Asianet Suvarna News Asianet Suvarna News

ನನ್ನ ಸೊಂಟದ ಸುತ್ತಳತೆ ಮೇಲೆ ಯಾವತ್ತೂ ಕಣ್ಣು ನೆಟ್ಟಿರುತ್ತೆ; ಪ್ರಿಯಾಂಕಾ ಚೋಪ್ರಾ ಹೇಳಿಕೆಗೆ ಬೆರಗಾಯ್ತು ಹಾಲಿವುಡ್ !

ನಾನು ಮೂಲಭೂತವಾಗಿ ಆಹಾರ ಪ್ರಿಯೆ. ನನಗೆ ಎಲ್ಲಾ ತರದ ಆಹಾರಗಳನ್ನು ಸವಿಯಲು ಇಷ್ಟ. ಆದರೆ, ನನ್ನ ವೃತ್ತಿಗೆ ಅದು ಸರಿಯಾದ ಆಯ್ಕೆಯಲ್ಲ ಎಂಬುದನ್ನು ಕಷ್ಟಪಟ್ಟು ಅರಿತುಕೊಂಡು ಪಾಲಿಸಿದೆ. ನಾನು ಸ್ಯಾಂಡ್‌ವಿಚ್, ಪಿಜ್ಜಾ ಬರ್ಗರ್‌ ಇವುಗಳನ್ನು ಸವಿಯುವುದನ್ನು ಕಡಿಮೆ ಮಾಡಿದೆ. ನನ್ನ ಸೊಂಟದ ಸುತ್ತಳತೆ ಬಗ್ಗೆ ತುಂಬಾ ಕಾಳಜಿ ವಹಿಸುವ ಅಗತ್ಯವಿತ್ತು

Bollywood actress Priyanka Chopra says her lifestyle and fitness secret srb
Author
First Published Nov 26, 2023, 12:41 PM IST

ಬಾಲಿವುಡ್ ಮೂಲದ ಸದ್ಯ ಹಾಲಿವುಡ್‌ ಲೋಕದಲ್ಲಿ ಮಿನುಗುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, 40 ವರ್ಷಗಳಾದ ಮೇಲೆ ತಮ್ಮ ಜೀವನದಲ್ಲಿ ಏನೇನೆಲ್ಲಾ ಬದಲಾವಣೆ ಆಯಿತು ಎಂಬುದನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಪ್ರಿಯಾಂಕಾ ಚೋಪ್ರಾ, ಕೇಳಿದ ಪ್ರಶ್ನೆಗೆ ಉತ್ತರಿಸುತ್ತ 'ನನಗೆ 40 ವರ್ಷ ಆಗುತ್ತಿದ್ದಂತೆ ಹಲವು ಬದಲಾವಣೆಗೆ ನಾನು ಒಗ್ಗಿಕೊಳ್ಳಬೇಕಾಯ್ತು. ಅದರಲ್ಲಿ ಮೊದಲನೆಯದು ದೇಹ. ನಲವತ್ತು ವರ್ಷಗಳಾಗುತ್ತಿದ್ದಂತೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರಿಸತೊಡಗಿದವು. ಅದನ್ನು ನೋಡಿ ಶಾಕ್ ಫೀಲಿಂಗ್‌ಗೆ ಒಳಗಾಗದೇ ನಾನು ಸಮಚಿತ್ತದಿಂದ ನಿಭಾಯಿಸಿದೆ.

ದೇಹ ಬದಲಾದಂತೆ ಅದಕ್ಕೆ ಪೂರಕವಾಗಿ ಮನಸ್ಸು ಕೂಡ ಬದಲಾಗುತ್ತದೆ. ಸಂಬಂಧಗಳ ಬೆಲೆ ಹೆಚ್ಚು ಅರ್ಥವಾಗತೊಡಗುತ್ತದೆ. ಫ್ಯಾಮಿಲಿ ಮತ್ತು ರಿಲೇಶನ್‌ಶಿಪ್‌ ಬಗ್ಗೆ ಹೆಚ್ಚು ಫೋಕಸ್ ಮಾಡತೊಡಗಿದೆ. ಮನೆಯವರೊಟ್ಟಿಗೆ, ಸಂಬಂಧಿಕರೊಟ್ಟಿಗೆ ನನ್ನಿಂದ ಸಾಧ್ಯವಿರುವಷ್ಟು ಹೆಚ್ಚು ಕಾಲ ಕಳೆಯುತ್ತಿರುವೆ. ನನ್ನ ಹುಟ್ಟಿದ ದೇಶ, ಅಲ್ಲಿನ ಪರಿಸರ, ಸಂಪ್ರದಾಯಗಳ ಜತೆ ಮದುವೆಯಾಗಿ ಬಂದ ವಿದೇಶದ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಆಹಾರದ ವಿಷಯದಲ್ಲಿ ತುಂಬಾ ಕೇರ್ ತೆಗೆದುಕೊಳ್ಳತೊಡಗಿದೆ. 

ಸೂರ್ಯ ತುಂಬಾ ಬೋರಿಂಗ್ ಗಂಡ; ಜ್ಯೋತಿಕಾ ಮಾತಿಗೆ ಬೆಚ್ಚಿಬಿದ್ದ ಸೂರ್ಯ ಫ್ಯಾನ್ಸ್!  

ನಾನು ಮೂಲಭೂತವಾಗಿ ಆಹಾರ ಪ್ರಿಯೆ. ನನಗೆ ಎಲ್ಲಾ ತರದ ಆಹಾರಗಳನ್ನು ಸವಿಯಲು ಇಷ್ಟ. ಆದರೆ, ನನ್ನ ವೃತ್ತಿಗೆ ಅದು ಸರಿಯಾದ ಆಯ್ಕೆಯಲ್ಲ ಎಂಬುದನ್ನು ಕಷ್ಟಪಟ್ಟು ಅರಿತುಕೊಂಡು ಪಾಲಿಸಿದೆ. ನಾನು ಸ್ಯಾಂಡ್‌ವಿಚ್, ಪಿಜ್ಜಾ ಬರ್ಗರ್‌ ಇವುಗಳನ್ನು ಸವಿಯುವುದನ್ನು ಕಡಿಮೆ ಮಾಡಿದೆ. ನನ್ನ ಸೊಂಟದ ಸುತ್ತಳತೆ ಬಗ್ಗೆ ತುಂಬಾ ಕಾಳಜಿ ವಹಿಸುವ ಅಗತ್ಯವಿತ್ತು, ಅದನ್ನು ಮಾಡುತ್ತಿರುವೆ. ಯಾರೇ ಆಗಲಿ, ತಮ್ಮ ಉದ್ಯೋಗಕ್ಕೆ ಸಂಬಂಧಪಟ್ಟು ಸೂಕ್ತವಾದ ದೇಹ, ಮನಸ್ಸು ಮತ್ತು ಎನರ್ಜಿ ಹೊಂದಿರಬೇಕು. ಅದನ್ನು ನಾನು ತುಂಬಾ ಗಮನವಿಟ್ಟು ಪಾಲಿಸುತ್ತಿರುವೆ. 

ಶ್ರೀದೇವಿ ಜತೆ ಡಿಂಗ್ ಡಾಂಗ್; ಮಧ್ಯೆ ವಿಲನ್ ಆಗಿದ್ದವರ ಗುಟ್ಟು ಬಿಚ್ಚಿಟ್ಟ ನಟ ಮಿಥುನ್ ಚಕ್ರವರ್ತಿ

ಪ್ರತಿಯೊಬ್ಬರ ಜೀವನದಲ್ಲಿ ವಯಸ್ಸಿನ ಲೆಕ್ಕ ಸಹಜವಾಗಿ ಏರುತ್ತಲೇ ಇರುತ್ತದೆ. ಅದಕ್ಕೆ ಪೂರಕವಾದ ದೇಹಸ್ಥಿತಿ ನಿರ್ಮಾಣವಾಗುತ್ತದೆ. ದೇಹಕ್ಕೆ ತಕ್ಕ ಮನಸ್ಸು ಕೂಡ ಸಹಜ ಎಂದು ಒಪ್ಪಿಕೊಳ್ಳುತ್ತ ಸಾಗಬೇಕು. ಏನು ಮಾಡಬೇಕೋ ಅದನ್ನು ಮಾಡುತ್ತಲೇ ಇರಬೇಕು. ನನಗೆ ಯಾವಾಗಲೂ ನನ್ನ ದೇಹ, ಅದರಲ್ಲೂ ಮುಖ್ಯವಾಗಿ ನನ್ನ ಸೊಂಟದ ಮೇಲೆ ಕಣ್ಣು ಇರುತ್ತದೆ. ಕಾರಣ, ಸೊಂಟದ ಸುತ್ತಳತೆ ಹೆಚ್ಚಾಗುತ್ತಿದ್ದಂತೆ ಆಹಾರ, ವ್ಯಾಯಾಮ ಎಲ್ಲವನ್ನೂ ಬದಲಾಯಿಸಿ ಮತ್ತೆ ದೇಹವನ್ನು ಫಿಟ್ ಆಗಿ ಇಡುವತ್ತ ಗಮನಹರಿಸುತ್ತೇನೆ. ಒಟ್ಟಿನಲ್ಲಿ, ಪ್ರಿಯಾಂಕಾ ತಮ್ಮ ಬಗ್ಗೆ ಹೇಳಿರುವ ಲೈಫ್ ಸ್ಟೈಲ್ ಟಿಪ್ಸ್ ಹಲವರಿಗೆ ಉಪಯೋಗ ಆಗಲಿದೆ ಎನ್ನಬಹುದು. 

Latest Videos
Follow Us:
Download App:
  • android
  • ios