ತೆರೆಯ ಮೇಲೆ ಪರ್ಫೆಕ್ಟ್ ಜೋಡಿ ಮಾತ್ರವಲ್ಲ, ಸ್ವಲ್ಪ ವಿಶೇಷ ಅನ್ನಿಸೋ ಕಾಂಬಿನೇಷನ್‌ಗಳು ಇತ್ತೀಚೆಗೆ ಟ್ರೆಂಡ್ ಆಗಿದೆ. ಸ್ವಲ್ಪ ಭಿನ್ನ ಅನ್ನುವ ಜೋಡಿಯೇ ಹೈಲೈಟ್ ಆಗುತ್ತಿದ್ದಾರೆ. ಇದೀಗ ಸೌತ್ ನಟ ವಿಜಯ್ ಸೇತುಪತಿ ಬಾಲಿವುಡ್ ನಟಿ ಕತ್ರೀನಾ ಕೈಫ್ ಜೊತೆ ಒಂದಾಗಲಿದ್ದಾರೆ.

ಬಳುಕೋ ಬಳ್ಳಿ ಕತ್ರೀನಾಗೆ ವಿಜಯ್ ಸೇತುಪತಿ ಜೋಡಿ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ವಿಜಯ್ ಸೇತುಪತಿ ಮಂಗಳಮುಖಿಯ ಪಾತ್ರದಿಂದ ತೊಡಗಿ ಬಹಳ ಡಿಫರೆಂಟ್ ಆಗಿರೋ , ಚಾಲೆಂಜಿಂಗ್ ಪಾತ್ರಗಳನ್ನೆಲ್ಲ ಮಾಡಿರೋ ನಟ. ಇವರ ಕಾಂಬೋ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ತುಂಬು ಗರ್ಭಿಣಿ ಕರೀನಾಗೆ ಬಳುಕುವ ಸೊಂಟ ನೆನಪಾಯ್ತು..!

ನಿರ್ದೇಶಕ ಶ್ರೀರಾಮ್ ರಾಘವನ್ ಈ ಜೋಡಿಯನ್ನು ತೆರೆಯ ಮೇಲೆ ಒಂದು ಮಾಡುತ್ತಿದ್ದಾರೆ. ಇದು ಮೊದಲ ಹಂತದ ಮಾತುಕತೆ, ಇನ್ನೂ ಬಹಳಷ್ಟು ಮಾತನಾಡಿ ಮುಗಿಸುವುದಿದೆ ಎಂದಿದ್ದಾರೆ ನಿರ್ದೇಶಕ.

ಕಾಲಿವುಡ್‌ನ ಪ್ರಮುಖ ನಟರಲ್ಲೊಬ್ಬರಾದ ವಿಜಯ್ ಸೇತುವತಿ ಸದ್ಯ ಬೇಡಿಕೆಯ ನಟ. ವಿಜಯ್ ಜೊತೆ ಮಾಸ್ಟರ್ ಸಿನಿಮಾದಲ್ಲಿಯೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.