ಕೆಲವೊಮ್ಮೆ ಈ ಸೆಲೆಬ್ರಿಟಿಗಳು ನಕ್ಕರೂ, ಅತ್ತರೂ, ಬಟ್ಟೆ ತೊಟ್ಟರೂ, ತೊಡದಿದ್ದರೂ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಈ ಕತ್ರಿನಾ ಟ್ರೋಲ್ ಗೆ ಗುರಿಯಾಗಲೆಂದೇ ಈ ಡ್ರೆಸ್ ತೊಟ್ಟುಕೊಂಡ ಹಾಗಿದೆ. ಈ ಸೆಲೆಬ್ರಿಟಿಗಳಿಗೆ ಅದೊಂದು ಖಯಾಲಿ ಇದೆ. ಸದಾ ಪ್ರಚಾರದಲ್ಲಿರಬೇಕು ಅಂತ ಬಯಸೋದು. ಕತ್ರಿನಾ ಕೈಫ್‌ ಭಿನ್ನವೇನಲ್ಲ. ಆದರೆ ಇವರ ಈ ಬಾರಿಯ ಉಡುಗೆ ಮಾತ್ರ ಸಕತ್ ಟ್ರೋಲ್‌ಗೆ ಒಳಗಾಗಿದೆ. ಅದಕ್ಕೆ ಕಾರಣ ಅದರ ವಿಚಿತ್ರ ಸ್ಟೈಲು. ಸ್ಟೈಲಿನ ಜೊತೆಗೇ ಅದರ ದುಬಾರಿ ದರ. 

 

 
 
 
 
 
 
 
 
 
 
 
 
 
 
 

A post shared by Katrina Kaif (@katrinakaif)


ಈ ಸ್ವೆಟರ್ ಬಿಳಿ ಮತ್ತು ತಿಳಿನೀಲಿ ಬಣ್ಣದಿಂದ ಕೂಡಿದೆ. ಈ ಸ್ವೆಟರ್ ವಿಶೇಷ ಏನೆಂದರೆ ಇದು ಕ್ರಾಪ್ ಶೇಪ್ ಹೊಂದಿದೆ. ಸೊಂಟದವರೆಗೂ ಮಾತ್ರವೇ ಇದು ಕವರ್ ಮಾಡುವುದು. ಜೊತೆಗೆ ರಿಬ್ಬ್ಡ್‌ ಕಾಲರ್‌ ಹೊಂದಿದೆ. ಸ್ವೆಟರ್ ಮಧ್ಯದಲ್ಲಿ ಬಟನ್ ಅಥೌಆ ಝಿಪ್‌ಗಳ ಬದಲು ಸೇಫ್ಟಿ ಪಿನ್‌ಗಳನ್ನು ಚುಚ್ಚಿಕೊಳ್ಳಲಾಗಿದೆ! ಇದರ ಬೆಲೆ 25 ಸಾವಿರವಂತೆ. 

ಪ್ರೀಯತಮನನ್ನು ತಬ್ಬಿ ಮುದ್ದಾಡಿದ ಕತ್ರಿನಾ ಕೈಫ್‌ ಫೋಟೋ ವೈರಲ್; ಇದು ಸ್ಟಾರ್ ನಟನೇ? ...

ಇದು ನಮ್ಮಲ್ಲಿ ಸಾಮಾನ್ಯವಾಗಿ ಹಿರಿಯ ನಾಗರಿಕರು, ಬಡವರು, ಬಟನ್‌ ಕಿತ್ತೋದ ಸ್ವೆಟರ್‌ಗಳನ್ನು ಸೇಪ್ಟಿ ಪಿನ್‌ ಚುಚ್ಚಿಕೊಂಡು ಹಾಕಿಕೊಳ್ಳುತ್ತಾರಲ್ಲ, ಮೇಲ್ನೋಟಕ್ಕೆ ಹಾಗೇ ಕಾಣುತ್ತದೆ. ಕತ್ರಿನಾಗೂ ಇಂಥ ಬಡತನ ಬಂತೇ ಎಂದು ತಮಾಷೆ ಮಾಡಬಹುದು. ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿರುವ ಈ ಸ್ವೆಟರ್‌ ಧರಿಸಿ ಕತ್ರಿನಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸೊಂಟದಷ್ಟೇ ಉದ್ದವಿರುವ ಈ ಸ್ವೆಟರ್ ಕತ್ರಿನಾಗೆ ಸ್ಟೈಲಿಶ್ ಲುಕ್ ಕೊಟ್ಟಿದೆ.  ಸದ್ಯ ಕತ್ರಿನಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಹೊಸ ಟ್ರೆಂಡನ್ನೇ ಸೃಷ್ಟಿ ಮಾಡಿದರೂ ಆಶ್ಚರ್ಯವಿಲ್ಲ. ಅದು ಹಾಗೇ ತಾನೆ. ಹಳೆಯ ಲಕ್‌ಗಳೇ ಹೊಸ ಮಾದರಿಯಲ್ಲಿ ಮರಳಿ ಬರುವುದನ್ನು ನೀವೂ ಗಮನಿಸಿದ್ದೀರಲ್ಲ. 

ಕತ್ರೀನಾ ಕೈಫ್ ತಂಗಿ ಇಸಾಬೆಲ್ಲಾ ರೊಮ್ಯಾನ್ಸ್: ಫಸ್ಟ್ ಲುಕ್ ಹೀಗಿದೆ ...

ಕತ್ರಿನಾಳ ಈ ಪೋಸ್ಟ್‌ಗೆ ಬಂದಿರುವ ಕಮೆಂಟ್‌ಗಳೂ ಮಜವಾಗಿವೆ. ಕೆಲವರು ಇದು ಹೊಸ ಮಾದರಿ ಎಂದು ಹೇಳಿದ್ದರೆ, ಕೆಲವರು ಇದರಲ್ಲೇನಿದೆ, ನಮ್ಮಜ್ಜಿ ಕೂಡ ಹೀಗೇ ಬಟನ್‌ ಕಿತ್ತೋದಾಗ ಪಿನ್ ಚುಚ್ಚಿಕೊಳ್ಳುತ್ತಾರೆ ಎಂದಿದ್ದಾರೆ. ನಮ್ಮ ಅಜ್ಜಿಯಿಂದಲೇ ಕತ್ರಿನಾ ಈ ಸ್ಟೈಲ್ ಕಾಪಿ ಮಾಡಿದ್ದಾರೆ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. "ಮೇಡಂ, ಸ್ವಟರ್‌ಗೆ ಏನಾಯ್ತು? ಬಟನ್‌ಗಳು ಎಲ್ಲಿ ಹೋದ್ವು? ಕಳೆದ ರಾತ್ರಿ ಬೆಡ್‌ ಮೇಲೆ ಬಿದ್ದೋಗಿರಬೇಕು, ಸರಿಯಾಗಿ ಹುಡುಕಿ'' ಎಂದು ಇನ್ಯಾರೋ ಕಮೆಂಟ್ ಮಾಡಿದ್ದಾರೆ. ''ಸೇಪ್ಟಿ ಪಿನ್‌ಗಳು ಮಹಿಳೆಯರಿಗೆ ಎಷ್ಟು ಇಂಪಾರ್ಟೆಂಟು ಎಂಬುದು ಈಗ ಗೊತ್ತಾಯ್ತಲ್ಲ'' ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ''ನಿನ್ನ ಒಬ್ಬ ಅಭಿಮಾನಿಯಾಗಿ, ನಿನ್ನ ಸ್ವೆಟರ್‌ನ ಮೂರು ಬಟನ್‌ಗಳನ್ನು ನಾನು ಸ್ಪಾನ್ಸರ್ ಮಾಡೋಕೆ ರೆಡಿ'' ಎಂದು ಇನ್ನೊಬ್ಬ ತಮಾಷೆ ಮಾಡಿದಾನೆ. 
ಇನ್ನೊಬ್ಬಳಂತೂ, ''ನಾವು ಹೀಗೆ ಸೇಪ್ಟಿ ಪಿನ್‌ ಹಾಕಿಕೊಂಡರೆ ಬಡವರು ಅಂತ ತಿಳಿಯುತ್ತಾರೆ. ನೀವು ಸೆಫ್ಟಿ ಪಿನ್ ಹಾಕಿಕೊಂಡರೆ ಶ್ರೀಮಂತರು. ನೀವು ಏನು ಮಾಡಿದರೂ ಅದು ಫ್ಯಾಷನ್‌ ಬಿಡಿ'' ಎಂದು ಅಲವತ್ತುಕೊಂಡಿದ್ದಾಳೆ. ಅಂತೂ ಸಕತ್ ತಮಾಷೆ ಬಿಡಿ. 

ಕತ್ರೀನಾ ಕೈಫ್ ಜೊತೆ ವಿಜಯ್ ಸೇತುಪತಿ ಹೊಸ ಸಿನಿಮಾ ...