Happy Birthday Madhuri Dixit; ಡಾನ್ಸಿಂಗ್ ಕ್ವೀನ್ ಮಾಧುರಿಯ ಒಟ್ಟು ಆಸ್ತಿ ಮೌಲ್ಯ ಎಷ್ಟು?

ಮಾಧುರಿ ದೀಕ್ಷಿತ್ ಡ್ಯಾನ್ಸ್ ಕಂಡು ಬೆರಗಾಗದವರೇ ಇಲ್ಲ. ಇಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿದ್ದರೂ, ಇಂದು 55 ಆಗಿದ್ದರೂ ಮಾಧುರಿ ದೀಕ್ಷಿತ್ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ಮಾಧುರಿ ದೀಕ್ಷಿತ್ ಅವರ ಒಟ್ಟು ಆಸ್ತಿ ಮೌಲ್ಯ 250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Here is the details about bollywood Actress Madhuri Dixit net worth sgk

ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್(Madhuri Dixit) ಅವರಿಗೆ ಇಂದು ಹುಟ್ಟುಹಬ್ಬದ(Birthday) ಸಂಭ್ರಮ. 1980ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಧುರಿ ದೀಕ್ಷಿತ್ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ಮಾಧುರಿ ದೀಕ್ಷಿತ್ ಸಿನಿಮಾ ಎಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಆಗಿತ್ತು. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿದ್ದ ನಟಿ ಮಾಧುರಿ. ಇಂದಿಗೂ ಸಖತ್ ಆಕ್ಟೀವ್ ಆಗಿರುವ ಮಾಧುರಿ ಅದೇ ಚಾರ್ಮ್ ಅದೇ ಬೇಡಿಗೆ ಉಳಿಸಿಕೊಂಡಿದ್ದಾರೆ.

ಮಾಧುರಿ ದೀಕ್ಷಿತ್ ಡ್ಯಾನ್ಸ್ ಕಂಡು ಬೆರಗಾಗದವರೇ ಇಲ್ಲ. ಇಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿದ್ದರೂ, ಇಂದು 55 ಆಗಿದ್ದರೂ ಮಾಧುರಿ ದೀಕ್ಷಿತ್ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಈಗಲೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಬಾಲಿವುಡ್ ನ ಶ್ರೀಮಂತ ನಟಿಯರಲ್ಲಿ ಒಬ್ಬರು. ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ಮಾಧುರಿ ದೀಕ್ಷಿತ್ ಅವರ ಒಟ್ಟು ಆಸ್ತಿ ಮೌಲ್ಯ 250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅಂದಹಾಗೆ ಪ್ರತಿ ಚಿತ್ರಕ್ಕೆ ಅವರು 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಅನೇಕ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ಸೀಸನ್‌ಗೆ 25 ಕೋಟಿ ರೂಪಾಯಿ ಹಾಗೂ ಒಂದು ಜಾಹೀರಾತಿನಲ್ಲಿ ನಟಿಸಲು 8 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಕೆಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

Madhuri Dixit Birthday; ದೂರದರ್ಶದಿಂದ ರಿಜೆಕ್ಟ್ ಆಗಿದ್ದ ಮಾಧುರಿ ಸ್ಟಾರ್ ನಟಿಯಾಗಿ ಬೆಳೆದ ರೋಚಕ ಕಥೆ

ಮಾಧುರಿ ದೀಕ್ಷಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ರಿಯಾಲಿಟಿ ಶೋಗಳ ಜಡ್ಜ್ ಆಗಿ ಕೆಲಸ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸಿನಿಮಾ, ಕಿರುತೆರೆ ಜೊತೆಗೆ ಇತ್ತೀಚಿಗೆ ಒಟಿಟಿ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸೀರಿಸ್ ಮತ್ತು ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

Madhuri Dixit ಹೊಸ ಮನೆಯ ಬಾಡಿಗೆ ಕೇಳಿದ್ರೆ ತಲೆ ತಿರುಗುತ್ತೆ!

ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ದಿ ಫೇಮ್ ಗೇಮ್ ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಅವರು ಒಟಿಟಿ ಜಗತ್ತಿಗೆ ಕಾಲಿಟ್ಟರು. ಅದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರ ಕಂಡಿತು. ಸದ್ಯ ಅವರು ಅಮೇಜಾನ್ ಪ್ರೈಂ ವಿಡಿಯೋ ನಿರ್ಮಾಣದ ಮಜಾ ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾಧುರಿ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಅಭಿಮಾನಿಗಳ ಬಳಗ ಹೆಚ್ಚಾಗುತ್ತಲೇ ಇದೆ.

Latest Videos
Follow Us:
Download App:
  • android
  • ios