ಬಾಲಿವುಡ್ ಈ ನಿರ್ದೇಶಕ ನನ್ನ ಸಲ್ವಾರ್ ಕಮೀಜ್ ಒಳಗೆ ಕೈ ಹಾಕಿದ್ದ:ನಟಿ
#MeToo ಆರೋಪ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಅಲ್ಲೋ ಕಲ್ಲೋಲ ಎಬ್ಬಿಸಿದ ಅಭಿಯಾನ. ನಟಿಯರು ತಮ್ಮ ಪುರುಷ ಸಹವರ್ತಿಗಳ ವಿರುದ್ಧ ಮಾಡಿದ ಆರೋಪ ಚಿತ್ರ ರಸಿಕರನ್ನು ಬೆಚ್ಚಿ ಬೀಳಿಸಿತ್ತು.

#MeToo ಎಂಬ ಅಭಿಯಾನ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ಒಬ್ಬರಿಂದ ಆರಂಭವಾದ ಈ ಕ್ಯಾಂಪೇನ್ ಎಲ್ಲೆಡೆ ಹರಡಿ, ಪ್ರತಿಯೊಬ್ಬರೂ ಸಿನಿ ಇಂಡಸ್ಟ್ರಿಯಲ್ಲಿ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದು ಇದೀಗ ಇತಿಹಾಸ. ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ನಟಿ ಶ್ರುತಿ ಹರಿಹರನ್, ಹಿರಿಯ ನಟ ಅರ್ಜನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.
ಬಾಲಿವುಡ್‌ನಲ್ಲಿ ಬ್ಲ್ಯಾಕ್ ಫ್ರೈಡೇ, ದೋಬಾರಾ, ಬಾಂಬೇ ವೆಲ್ವೆಟ್, ಅಗ್ಲಿ, ಪಾಂಚ್ ಸೇರಿ ಹತ್ತು ಹಲವು ಸಿನಿಮಾಗಳನ್ನು ನಿರ್ದೇಶಿದ ಅನುರಾಗ್ ಕಶ್ಯಪ್ ಚಿತ್ರವೆಂದರೆ ಬಾಲಿವುಡ್ ಬಾಯಿ ಕಳೆದುಕೊಂಡು ಕಾಯುತ್ತಿದೆ. ಇಂಥ ನಿರ್ದೇಶಕನ ವಿರುದ್ಧ ಸರಿಯಾಗಿ ಮೂರು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಈ ಖ್ಯಾತ ನಿರ್ದೇಶಕನ ವಿರುದ್ದ ನಟಿ ಪಾಯಲ್ ಘೋಷ್ ಕೆಲವು ಆರೋಪಗಳನ್ನು ಮಾಡಿದ್ದರು. ಅದೇನು? ಇಲ್ಲಿ ಮೆಲಕು ಹಾಕಲಾಗಿದೆ.
ಬಾಲಿವುಡ್‌ನ ಖದರೇ ಬೇರೆ ಬಿಡಿ. ಅಲ್ಲಿರುವ ಅನೇಕರ ವಿರುದ್ಧ ಈ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಅದರಲ್ಲಿಯೂ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕೇಳಿ ಬಂದ ಆರೋಪಗಳಂತೂ ಒಂದೆರಡಲ್ಲ. ಅದರಲ್ಲಿಯೂ ನಟಿ ಪಾಯಲ್ ಘೋಷ್ ಅನುರಾಗ್ ಕಶ್ಯಪ್ ವಿರುದ್ಧ ಮಾಡಿರುವ ಗಂಭೀರ ಆರೋಪಗಳು ಚಿತ್ರಗವನ್ನೇ ಬೆಚ್ಚಿ ಬೀಳಿಸಿತ್ತು. ಇವರು ನಿರ್ದೇಶಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದಲ್ಲದೇ, ಪೊಲೀಸ್ ಕಂಪ್ಲಂಟ್ ಸಹ ಲಾಡ್ಜ್ ಮಾಡಿದ್ದರು.
'ನನ್ನ ಮುಂದೆಯೇ ಬಟ್ಟೆ ಬಿಚ್ಚಿದ್ದ ನಿರ್ದೇಶಕ' ಮತ್ತೆ ಮೀಟೂ ಘಾಟು!
ನಟಿಗೆ ಅಡುಗೆ ಮಾಡಿ ಬಡಿಸಿದ್ದ ಕಶ್ಯಪ್:
ಅನುರಾಗ್ ಕಶ್ಯಪ್ ತಮ್ಮ ಜೊತೆ ನಡೆದುಕೊಂಡ ರೀತಿಯನ್ನು ವಿವರಿಸುತ್ತಾ, ಮೊದಲನೆ ಬಾರಿ ಕಶ್ಯಪ್ ಮನೆಗೆ ಹೋದಾಗ ಅವರೇ ಅಡುಗೆ ಮಾಡಿ ಬಡಿಸಿದ್ದರು. ನಾನು ತಿಂಡಿ ತಿಂದ ಪ್ಲೇಟ್ ಸಹ ಅವರೇ ತೆಗೆದುಕೊಂಡು ಹೋದರು. ಸಿನಿಮಾ ಜಗತ್ತಿನ ಅನೇಕ ವಿಚಾರಗಳನ್ನು ಮೊದಲ ಭೇಟಿಯಲ್ಲಿ ವಿವರಿಸಿದ್ದರು, ಎಂದಿದ್ದರು.
ನಂತರ ಕಶ್ಯಪ್ ಅವರು ಒಂದೊಂದೇ ಚೇಷ್ಟೆಯನ್ನು ಬಿಚ್ಚಿಟ್ಟ ಪಾಯಲ್, ಅನುರಾಗೇ ಬಟ್ಟೆ ಬಿಚ್ಚ ಪ್ರಸಂಗವನ್ನೂ ಹೇಳಿ ಕೊಂಡಿದ್ದರು. ಮಾಧ್ಯಮವೊಂದರ ಜತೆ ಮಾತನಾಡಿದ ಈ ನಟಿ ಕಶ್ಯಪ್‌ನ ಮತ್ತೊಂದು ಕರಾಳ ಮುಖವನ್ನು ತೆರೆದಿಟ್ಟಿದ್ದರು. ಯಾಕೆ ನಾಚಿಕೆ ಮಾಡಿಕೊಳ್ಳುತ್ತೀಯಾ, ಎಲ್ಲರೂ ಹೀಗೆ ಮಾಡುತ್ತಾರೆ ಎಂದು ಕಶ್ಯಪ್ ಹೇಳಿದ್ದರು. ಎರಡನೇ ಬಾರಿ ಅವರ ಮನೆಗೆ ಹೋದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಲವಂತ ಮಾಡಿದ್ದರು. ಹೆಣ್ಣು ಮಕ್ಕಳೊಂದಿಗೆ ಸುಖಕರ ಸಮಯ ಕಳೆದಿದ್ದೇನೆ, ಎಂದು ಹೇಳಿ ಮೈಮೇಲೆ ಬಂದಿದ್ದರು ಎಂದು ನಟಿ ಘೋಷ್, ಕಶ್ಯಪ್ ವಿರುದ್ಧ ಗುರುತರ ಆರೋಪ ಮಾಡಿದ್ದರು.
ಎಲ್ಲ ವಿಚಾರಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದ ಟಿ, ಎರಡನೇ ಬಾರಿ ಅನುರಾಗ್ ಅವರನ್ನು ಭೇಟಿ ಮಾಡಲು ಹೋದಾಗ ನಡೆದ ಮತ್ತೊಂದು ಘಟನೆಯನ್ನೂ ವಿವರಿಸಿದ್ದರು. ತಮ್ಮ ಪ್ಯಾಂಟ್ ಜಿಪ್ ತೆಗೆದ ಕಶ್ಯಪ್ ಬಲವಂತ ಮಾಡಿ ನನ್ನ ಸಲ್ವಾರ್ ಕಮೀಜ್ ಒಳಗೇ ಕೈ ಹಾಕಿದ್ದರು. ಇದು ನಡೆಯುತ್ತದೆ. ನನ್ನ ಜತೆಯಲ್ಲಿ ಕೆಲಸ ಮಾಡಿದ ಎಲ್ಲ ನಟಿಯರೂ ಇದಕ್ಕೆ ಸಹಕರಿಸಿದ್ದಾರೆ. ನಾನು ಒಂದು ಕರೆ ಮಾಡಿದರೆ ಅವರು ಬಂದು, ಹೇಳಿದ್ದನ್ನು ಮಾಡುತ್ತಾರೆ ಎಂದು ಹೇಳಿದ್ದರು ಎಂದು ನಟಿ ವಿವರಿಸಿದ್ದರು.
ಸೀರೆಯುಟ್ಟು ನಟಿ ಶ್ರುತಿ ಹರಿಹರನ್ ಮಿಂಚಿದರೆ ಹೆಚ್ಚು ದ್ವೇಷಿಸುವ ನಟಿ ನೀವೇ ಅನ್ನೋದಾ ಫ್ಯಾನ್!
ಇದು ನಡೆದು ಸರಿಯಾಗಿ ಮೂರು ವರ್ಷಗಳಾದರೂ, ಯಾರಿಗೂ ಶಿಕ್ಷೆಯಾಗಿದ್ದು ಬೆಳಕಿಗೆ ಬಂದಿಲ್ಲ. ಧೈರ್ಯ ಮಾಡಿ, ಮಾತನಾಡಿದ ಅನೇಕ ನಟಿಯರಿಗೆ ಸೂಕ್ತ ಅವಕಾಶಗಳು ಸಿಗುವುದೂ ಕಡಿಮೆಯಾಗಿದ್ದು ಮಾತ್ರ ಸುಳ್ಳಲ್ಲ.