ಕತ್ರೀನಾ ಕೈಫ್ ಅವರ ಸಹೋದರಿ ಇಸಾಬೆಲ್ಲಾ ಕೈಫ್ ಪುಲ್ಕಿತ್ ಸಾಮ್ರಾಟ್ ಜೊತೆ ತೆರೆಯ ಮೇಲೆ ಒಂದಾಗಿದ್ದಾರೆ. ಸುಸ್ವಾಗತಂ ಕುಶಾಮದೀದ್ ಸಿನಿಮಾ ಮೂಲಕ ತೆರೆಯ ಮೇಲೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಇಸಾಬೆಲ್ಲಾ.

ಪುಲ್ಕಿತ್ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಪೋಸ್ಟ್ ಮಾಡಿ ಸಿನಿಮಾ ಎನೌನ್ಸ್ ಮಾಡಿದ್ದಾರೆ. ನಮಸ್ತೆ - ನಿಮ್ಮಜೊತೆ ಶೀಘ್ರ ಮುಖಾಮುಖಿ ಎಂದು ಕ್ಯಾಪ್ಶನ್ ಕೊಟ್ಟು ಫೋಟೋಸ್ ಶೇರ್ ಮಾಡಿದ್ದಾರೆ.

ಮಂಗಳಸೂತ್ರ ಧರಿಸಿದ ರೇಖಾ: ಡಿನ್ನರ್‌ಗೆ ಮನೆಗೆ ಕರೆದು ಜಯಾ ಬಚ್ಚನ್ ಹೀಗನ್ನಬಾರದಿತ್ತು

ಟ್ರೆಡೀಷನಲ್ ಔಟ್‌ಫಿಟ್‌ನಲ್ಲಿ ಪುಲ್ಕಿತ್ ಡ್ಯಾಶಿಂಗ್ ಆಗಿ ಕಾಣಿಸಿದ್ರೆ, ಬ್ಲಾಕ್ & ಗೋಲ್ಡ್ ಲೆಹಂಗಾದಲ್ಲಿ ಇಸಾಬೆಲ್ಲಾ ಮಿಂಚಿದ್ದಾರೆ. ಸಿನಿಮಾದಲ್ಲಿ ಪುಲ್ಕಿತ್ ಅಮನ್ ಎಂಬ ದೆಹಲಿ ಹುಡುಗನಾಗಿ ಕಾಣಿಸಿಕೊಳ್ಳಲಿದ್ದು, ಇಸಾಬೆಲ್ಲಾ ನೂರ್ ಎಂಬ ಆಗ್ರಾದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.