Asianet Suvarna News Asianet Suvarna News

'ಡ್ಯಾಡೀಸ್ ಲಿಟಲ್ ಗರ್ಲ್' ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಅಬ್ಬಾ ಇಂಥ ನಟಿಯೇ ಈಕೆ!

ನಟಿ ಪ್ರಿಯಾಂಕಾ  ಚೋಪ್ರಾ ಅವರು ಇತ್ತೀಚೆಗೆ ಹೆಚ್ಚಾಗಿ ಹಾಲಿವುಡ್ ವೆಬ್ ಸಿರೀಸ್‌ಗಳ ನಟನೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾರಣ, ಅವರು ಅಮೆರಿಕಾ, ಹಾಲಿವುಡ್ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಿಂದಿ ಸಿನಿಮಾ ನಟನೆ ಬಿಟ್ಟು ದೂರದ ಅಮೆರಿಕಾದಲ್ಲಿ ವಾಸವಾಗಿದ್ದಾರೆ. 

Actress Priyanka Chopra Says about the secret of her wrist words Daddys little girl srb
Author
First Published Nov 24, 2023, 1:18 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಿಂದಿ ಸಿನಿಮಾ ನಟನೆ ಬಿಟ್ಟು ದೂರದ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಆದರೆ ಅಲಲ್ಇ ಅವರು ಸುಮ್ಮನೇ ಕೂತಿಲ್ಲ. ಹಾಲಿವುಡ್ ವೆಬ್ ಸಿರೀಸ್, ಮೂವಿಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಈಗ ಹಾಲಿವುಡ್ ಸೆಲೆಬ್ರಿಟಿಗಳು, ಪತ್ರಕರ್ತರು ನಟಿ ಪ್ರಿಯಾಂಕಾರನ್ನು ಸಂದರ್ಶನಗಳ ಮೂಲಕ ಮಾತನಾಡಿಸುತ್ತಿದ್ದಾರೆ. ಈ ಮೂಲಕ ಪ್ರಿಯಾಂಕಾ ಮನಸ್ಸಿನಲ್ಲಿರುವ ಹಲವು ಸಂಗತಿಗಳನ್ನು ಹೊರಜಗತ್ತಿಗೆ ಬಹಿರಂಗ ಗೊಳಿಸುತ್ತಿದ್ದಾರೆ. ಹೀಗಾಗಿ ನಟಿ ಪ್ರಿಯಾಂಕಾ ಮಾತುಗಳು ಈಗ ಜಗತ್ತಿನಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಸುತ್ತಾಡುತ್ತಿದೆ. 

ಇಂಥದೇ ಒಂದು ಸಂದರ್ಶನದಲ್ಲಿ ನಟಿ ಪ್ರಿಯಾಂಕಾರನ್ನು ಮಾತನಾಡಿಸುತ್ತಿದ್ದ ಪತ್ರಕರ್ತರೊಬ್ಬರು 'ಅದೇನು, ನಿಮ್ಮ ಕೈ ಮಣಿಕಟ್ಟನ ಬಳಿ 'ಡ್ಯಾಡೀಸ್ ಲಿಟ್ಲ್ ಗರ್ಲ್' ಎಂದು ಬರೆದಿದೆಯಲ್ಲ' ಎಂದು ಕೇಳುತ್ತಾರೆ. ಬಳಿಕ ನಟಿ ಪ್ರಿಯಾಂಕಾ ಆ ಬಗ್ಗೆ ಮಾತನಾಡಿ 'ಹೌದು, ನಾನು ಯಾವತ್ತಿದ್ದರೂ ನನ್ನ ಡ್ಯಾಡಿಯ ಚಿಕ್ಕ ಮಗುವೇ'. ನನ್ನ ಡ್ಯಾಡಿ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು, ಅವರು ನನಗೆ ರೋಲ್ ಮಾಡೆಲ್ ಆಗಿದ್ದವರು. ನನ್ನಲ್ಲಿ ಕಾನ್ಫಿಡೆನ್ಸ್ ತುಂಬಿದವರು. ನನ್ನ ಹೀರೋ ನನ್ನ ಡ್ಯಾಡಿ' ಎಂದಿದ್ದಾರೆ. 

ಸೂಪರ್ ಸ್ಟಾರ್ ನಟಿಗೆ ಭಾರೀ ಅನ್ಯಾಯ ಎಸಗಿದ್ದ ಅಮೆರಿಕಾ ಆಸ್ಪತ್ರೆ; ನ್ಯಾಯ ಒದಗಿಸಿಕೊಟ್ಟ ಅಧ್ಯಕ್ಷ ಬಿಲ್ ಕ್ಲಿಂಟನ್‌

ಮುಂದುವರೆದ ನಟಿ ಪ್ರಿಯಾಂಕಾ 'ನಾನು ಚಿಕ್ಕವಳಿದ್ದಾಗ ನನ್ನ ತಂದೆ ಒಮ್ಮೆ ಹಿಮಾಲಯಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನನ್ನ ಕೈ ಮಣಿಕಟ್ಟಿನ (wrist)ಬಳಿ 'Daddy's Little Girl' ಎಂದು ಬರೆಸಿದ್ದಾರೆ. ಅದನ್ನು ನಾನು ಯಾವತ್ತೂ ಆಗಾಗ ನೋಡುತ್ತಲೇ ಇರುತ್ತೇನೆ. ನನ್ನ ತಂದೆಯ ಹಳೆಯ ನೆನಪು ನನಗೆ ಮತ್ತೆ ಮತ್ತೆ ಮರುಕಳಿಸುತ್ತದೆ. ನನ್ನ ತಂದೆ 2013ರಲ್ಲಿ ನಿಧನ ಹೊಂದಿದ್ದಾರೆ. ಅವರನ್ನು ಕಳೆದುಕೊಂಡು ನಾನು ಆಗ ಅಕ್ಷರಶಃ ಕಂಗಾಲಾಗಿ ಹೋಗಿದ್ದೆ. ತುಂಬಾ ದಿನಗಳು ನಾನು ನನ್ನ ತಂದೆಯ ನೆನಪುಗಳಿಂದ ಹೊರಬರಲಾಗದೇ ಸೈಲೆಂಟ್ ಸ್ಥಿತಿಗೆ ಜಾರಿದ್ದೆ' ಎಂದಿದ್ದಾರೆ ನಟಿ ಪ್ರಿಯಾಂಕಾ. 

ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ!

ಅಂದಹಾಗೆ, ನಟಿ ಪ್ರಿಯಾಂಕಾ  ಚೋಪ್ರಾ ಅವರು ಇತ್ತೀಚೆಗೆ ಹೆಚ್ಚಾಗಿ ಹಾಲಿವುಡ್ ವೆಬ್ ಸಿರೀಸ್‌ಗಳ ನಟನೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾರಣ, ಅವರು ಅಮೆರಿಕಾ, ಹಾಲಿವುಡ್ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿದ್ದಾರೆ. ಬಾಲಿವುಡ್ ಆಫರ್‌ಗಳನ್ನು ನಿರಾಕರಿಸುತ್ತಿರುವ ಅವರು, ನಾನು ಭಾರತದಲ್ಲಿದ್ದಾಗ ಅಲ್ಲಿನ ಚಿತ್ರರಂಗದಲ್ಲಿ ಹೆಚ್ಚಾಗಿಯೇ ತೊಡಗಿಸಿಕೊಂಡಿದ್ದೆ. ನಾನೀಗ ನನ್ನ ಗಂಡನ ಮನೆ ಅಮೆರಿಕಾದಲ್ಲಿ ವಾಸವಿದ್ದೇನೆ. ನಾನು ನನ್ನ ಕೆರಿಯರ್‌ ಇಲ್ಲೇ ಮುಂದುವರೆಸುತ್ತಿದ್ದೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ. 

Follow Us:
Download App:
  • android
  • ios