Asianet Suvarna News Asianet Suvarna News

ಬಿಗ್ ಬಾಸ್ ಮನೆಯಲ್ಲಿ ಭಾರೀ ಹೊಡೆದಾಟ; ಕಾರ್ತಿಕ್ ಮುಂದೆ ಮಂಡಿಯೂರಿ ಬಿದ್ದು ಒದ್ದಾಡುತ್ತಿರುವ ಪ್ರತಾಪ್

ಕೊನೆಗೂ ನಾಮಿನೇಷನ್ ಪಾಸ್ ಸಿಕ್ಕಿದ್ದು ಡ್ರೋಣ್ ಪ್ರತಾಪ್‌ಗೆ! ' ತನಗೆ ಸಿಕ್ಕಿದ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ‘ಹೆಂಗಿರತ್ತೆ ನೋಡೋಣ ತೋರಿಸು’ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್‌ ಅನ್ನು ವಿನಯ್‌ ಕೈಗೆ ಕೊಟ್ಟಿಲ್ಲ. 

Karthik mahesh fights with drone prathap at bigg boss kannada 10 srb
Author
First Published Oct 30, 2023, 11:24 AM IST

ಬಿಗ್ ಬಾಸ್ ಕನ್ನಡ ಶೋ 3ನೇ ವಾರ ಮುಗಿಸಿ 4 ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್‌ಬಾಸ್‌ ಮನೆಯ ನಾಲ್ಕನೇ ವಾರದ ಬೆಳಗು ಭರ್ಜರಿ ಜಿದ್ದಾಜಿದ್ದಿಯೊಂದಿಗೆ ಶುರುವಾಗಿದೆ. ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚನಿಂದ ಸ್ಫೂರ್ತಿ ಪಡೆದ ಪ್ರತಾಪ್‌ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಕಾರ್ತಿಕ್‌ ಅಂತೂ ಬಲಪ್ರಯೋಗಕ್ಕೂ ಮುಂದಾಗಿದ್ದಾರೆ. ವಿನಯ್‌ ಹಿಂದಿನ ಟೋನ್‌ನಲ್ಲಿ ಹಾಕಿದ ಆವಾಜ್‌ಗೆ ಪ್ರತಾಪ್ ಕ್ಯಾರೇ ಅಂದಿಲ್ಲ. ಮೂರನೇ ವಾರ ಹಿಂದಿನ ವಾರಗಳಷ್ಟು ಕಾಮ್ ಆಗಿರುವುದಿಲ್ಲ ಎಂಬುದರ ಸೂಚನೆಯನ್ನು JioCinema ಬಿಡುಗಡೆ ಮಾಡಿರುವ ದಿನದ ಮೊದಲ ಪ್ರೊಮೋದಲ್ಲಿ ಢಾಳಾಗಿಯೇ ಕಾಣಿಸಿದೆ.

ಬೆಳಿಗ್ಗೆಯ ಸಿಹಿನಿದ್ದೆಯಲ್ಲಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಧ್ವನಿ ಎಚ್ಚರಿಕೆಯ ಕರೆಗಂಟೆಯ ಹಾಗೆ ಮೊಳಗಿದೆ. ‘ಈವಾರ ಎಲ್ಲರಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಬಲೂನ್‌ಗಳನ್ನು ಒಡೆದು ಅದರಲ್ಲಿರುವ ನಾಮಿನೇಷನ್ ಪಾಸ್‌ಗಳನ್ನು ಹುಡುಕಬೇಕು’ ಎಂದು ಬಿಗ್‌ಬಾಸ್ ಆದೇಶಿಸಿದ್ದಾರೆ. ತಕ್ಷಣವೇ ಮನೆಯ ಸದಸ್ಯರೆಲ್ಲರೂ ಬಲೂನ್‌ಗಳನ್ನು ತುಂಬಿರುವ ಜಾಗಕ್ಕೆ ಹೋಗಿ ಬಲೂನ್‌ಗಳನ್ನು ಒಡೆದೊಡೆದು ನೋಡಲು ಶುರುಮಾಡಿದ್ದಾರೆ.

ಕೊನೆಗೂ ನಾಮಿನೇಷನ್ ಪಾಸ್ ಸಿಕ್ಕಿದ್ದು ಡ್ರೋಣ್ ಪ್ರತಾಪ್‌ಗೆ! ' ತನಗೆ ಸಿಕ್ಕಿದ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ‘ಹೆಂಗಿರತ್ತೆ ನೋಡೋಣ ತೋರಿಸು’ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್‌ ಅನ್ನು ವಿನಯ್‌ ಕೈಗೆ ಕೊಟ್ಟಿಲ್ಲ. ಮಾತಿಗೆ ಮಾತು ಬೆಳೆದಿದೆ. 

ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಕಂಡು ಬೆಚ್ಚಿಬಿದ್ದ ಜನರು, ಕ್ಯಾಮರಾ ನೋಡಿದ ನಟ ಮಾಡಿದ್ದೇನು?

ಮುಂದಿನ ದೃಶ್ಯದಲ್ಲಿ ಕಾರ್ತಿಕ್, ಸ್ನೇಹಿತ್ ಎಲ್ಲರೂ ಪ್ರತಾಪ್‌ ಮೈಮೇಲೆ ಮುಗಿಬಿದ್ದುಅವರಿಂದ ಪಾಸ್ ಕಸಿಯಲು ಯತ್ನಿಸುತ್ತಿರುವ ದೃಶ್ಯವಿದೆ. ಎಲ್ಲರ ನಡುವೆ ಸಿಲುಕಿ ಒದ್ದಾಡುತ್ತಿರುವ ಪ್ರತಾಪ್‌ ಕಿರುಚಾಡುತ್ತಿದ್ದಾರೆ. ಬಿಗ್‌ಬಾಸ್ ಮನೆ ಹೊಡೆದಾಟಕ್ಕೆ ಸಾಕ್ಷಿಯಾಗುತ್ತಿದೆಯೇ? ದೈಹಿಕವಾಗಿ ಬಲಶಾಲಿಯಾಗಿರುವ ಕಾರ್ತಿಕ್, ಪ್ರತಾಪ್‌ ಮೇಲೆ ಮುಗಿಬಿದ್ದಿದ್ದು, ಎರಡು ಮೂರು ಜನ ಸೇರಿ ಒಬ್ಬನನ್ನು ಹಿಡಿದು ಎಳೆದಾಡುತ್ತಿರುವುದು ಯಾಕೆ? 

ನ್ಯೂಜಿಲ್ಯಾಂಡ್‌ನಲ್ಲಿ ನಟ ವಿಷ್ಣು ಮಂಚುಗೆ ಗಂಭೀರ ಗಾಯ, ಏನಾಗಿದೆ ನಟನ ಪರಿಸ್ಥಿತಿ?

ನಿಜಕ್ಕೂ ಏನಾಗುತ್ತಿದೆ ಬಿಗ್‌ಬಾಸ್ ಮನೆಯಲ್ಲಿ? ಎಲ್ಲವನ್ನೂ ನೋಡಲು, ತಿಳಿಯಲು ಚಾನ್ಸ್ ಇದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ 9.00 ಕ್ಕೆ ವೀಕ್ಷಿಸಬಹುದು.

Follow Us:
Download App:
  • android
  • ios