Asianet Suvarna News Asianet Suvarna News

ನಮ್ಮದು ಹಿಂದೂ-ಕ್ರಿಶ್ಚಿಯನ್ ಲವ್ & ಡಬ್ಬಲ್ ಮ್ಯಾರೇಜ್; ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೆ ಭಾರೀ ವೈರಲ್!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಹಾಡುಗಾರ ನಿಕ್ ಜೋನಾಸ್ ಅವರದು ಪ್ರೇಮ ವಿವಾಹ. ಪ್ರಿಯಾಂಕಾ ಹಿಂದೂ ಹುಡುಗಿಯಾಗಿದ್ದರೆ ನಿಕ್ ಜೊನಸ್ ಕ್ರಿಶ್ಚಿಯನ್ ಹುಡುಗ. ಅವರಿಬ್ಬರ ಲವ್ ಏನೋ ಆಗಿಹೋಯ್ತು, ಆದರೆ ಮದುವೆ ಅಂತ ಬಂದಾಗ ಧರ್ಮ, ಮನೆಯವರು, ನೆಂಟರಿಷ್ಟರು ಎಲ್ಲರೂ ಒಪ್ಪಿ ಆಚರಿಸಬೇಕಾಗುತ್ತದೆ.

Bollywood actress Priyanka chopra tells about hindu christian marriage srb
Author
First Published Nov 25, 2023, 12:37 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಅಮೆರಿಕಾ ವಾಸಿ ಎಂಬುದು ಗೊತ್ತೇ ಇದೆ. ಅಲ್ಲಿನ ಪಾಪ್ ಸಿಂಗರ್ ನಿಕ್ ಜೋನಾಸ್ ಅವರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ಜಗತ್ತಿನಿಂದ  ದೂರವೇ ಉಳಿದಿದ್ದಾರೆ. ಹಾಲಿವುಡ್ ವೆಬ್ ಸಿರೀಸ್ ಮಾಡುತ್ತಾ, ಅಲ್ಲಿ ಹಲವಾರು ಟಿವಿ ಶೋ, ಸಂದರ್ಶನಗಳು ಹಾಗೂ ಸುತ್ತಾಟಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಿಕ್ ಜೊನಾಸ್ ಪ್ರೋಗ್ರಾಂ ಮೆಚ್ಚಿ ಈ ಬಗ್ಗೆ ಹಲವಾರು ಶೋಗಳಲ್ಲಿ ಮಾತನಾಡಿದ್ದಾರೆ ಪ್ರಿಯಾಂಕಾ. ಇಂಥ ಪ್ರಿಯಾಂಕಾ ತಮ್ಮ ಲವ್ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. 

ಹೌದು, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಹಾಡುಗಾರ ನಿಕ್ ಜೋನಾಸ್ ಅವರದು ಪ್ರೇಮ ವಿವಾಹ. ಪ್ರಿಯಾಂಕಾ ಹಿಂದೂ ಹುಡುಗಿಯಾಗಿದ್ದರೆ ನಿಕ್ ಜೊನಸ್ ಕ್ರಿಶ್ಚಿಯನ್ ಹುಡುಗ. ಅವರಿಬ್ಬರ ಲವ್ ಏನೋ ಆಗಿಹೋಯ್ತು, ಆದರೆ ಮದುವೆ ಅಂತ ಬಂದಾಗ ಧರ್ಮ, ಮನೆಯವರು, ನೆಂಟರಿಷ್ಟರು ಎಲ್ಲರೂ ಒಪ್ಪಿ ಆಚರಿಸಬೇಕಾಗುತ್ತದೆ. ಎಲ್ಲರನ್ನೂ ಹೊರಗಿಟ್ಟು ತಾವು ಮದುವೆಯಾಗಲು ಅನೇಕರು ಇಷ್ಟಪಡುವುದಿಲ್ಲ. ಹಾಗೇನೇ, ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಕೂಡ ತಮ್ಮ ಧರ್ಮಗಳ ಅನುಸಾರವೇ ಮದುವೆಯಾಗಲು ತೀರ್ಮಾನಿಸಿದ್ದರಂತೆ. 

ಒಂದೇ 'ಫ್ರೇಂ'ನಲ್ಲಿ ದಿಗ್ಗಜರ ಸಮಾಗಮ; ಎರಡು ದಶಕಗಳ ಬಳಿಕ ರಜನಿಕಾಂತ್-ಕಮಲ್ ಹಾಸನ್ ಭೇಟಿ!

ಪ್ರಿಯಾಂಕಾ ಮತ್ತು ನಿಕ್ ಮದುವೆ ಮಾತುಕತೆಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಲ್ಲಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರಂತೆ. ಅದರಂತೆ ಹಿಂದೂ ಸಂಪ್ರದಾಯದಂತೆ ಜಾತಕ, ಮುಹೂರ್ತ ಎಲ್ಲವನ್ನೂ ನೋಡಿ ಅದಕ್ಕೂ ಮೊದಲು ಹಿಂದಿನ ದಿನ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆದರಂತೆ. ಮರುದಿನ ಸುಮಾರು 200 ಜನ ಆಪ್ತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡರಂತೆ. ಹೀಗೆ, ಹಿಂದೂ-ಕ್ರಿಶ್ಚಿಯನ್ ಪ್ರೇಮಿಗಳಾದ ನಮ್ಮಿಬ್ಬರ ಮದುವೆ ನಡೆಯಿತು ಎಂದಿದ್ದಾರೆ ನಟಿ ಪ್ರಿಯಾಂಕಾ. 

.'ಡ್ಯಾಡೀಸ್ ಲಿಟಲ್ ಗರ್ಲ್' ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಅಬ್ಬಾ ಇಂಥ ನಟಿಯೇ ಈಕೆ!

ಹಾಲಿವುಡ್ ಸಂದರ್ಶನವೊಂದರಲ್ಲಿ ಈ ಬಗ್ಗೆ ನಟಿ ಪ್ರಿಯಾಂಕಾ ಮಾತನಾಡಿದ್ದು, ಅದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡಿದೆ. ಅವರಿಬ್ಬರೂ ಯಾವ ಸಂಪ್ರದಾಯದಂತೆ ಮದುವೆ ಆಗಿರಬಹುದು ಎಂಬ ಹಲವರ ಅನುಮಾನ ಮತ್ತು ಕುತೂಹಲಕ್ಕೆ ಈ ಮೂಲಕ ಉತ್ತರ ಕೊಟ್ಟಿದ್ದಾರೆ ನಟಿ ಪ್ರಿಯಾಂಕಾ. ಹಲವಾರು ಸಂದರ್ಶನಗಳಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

Follow Us:
Download App:
  • android
  • ios