ಮುಂಬೈ(ಡಿ.13): ಬಾಲಿವುಡ್ ಹಾಗೂ ಕ್ರಿಕೆಟ್ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಎರಡೂ ಕೂಡ ಭಾರತದಲ್ಲಿ ಅತ್ಯಂತ ಜನಪ್ರೀಯ. ಬಹುತೇಕಾ ಎಲ್ಲಾ ಬಾಲಿವುಡ್ ನಟ ನಟಿಯರಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಹೆಚ್ಚು ಇಷ್ಟವಾಗುತ್ತಾರೆ. ಇದೀಗ ಬಾಲಿವುಡ್ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ತಮ್ಮ ಸಾರ್ವಕಾಲಿಕ ನೆಚ್ಚಿನ ಕ್ರಿಕಟಿಗ ಯಾರು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಸರಳತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್

ದೀಪಿಕಾ ಪಡುಕೋಣೆಯ ನೆಚ್ಚಿನ ಕ್ರಿಕೆಟಿಗ ಬೇರೆ ಯಾರು ಅಲ್ಲ ಟೀಂ ಇಂಡಿಯಾ ಮಾಜಿ ನಾಯಕ, NCA ಚೇರ್ಮೆನ್ ರಾಹುಲ್ ದ್ರಾವಿಡ್. ದ್ರಾವಿಡ್ ನೆಚ್ಚಿನ ಕ್ರಿಕೆಟಿಗ ಯಾಕೆ ಅನ್ನೋದಕ್ಕೂ ದೀಪಿಕಾ ಕಾರಣ ನೀಡಿದ್ದಾರೆ. ದ್ರಾವಿಡ್ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ನಾನು ವಿವರಿಸಬೇಕಿಲ್ಲ. ನನಗೆ ದ್ರಾವಿಡ್ ಹೆಚ್ಚು ಇಷ್ಟವಾಗಲು ಕಾರಣ, ಮೈದಾನದ ಹೊರಗೂ ಜಂಟ್ಲಮೆನ್ ಆಗಿ ನಡೆದುಕೊಂಡಿದ್ದಾರೆ ಎಂದು ದೀಪಿಕಾ ಹೇಳಿದ್ದಾರೆ.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್; ಮೊದಲ ಶತಕ ಸಿಡಿಸಿದ್ದು ಕೊಹ್ಲಿ ಅಲ್ಲ, ರಾಹುಲ್ ದ್ರಾವಿಡ್!

ಕ್ರಿಕೆಟ್‌ನ್ನೇ ಉಸಿರಾಗಿಸಿದ ದ್ರಾವಿಡ್, ಮೈದಾನದ ಹೊರಗೂ ಕೂಡ ಅದೇ ಗೌರವ ಸಂಪಾದಿಸಿದ್ದಾರೆ. ಜೊತೆಗೆ ದ್ರಾವಿಡ್ ಕೂಡ ಬೆಂಗಳೂರಿನವರು. ಬೆಂಗಳೂರಿನ ಅನೇಕರಿಗೆ ದ್ರಾವಿಡ್ ಸ್ಪೂರ್ತಿ ಎಂದು ದೀಪಿಕಾ ಹೇಳಿದ್ದಾರೆ. 

ನಟಿಯಾಗಿರುವ ದೀಪಿಕಾ ಚಾಪಾಕ್ ಚಿತ್ರದ ಮೂಲಕ ಪ್ರೊಡ್ಯುಸರ್ ಆಗಿ ಪದಾರ್ಪಣೆ ಮಾಡಲಿದ್ದಾರೆ. ಆ್ಯಸಿದ್ ದಾಳಿಗೆ ತುತ್ತಾದ ಲಕ್ಷ್ಮೀ ಅಗರ್ವಾಲ್ ಜೀವನ ಚರಿತ್ರೆ ಆಧಾರಿತ ಚಾಪಾಕ್ ಚಿತ್ರದಲ್ಲಿ ದೀಪಿಕಾ ಈಗಾಗಲೇ ಸಂಚಲನ ಸೃಷ್ಟಿಸಿದ್ದಾರೆ. ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.