆಗಿದ್ದವು. ಅವರ ಮಾತುಗಳಿಂದ ಇದು ನಿಜವೇ ಎಂದು ಪ್ರಶ್ನೆ ಉದ್ಭವವಾಗಿತ್ತು. ಆದರೆ ನಟರು ಫೇಮಸ್​ ಆಗುತ್ತಿದ್ದಂತೆಯೇ ಈ ಮಾತು ತೆರೆಮರೆಗೆ ಸರಿಯಿತಾದರೂ, ಬಾಲಿವುಡ್​ ಜಗತ್ತು ಭೂಗತ ಜಗತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದೆ, ಅಲ್ಲಿಂದಲೇ ಹಣದ ಹರಿವು ಬರುತ್ತಿದೆ ಎಂದು ಈಗಲೂ ಖುದ್ದು ಇಂಡಸ್ಟ್ರಿಯವರೇ  ಹೇಳುವುದು ಉಂಟು. ಇವುಗಳ ನಡುವೆಯೇ ಇದೀಗ ಖ್ಯಾತನಾಮರಾಗಿದ್ದ ಚಿತ್ರನಟಿಯರು ಹೇಗೆ ಭೂಗತ ಪಾತಕಿಯರ ಪ್ರೀತಿಗೆ ಸಿಲುಕಿ ನರಳಿದ್ದಾರೆ, ಕೆಲವರು ಇನ್ನೂ ಸಂಬಂಧ ಹೊಂದಿದ್ದಾರೆ ಎಂಬ ಬಗೆಗಿನ ಸುದ್ದಿಗಳು ವೈರಲ್​ ಆಗಿವೆ. ಹೇಗಾದರೂ ಮಾಡಿ ಪ್ರಸಿದ್ಧಿಗೆ ಬರಬೇಕು, ಹಣ ಮಾಡಬೇಕು ಎಂಬ ಹುಂಬು ಹಂಬಲದಿಂದ ಭೂಗತಲೋಕದವರ ಜೊತೆ ಸಂಬಂಧ ಇರಿಸಿಕೊಂಡಿರುವ ನಟಿಯರು ಪಟ್ಟ ಪಾಡು ಅವರಿಗೇ ಪ್ರೀತಿ. 

ಮಂದಾಕಿನಿ (Mandakini)
ಒಂದೊಮ್ಮೆ ಚಿತ್ರರಂಗವನ್ನೇ ಆಳಿದ ನಟಿಯರು ಹೇಗೆ ಈ ಪಾತಕಿಗಳ ಸೆಳೆತಕ್ಕೆ ಒಳಗಾದರು ಎಂಬ ಮಾಹಿತಿ ವೈರಲ್​ ಆಗುತ್ತಿದೆ. ಈ ಪೈಕಿ ಒಬ್ಬ ನಟಿ ಜೈಲಿಗೆ ಹೋಗಬೇಕಾಗಿ ಬಂದರೆ, ಮತ್ತೊಬ್ಬ ನಟಿ ಡ್ರಗ್ ದಂಧೆ ಪ್ರಕರಣದಲ್ಲಿ ತಪ್ಪಿತಸ್ಥಳಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ! ಅವರ ಸಾಲಿನಲ್ಲಿ ಮೊದಲಿಗೆ ಕಾಣಿಸುವವರು ನಟಿ ಮಂದಾಕಿನಿ. ‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದ ಮೂಲಕ ಫೇಮಸ್ ಆಗಿದ್ದರು ಮಂದಾಕಿನಿ (Mandakini). ಇವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲೆಗೆ ಬಿದ್ದರು.  ಬಾಲಿವುಡ್​ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ದಾವೂದ್​ ಸೆರೆಯಲ್ಲಿ ಸಿಕ್ಕಿರು. ಭವಿಷ್ಯ ಕಳೆದುಕೊಂಡರು.  ದಾವೂದ್ ಜೊತೆಗಿನ ಫೋಟೋ ವೈರಲ್ (Photo Viral) ಆಗುತ್ತಿದ್ದಂತೆಯೇ ಸಿನಿಮಾ ಅಲ್ಲಿಗೇ ನಿಂತಿತು. ಅವಕಾಶಗಳು ಕುಸಿದವು.  1996ರ ಸಿನಿಮಾ 'ಜೋರ್​ದಾರ್​'  ಅವರ ಕೊನೆಯ ಚಿತ್ರ. ಇದಕ್ಕಿದ್ದಂತೆಯೇ  ನಟಿ ಉದ್ಯಮದಿಂದ ಕಣ್ಮರೆಯಾಗಿ ಹಲವು ವರ್ಷ ಯಾರಿಗೂ ಕಾಣಿಸಿಕೊಳ್ಳಲೇ ಇಲ್ಲ. 

ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್​: ವಿಚ್ಛೇದನದ ಬಳಿಕ ಮಗುವಿನ ಅಮ್ಮ!


ಅನಿತಾ ಅಯೂಬ್ (Anitha Ayub). ಹಿನಾ ಕೌಸರ್​
ದಾವೂದ್​ ಇಬ್ರಾಹಿಂ ತೆಕ್ಕೆಗೆ ಬಿದ್ದ ಇನ್ನೋರ್ವ ನಟಿ ಅನಿತಾ ಅಯೂಬ್ (Anitha Ayub). ಇವರು ಕೂಡ ಸಾಕಷ್ಟು ಹೆಸರು ಮಾಡಿದ್ದರು. ಅಸಲಿಗೆ ಇವರು ಪಾಕಿಸ್ತಾನದ ನಟಿ.   ದಾವೂದ್ ಇಬ್ರಾಹಿಂಗೆ ನಿಕಟವಾಗಿದ್ದರು. ಇದು ಎಷ್ಟರ ಮಟ್ಟಿಗೆ ಮುಂದುವರೆಯಿತು ಎಂದರೆ ಒಮ್ಮೆ  ಪಾಕಿಸ್ತಾನಿ ನಿರ್ದೇಶಕ ಜಾವೇದ್ ಸಿದ್ದಿಕಿ (Javed siddiqui) ತಮ್ಮ ಚಿತ್ರಕ್ಕೆ ಅನಿತಾ ಅಯೂಬ್ ಅವರನ್ನು ರಿಜೆಕ್ಟ್ ಮಾಡಿದ್ದ ಕಾರಣಕ್ಕೆ ಅವರ ಕೊಲೆಯಾಗಿ ಹೋಯಿತು. ಅದಕ್ಕೆ ಕಾರಣ ಕೂಡ ದಾವೂದ್​ ಎನ್ನುವುದು ತಿಳಿದುಬಂತು. ಇದಾದ ಬಳಿಕವೂ  ಅನಿತಾ ಕೆಲ ಕಾಲ ಬಾಲಿವುಡ್​ನಲ್ಲೂ ಕೆಲಸ ಮಾಡಿದ್ದರೂ ಕೊನೆಗೆ ಕಣ್ಮರೆಯಾದರು. 70ರ ದಶಕದಲ್ಲಿ ಸಕತ್​ ಫೇಮಸ್​ ಆಗಿದ್ದ ನಟಿ, ಸಿನಿಮಾ ನಿರ್ದೇಶಕ ಕೆ. ಆಸಿಫ್ ಮಗಳು ಹಿನಾ ಕೌಸರ್.  1991 ರಲ್ಲಿ ದರೋಡೆಕೋರ ಇಕ್ಬಾಲ್ ಮಿರ್ಚಿಯನ್ನು ಮದುವೆಯಾದರು. ಸಿನಿಮಾ  ನಿಲ್ಲಿಸಿ ಇಕ್ಬಾಲ್ ಮಿರ್ಚಿ (Iqbal Mirchi) ಅವರೊಂದಿಗೆ ಇವರು ಲಂಡನ್​ನಲ್ಲಿ ನೆಲೆಸಿದ್ದರು. ಇಕ್ಬಾಲ್ ಮಿರ್ಚಿ 2013ರಲ್ಲಿ ನಿಧನರಾದ ಬಳಿಕ ದರೋಡೆಕೋರನ ಪತ್ನಿ ಎಂಬ ಕಾರಣಕ್ಕೆ ಎಲ್ಲಿಯೂ ಅವಕಾಶ ಸಿಗಲೇ ಇಲ್ಲ.

ಮಮತಾ ಕುಲಕರ್ಣಿ, ಮೋನಿಕಾ ಬೇಡಿ
ಇನ್ನು ಮಮತಾ ಕುಲಕರ್ಣಿ (Mamata Kulkarni). ಆ ಕಾಲದಲ್ಲಿಯೇ ನಗ್ನ ಚಿತ್ರದ ಪೋಸ್​ ಕೊಟ್ಟು ಫೇಮಸ್​ ಆಗಿದ್ದ ನಟಿಯೀಕೆ.  ಸೌಂದರ್ಯದ ಘನಿಯಂತಿದ್ದ ಮಮತಾಗೆ ಭೂಗತ ಪಾತಕಿ ಛೋಟಾ ರಾಜನ್ ಜೊತೆ ಸಂಬಂಧ ಉಂಟಾಯಿತು.  ನಂತರ, ಈಕೆಯ ಹೆಸರು ವಿಕ್ಕಿ ಗೋಸ್ವಾಮಿಯೊಂದಿಗೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರೂ  2000 ಕೋಟಿ ರೂಪಾಯಿ ಡ್ರಗ್ ದಂಧೆ ಪ್ರಕರಣದಲ್ಲಿ ಆರೋಪಿಗಳಾದ ಬಳಿಕ ಮಮತಾ ಬದುಕು ನರಕವಾಯಿತು. ನಟಿ ಮೋನಿಕಾ ಬೇಡಿ ಅವರದ್ದು ಇನ್ನೊಂದು ಕಥೆ. ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ ಮತ್ತು ಗೋವಿಂದ ಅವರಂತಹ ನಾಯಕರ ಜೊತೆ ಕೆಲಸ ಮಾಡಿದ್ದ ಮೋನಿಕಾ  ಭೂಗತ ಪಾತಕಿ ಅಬು ಸಲೇಂ ಅವರೊಂದಿಗಿನ ಸಂಬಂಧ ಹೊಂದಿದ್ದರು. ಇದನ್ನು ಖುದ್ದು ಅವರೇ  ಬಹಿರಂಗಪಡಿಸಿದ್ದರು.  ಇಸ್ಲಾಂಗೆ ಮತಾಂತರಗೊಂಡು  ಅಬು ಸಲೇಂ ಅವರನ್ನು ವಿವಾಹವಾದರು. ಆದರೆ ಆಮೇಲಿನದ್ದು ನರಕದ ಬಾಳು.  ಮೋನಿಕಾ ಮತ್ತು ಅಬು ಸಲೇಂ ಅವರನ್ನು 2002ರಲ್ಲಿ ಲಿಸ್ಬನ್ ಪೊಲೀಸರು ನಕಲಿ ಪಾಸ್​ ಪೋರ್ಟ್​ಗಳನ್ನು ಬಳಸಿ ಪೋರ್ಚುಗಲ್​ಗೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಿದ್ದರು. ಅವರನ್ನು 2005 ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಎರಡು ವರ್ಷಗಳ ಜೈಲು ಶಿಕ್ಷೆಯ ನಂತರ, ಮೋನಿಕಾ 2007 ರಲ್ಲಿ ಬಿಡುಗಡೆಯಾದರು. ಇನ್ನೋರ್ವ ನಟಿ ಮಧುಬಾಲಾ ಅವರನ್ನೇ ಹೋಲುತ್ತಿದ್ದ ನಟಿ ಸೋನಾ. ಇವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಸಕತ್​ ಖ್ಯಾತನಾಮರಾಗಿದ್ದರು. ಆದರೆ ಡಾನ್ ಹಾಜಿ ಮಸ್ತಾನ್ ಅವರನ್ನು ಪ್ರೀತಿಸಿ ಮದುವೆಯಾಗಿ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟರು. 

ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!

Latest Videos
Follow Us:
Download App:
  • android
  • ios