ಯಾವುದೇ ವಿಷಯದ ಬಗ್ಗೆ ಯಾರಾದರೂ ನಮ್ಮನ್ನು ಕ್ರಿಟಿಕ್ ಮಾಡ್ತಿದ್ದಾರೆ ಅಂತಾದ್ರೆ ಅದನ್ನೇ ಸವಾಲಾಗಿ ಸ್ವೀಕರಿಸಿ ಅವರೆದುರು ತೊಡೆತಟ್ಟಿ ನಿಲ್ಲಬೇಕು. ಈ ವಿಷಯದಲ್ಲಿ ಬಾಲಿವುಡ್ ಡಾನ್ಸಿಂಗ್ ಸ್ಟಾರ್ ಮಾಧುರಿ ದೀಕ್ಷಿತ್ ತಮ್ಮ ಸಿನಿ ಜರ್ನಿ ಬಗ್ಗೆ ಹಂಚಿಕೊAಡಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಬೆಳಿಯಬೇಕು ಅಂತಂದ್ರೆ ಅಲ್ಲಿ ಕಾಲೆಳೆಯುವವರಿಗೆ ವಿಐಪಿ ಸೀಟ್ (VIP Seat) ನೀಡಬೇಕು. ಅವರಿದ್ದರೆ ಮಾತ್ರ ಸಾಧನೆಯ ಶಿಖರವೇರಲು ಸಾಧ್ಯ. 
ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂದರೆ ಫಿಜಿಕಲ್ ಫಿಟ್ನೆಸ್ ({Physical Fitness) ಬಹು ಮುಖ್ಯ. ದಪ್ಪಗಿದ್ದರೆ ತೆಳ್ಳಗಾಗಬೇಕು, ತೆಳ್ಳಗಿದ್ದರೆ ದಪ್ಪಗಾಗಬೇಕು ಇಷ್ಟೆ. ಆದರೆ ಹೀಗೆ ಮಾಡುವುದರಿಂದ ಅವರ ಆರೋಗ್ಯದಲ್ಲಾಗುವ ಏರುಪೇರುಗಳು, ಮನಸ್ಸಿಗಾಗುವ ನೋವು ಯಾರಿಗೂ ಕಾಣುವುದಿಲ್ಲ. ನಟ ನಟಿಯರ ವಿಚಾರದಲ್ಲಿ ಈ ವಿಷಯ ಸರ್ವೇ ಸಾಮಾನ್ಯ. ಪರದೆ ಮುಂದೆ ಗ್ಲಾಮರ್ (Glamour) ಆಗಿ ಕಾಣುವುದು, ಬಣ್ಣ ಹಚ್ಚುವುದರ ಹಿಂದೆ ಕಣ್ಣಿಗೆ ಕಾಣದ ಕತೆಗಳು ಪರದೆ ಹಿಂದಿರುತ್ತೆ.

ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್ (Bollwood Actress Madhuri Dixit) ತಮ್ಮ ಸಿನಿಮಾ ಪ್ರಯಾಣದಲ್ಲಿ ಅನುಭವಿಸಿದ ನೋವಿನ ಸಂಗತಿಗಳನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. 'ಸಿನಿಮಾ ಆಗಿನ್ನು ನನಗೆ ಹೊಸ ಪ್ರಪಂಚ. ತೆಳ್ಳಗೆ, ಬೆಳ್ಳಗೆ ಇನ್ನು ಪುಟ್ಟು ಹುಡುಗಿಯಂತಿದ್ದೆ. ಆಗ ಎಲ್ಲರೂ ನನ್ನನ್ನು ನೋಡಿ ತೂಕ ಹೆಚ್ಚಿಸಿ ದಪ್ಪ ಮಾಡು ಇವಳನ್ನು ಎಂದು ಹೇಳುತ್ತಿದ್ದರು. ಆಗ ಔಟರ್ ಲುಕ್ ಗಣನೆಗೆ ಬರುತ್ತಿತ್ತು. ಆದರೆ ಇಂತಹ ಸನ್ನಿವೇಶಗಳು ಈಗಿನ ಯುವ ನಟ ನಟಿಯರಿಗಿಲ್ಲ. ಹಾಗೆ ಕಾಲೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ದಪ್ಪಗೆ ತೆಳ್ಳಗೆ ಇರುವುದೇ ಮುಖ್ಯವಲ್ಲ. ಕಲಾವಿದನಲ್ಲಿರುವ ಟ್ಯಾಲೆಂಟ್ ನೋಡಿ ಅವಕಾಶ ನೀಡಬೇಕು,' ಎಂದು ಹೇಳಿದ್ದಾರೆ.

ಯಂಗ್ ನಟರ ಕ್ರಶ್ ಮಾಧುರಿ ದೀಕ್ಷಿತ್

ಪ್ರತಿಭೆ (Talent) ಎಂಬುದು ನಿಮ್ಮ ಸ್ವತ್ತು. ಸೋತರು ಗೆದ್ದರೂ ಅದು ನಿಮ್ಮೊಟ್ಟಿಗೇ ಇರುತ್ತೆ. ಸೋತೆನೆಂದು ಕುಗ್ಗದೆ ಒಂದು ಪಾಠ ಕಲಿತೆನೆಂದು ಮತ್ತೆ ಪ್ರಯತ್ನಿಸುತ್ತಿರಿ. ನಿಮ್ಮ ಮನಸ್ಸು ಏನು ಹೇಳುತ್ತದೆಯೋ ಅದನ್ನೇ ಮಾಡಿ, ಒಂದು ದಿನ ನಿಮಗೂ ಟೈಂ ಬಂದೇ ಬರುತ್ತೆ' ಎಂದು ಯುವ ಕಲಾವಿದರೆ ಕಿವಿ ಮಾತು ಹೇಳಿದ್ದಾರೆ.

ನಿಜ ಹೇಳಬೇಕು ಅಂದ್ರೆ ಮಾಧುರಿ ದೀಕ್ಷಿತ್ ಜೀವನವೂ ದಿಲ್ ತೋ ಪಾಗಲ್ ಹೈ (Dil to Paagal Hai) ರೀತಿ. ಅವರು ಜೀವನದಲ್ಲಿ ಮೊದ ಮೊದಲು ವಿಫಲವಾಗಿದ್ದೇ ಹೆಚ್ಚು. ದೂರದರ್ಶನ(Doordarshan)ದವರೂ ಈ ಪ್ರತಿಭೆಯನ್ನು ನಿರಾಕರಿಸಿದ್ದರು. ಆದರೆ, ಅವಮಾನವೆಲ್ಲವನ್ನೂ ಮೆಟ್ಟಿ ನಿಂತು, ಬಾಲಿವುಡ್ ಡ್ಯಾನ್ಸಿಂಗ್ ಕ್ವೀನ್ (Dancing queen) ದಶಕಗಳ ಕಾಲ ಮೆರೆದು, ಈ ಸ್ಥಾನ ಪಡೆದುಕೊಂಡಿದ್ದಾರಲ್ಲ, ಅದು ಪ್ರತಿಯೊಬ್ಬ ಹೆಣ್ಣಿಗೂ ಮಾದರಿ. 

ಡ್ಯಾನ್ಸಿಂಗ್ ಕ್ವೀನ್ ಮಾಧುರಿ ಒಟ್ಟು ಆಸ್ತಿ ಮೌಲ್ಯ ಎಷ್ಟು?