Asianet Suvarna News Asianet Suvarna News

ಮೊದಲ ಸಿನಿಮಾದಲ್ಲೇ ಸ್ಟಾರ್ ನಟಿಯಾಗಿ ಬಳಿಕ 50 ಪ್ಲಾಪ್ ಕೊಟ್ಟು ತೆರೆಮರೆಗೆ ಸರಿದಿದ್ದ ನಟಿ; ಮತ್ತೆ ಕಮ್‌ಬ್ಯಾಕ್?

ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದ ಆ ನಟಿಗೆ ಅವಕಾಶವೇನೋ ಬಂತು. ಆದರೆ, ನಟಿಸಿದ ಚಿತ್ರಗಳು ಮಾತ್ರ ಯಶಸ್ಸು ಕಾಣಲಿಲ್ಲ. ಆಕೆಗೆ ಸೌಂದರ್ಯವಿತ್ತು, ಶ್ರೀಮಂತಿಕೆ ಹುಟ್ಟಿನಿಂದಲೇ ಇತ್ತು, ಭಾರತದಲ್ಲಿ ಸಿನಿಮಾರಂಗದ ಬಾಗಿಲು ಕೂಡ ಆಕೆಗಾಗಿ ತೆರೆದಿತ್ತು. ಆದರೆ, ಮೊದಲ ಚಿತ್ರದ ಬಳಿಕ ಸಿಗದ ಸಕ್ಸಸ್ ಆಕೆಯನ್ನು ಮೂಲೆಗುಂಪು ಮಾಡಿತು. 

Bollywood actress Manisha Koirala come back to bollywood soon srb
Author
First Published Oct 30, 2023, 3:05 PM IST

ರಾಜ್ ಕುಮಾರ್, ದಿಲೀಪ್ ಕುಮಾರ್, ಜಾಕಿಶ್ರಾಫ್ ಜತೆ ತೆರೆ ಹಂಚಿಕೊಂಡು ರಾತ್ರೋ ರಾತ್ರಿ ಸ್ಟಾರ್ ನಟಿಯಾದರು. ಮೊದಲ ಚಿತ್ರದಲ್ಲೇ ಬಂದ ಸಕ್ಸಸ್ ಆಕೆಗೆ ಮುಂದಿನ ಮೂರು ವರ್ಷಗಳಲ್ಲಿ ಬರೋಬ್ಬರಿ 7 ಚಿತ್ರಗಳಲ್ಲಿ ನಟಿಸುವ ಸೌಭಾಗ್ಯ ಕರುಣಿಸಿತು. ಆದರೆ, ಆಕೆಯ ದುರಾದೃಷ್ಟ, ಆಕೆ ನಟಿಸಿದ ಎಲ್ಲಾ ಚಿತ್ರಗಳೂ ಪ್ಲಾಪ್ ಪಟ್ಟಿಗೆ ಸೇರಿದವು. ಆಕೆಗೆ ಕೆಟ್ಟ ಟೈಮ್ ಸ್ಟಾರ್ಟ್ ಆಗಿದೆ ಎಂದು ಬಾಲಿವುಡ್ ಮಾತಾಡಿಕೊಂಡಿತು. 

ಆಕೆ, ಇಂಡಿಯಾದವಳಲ್ಲ, ನೇಪಾಳದ ಪ್ರತಿಷ್ಠಿತ ರಾಜಕೀಯ ಮನೆತನದ ಸುಂದರಿ. ಆಕೆಗೆ, ಬಾಲಿವುಡ್ ಬಾಗಿಲು ತೆರೆದಿದ್ದು ಆಕಸ್ಮಿಕ. ಆದರೆ, ಆಕೆ ಹಿಂದಿ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ ನೆಲೆ ನಿಲ್ಲಬೇಕೆಂದು ಭಾರೀ ಪ್ರಯತ್ನಪಟ್ಟಳು. ಆದರೆ, ಆಕೆಗೆ ಅದೃಷ್ಟ ಕೈಕೊಟ್ಟಿತ್ತು. ಆಕೆ ನಟಿಸಿದ ಮೊದಲ ಚಿತ್ರ ಹೊರತಪಡಿಸಿ ಮಿಕ್ಕೆಲ್ಲ ಚಿತ್ರಗಳೂ ಕಲೆಕ್ಷನ್ ಮತ್ತು ಹೆಸರು ಮಾಡಲು ಫೇಲ್ ಆದವು. ಆಕೆಗೆ ಪ್ಲಾಪ್ ನಟಿ ಪಟ್ಟ ಖಾಯಂ ಎಂಬಂತಾಯಿತು. 

ಆದರೆ ಆಕೆ ಹೆದರಲಿಲ್ಲ. ಬಾಲಿವುಡ್ ಕೈ ಹಿಡಿಯದಿದ್ದರೇನಂತೆ, ಕಾಲಿವುಡ್ ಕಡೆ ಮುಖ ಮಾಡಿದಳು. ತಮಿಳು ಮೂಲದ ಸಿನಿಮಾ ಮಾಡಿ ಗೆದ್ದಳು. ಆ ಸಿನಿಮಾ ಬಾಲಿವುಡ್‌ಗೂ ಡಬ್ ಆಗಿ ಅಲ್ಲೂ ಭಾರೀ ಯಶಸ್ಸು ದಾಖಲಿಸಿತು. ಆಕೆಗೆ ಮತ್ತೆ ಬಾಲಿವುಡ್ ಅವಕಾಶದ ಬಾಗಿಲು ತೆರೆದುಕೊಳ್ಳುವ ಟೈಮ್ ಬಂತು. ಆದರೆ, ತಕ್ಷಣಕ್ಕೆ ಯಾವುದೇ ಬಿಗ್‌ ಬಜೆಟ್, ಸೂಪರ್ ಸ್ಟಾರ್ ನಟರ ಜತೆ ನಟಿಸುವ ಅವಕಾಶ ಸಿಗಲಿಲ್ಲ. ಆದರೆ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಆಕೆ ಸಿಕ್ಕ ಸಿನಿಮಾ ಮಾಡಿ ಮುಗಿಸಿದಳು. 

ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದ ಆ ನಟಿಗೆ ಅವಕಾಶವೇನೋ ಬಂತು. ಆದರೆ, ನಟಿಸಿದ ಚಿತ್ರಗಳು ಮಾತ್ರ ಯಶಸ್ಸು ಕಾಣಲಿಲ್ಲ. ಆಕೆಗೆ ಸೌಂದರ್ಯವಿತ್ತು, ಶ್ರೀಮಂತಿಕೆ ಹುಟ್ಟಿನಿಂದಲೇ ಇತ್ತು, ಭಾರತದಲ್ಲಿ ಸಿನಿಮಾರಂಗದ ಬಾಗಿಲು ಕೂಡ ಆಕೆಗಾಗಿ ತೆರೆದಿತ್ತು. ಆದರೆ, ಮೊದಲ ಚಿತ್ರದ ಬಳಿಕ ಸಿಗದ ಸಕ್ಸಸ್ ಆಕೆಯನ್ನು ಮೂಲೆಗುಂಪು ಮಾಡಿತು. ಬೇರೆ ಯಾರೇ ಆಗಿದ್ದರೂ ಡಿಪ್ರೆಶನ್‌ಗೆ ಜಾರಿಬಿಡುತ್ತಿದ್ದರು. ಆದರೆ ಆಕೆ ಗಟ್ಟಿಗಿತ್ತಿ. ಹೆದರಲಿಲ್ಲ, ಬೆದರಲಿಲ್ಲ. ಮತ್ತೊಂದು ಮಗದೊಂದು ಒಳ್ಳೆಯ ಅವಕಾಶಕ್ಕೆ ಕಾದಳು. ಮತ್ತೆ ಸಕ್ಸಸ್ ಕಂಡಳು. 

ಆದರೆ ಆ ನಟಿಗೆ ಅಷ್ಟರಲ್ಲಿ ಆರೋಗ್ಯ ಸಮಸ್ಯೆ ಎದುರಾಯಿತು. ಕ್ಯಾನ್ಸರ್ ವಕ್ಕರಿಸಿ ಆಸ್ಪತ್ರೆ ಸೇರಿಕೊಳ್ಳಬೇಕಾಯಿತು. ಕೀಮೋಥೆರಪಿ ಟ್ರೀಟ್‌ಮೆಂಟ್ ಕಾರಣಕ್ಕೆ ತಲೆಗೂದಲು ಹೋಯಿತು. ಆಕೆಯೆ ಖಾಲಿ ತಲೆ ಫೋಟೋಗಳು ಮಾಧ್ಯಮಗಳಲ್ಲಿ ಓಡಾಡಿದವು. ಆಕೆ ಬದುಕಿದರೆ ಅದೇ ಪವಾಡ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಆದರೂ ಆಕೆ ಹೆದರಲಿಲ್ಲ, ತಲೆ ಕೆಡಿಸಿಕೊಂಡು ಕೂರಲಿಲ್ಲ. ಆಕೆ, ತಾನು ಮತ್ತೆ ಹುಶಾರಾಗುವ ಪಣ ತೊಟ್ಟಳು. ಅನಾರೋಗ್ಯದಿಂದ ಆರೋಗ್ಯ ಮರಳಿ ಪಡೆಯುವಲ್ಲಿ ಯಶಸ್ವಿಯಾದಳು. 

ಬಿಗ್ ಬಾಸ್ ಮನೆಯಲ್ಲಿ ಭಾರೀ ಹೊಡೆದಾಟ; ಕಾರ್ತಿಕ್ ಮುಂದೆ ಮಂಡಿಯೂರಿ ಬಿದ್ದು ಒದ್ದಾಡುತ್ತಿರುವ ಪ್ರತಾಪ್

ಮತ್ತೆ ಆಕೆಯ ವಯೋ ಸಹಜ ಸೌಂದರ್ಯ ಮರುಕಳಿಸಿತು. ಆಕೆ ಮತ್ತೆ ನಟನೆಗೆ ಇಳಿಯುವ ಪ್ರತಿಜ್ಞೆ ಮಾಡಿದಳು. ಈಗ ಆಕೆ ಮತ್ತೆ ಸಿನಿಮಾಗೆ ಆಯ್ಕೆಯಾಗಿದ್ದಾಳೆ. ಸಂಜಯ್ ಲೀಲಾ ಬನ್ಸಾಲಿಯವರ ಮುಂಬರುವ 'ಹಿರಾಮಂಡಿ' ಚಿತ್ರಕ್ಕೆ ಸಹಿ ಹಾಕಿದ್ದಾಳೆ. ಆಕೆ ನಟಿ ಮನಿಷಾ ಕೊಯಿರಾಲಾ. 'ಸೌದಾಗರ್' ಸಿನಿಮಾ ಮೂಲಕ ಪ್ರವೇಶಿಸಿ, ಬಳಿಕ 7 ಪ್ಲಾಪ್ ದಾಖಲಿಸಿ, ಮತ್ತೊಂದು ಹಿಟ್ ಮತ್ತಷ್ಟು ಪ್ಲಾಪ್ ಹೀಗೆ ಸಾಗುತ್ತಾ ಬರೋಬ್ಬರಿ 50 ಪ್ಲಾಪ್ ಚಿತ್ರಗಳನ್ನು ತಮ್ಮ ವೃತ್ತಿಜೀವನದಲ್ಲಿ ಮಾಡಿದರು.

ಸಂಗೀತಾ-ಕಾರ್ತಿಕ್ ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ! 

ರೋಜಾ, 1947 ಲವ್ ಸ್ಟೋರಿ, ಅಗ್ನಿ ಪರೀಕ್ಷಾ ಮುಂತಾದ ಚಿತ್ರಗಳ ಮೂಲಕ ನಟಿ ಮೊನಿಷಾ ಕೊಯಿರಾಲಾ ಬಹಳಷ್ಟು ಜನರಿಗೆ ಪರಿಚಿತ ನಟಿ. ಬಾಲಿವುಡ್ ಘಟಾನುಘಟಿ ನಟರ ಜತೆ ನಟಿಸಿದವಳು. ಈಗ ಮತ್ತೆ ಬಾಲಿವುಡ್ ಚಿತ್ರದ ಮೂಲಕ ಮರುಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಸಕ್ಸಸ್ ಸಿಗಲಿ ಎಂಬುದು ಮನಿಷಾ ಕೊಯಿರಾಲಾ ಅಭಿಮಾನಿಗಳ ಹಾರೈಕೆ. 

Follow Us:
Download App:
  • android
  • ios