ಸಿನಿಮಾ ನಟಿಯರು ಬಾಡಿ ಶೇಮಿಂಗ್ ಗೆ ಆಗಾಗ ಒಳಗಾಗುತ್ತಾರೆ. ಅಂತಹ ನಟಿಯರ ಸಾಲಿಗೆ ವಿದ್ಯಾ ಬಾಲನ್ ಸೇರುತ್ತಾರೆ.  ತಮಗಾದ ಬಾಡಿ ಶೇಮಿಂಗ್ ಅವಮಾನದ ಬಗ್ಗೆ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್ ಮಾತನಾಡಿದ್ದಾರೆ.

ಮಲೈಕಾ-ಅರ್ಜುನ್ ಇದೇ ತಿಂಗಳು ಮದುವೆಯಾಗ್ತಾ ಇರೋದು ನಿಜನಾ?

’ಒಂದು ಕಾಲದಲ್ಲಿ ನಾನು ತುಂಬಾ ದಪ್ಪಗಿದ್ದೆ. ಅದಕ್ಕಾಗಿ ನನ್ನ ದೇಹದ ಜೊತೆ ಹೋರಾಟ ಮಾಡಿದೆ.ಆಗೆಲ್ಲಾ ನನ್ನ ದೇಹದ ಮೇಲೆ ಸಿಟ್ಟು ಬರುತ್ತಿತ್ತು. ದ್ವೇಷ ಹುಟ್ಟುತ್ತಿತ್ತು. ನನ್ನ ದೇಹವನ್ನು ಬದಲಾಯಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಆಗ ಎಲ್ಲರೂ ನನ್ನನ್ನು ಒಪ್ಪಿಕೊಳ್ಳುತ್ತಾರೆ. ಎಲ್ಲರ ಪ್ರೀತಿಗೆ ಪಾತ್ರಳಾಗುತ್ತೇನೆ ಎನಿಸುತ್ತಿತ್ತು. ಆದರೆ ನಾನು ತೆಳ್ಳಗಾದಾಗ ನನಗೆ ಅನಿಸಿದ್ದು ನಾನು ಎಲ್ಲರಿಂದಲೂ ಸಂಪೂರ್ಣವಾಗಿ ಸ್ವೀಕರಿಸಲ್ಪಟ್ಟಿಲ್ಲ ಎಂದು ತಿಳಿಯಿತು. ಬೇರೆಯವರಿಗೋಸ್ಕರ ನೀವು ಬದಲಾಗಬೇಕಿಲ್ಲ’ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಕ್ರಾಪ್ ಮಾಡಿದ ರಾಧಿಕಾ, ಏನಿರಬಹುದು?

ನಿಧಾನವಾಗಿ ನನ್ನ ದೇಹವನ್ನು ಪ್ರೀತಿಸಲು ಆರಂಭಿಸಿದೆ. ಗೌರವಿಸಲು ಶುರು ಮಾಡಿದೆ. ನನ್ನಲ್ಲಿ ನಾನು ಸಂತೋಷವನ್ನು ಹುಡುಕಿಕೊಂಡೆ. ನಾನು ಚೆನ್ನಾಗಿದ್ದೇನೆ ಎಂದೆನಿಸು ಶುರುವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ನೀವು ಎಲ್ಲಿಗೆ ಹೋದರೂ ಜನ ನಿಮ್ಮ ದೇಹದ ಬಗ್ಗೆಯೇ ಮಾತನಾಡುತ್ತಾರೆ. ನನಗದು ಇಷ್ಟವಾಗುವುದಿಲ್ಲ. ಬೇರೆಯವರ ದೇಹದ ಬಗ್ಗೆ ಸುಲಭವಾಗಿ ಮಾತನಾಡುತ್ತಾರೆ. ಸುಲಭವಾಗಿ ನಿರ್ಧರಿಸುತ್ತಾರೆ.ಇದು ಸರಿಯಲ್ಲ ಎಂದಿದ್ದಾರೆ.