ಸ್ಯಾಂಡಲ್ ಚಿತ್ರಗಳು ಬೇರೆ ಭಾಷೆಗಳಲ್ಲಿ ಸದ್ದು ಮಾಡುವುದು ಹೆಚ್ಚಾಗಿದೆ. ಆ ಸಾಲಿಗೆ ’ಚಮಕ್’ ಚಿತ್ರ ಸೇರಿದೆ. 

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ ಚಿತ್ರ ಚಮಕ್ ಸ್ಯಾಂಡಲ್ ವುಡ್ ನಲ್ಲಿ ಒಂದು ಮಟ್ಟಿಗಿನ ಹವಾ ಎಬ್ಬಿಸಿತ್ತು. ಇವರಿಬ್ಬರ ಕ್ಯೂಟ್ ಲವ್ ಸ್ಟೋರಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 

ಇದೀಗ ಚಮಕ್ ಟಾಲಿವುಡ್ ಗೆ ಹಾರಿದ್ದು ಅಲ್ಲಿಯೂ ಕೂಡಾ ಚಮಕ್ ತೋರಿಸಲಿದೆ.  ತೆಲುಗಿನಲ್ಲಿ ಗೀತಾ ಚಲೋ ಅನ್ನುವ ಟೈಟಲ್ ರೆಡಿಯಾಗಿದೆ. ಇದರ ಟ್ರೇಲರ್ ರಿಲೀಸ್ ಆಗಿದೆ.