ಅಸ್ವಸ್ಥಗೊಂಡ ಬಾಲಿವುಡ್ ನಟಿ ಜಾಹ್ನವಿ ಕಪೂರ್ ದಿಡೀರ್ ಆಸ್ಪತ್ರೆ ದಾಖಲು!

ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡ ನಟಿ ಜಾಹ್ನವಿ ಕಪೂರ್ ಇದೀಗ ಆಸ್ಪತ್ರೆ ದಾಖಲಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಗೆ ನಟಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Bollywood Actress janhvi kapoor admitted to Mumbai hospital due to severe food poison ckm

ಮುಂಬೈ(ಜು.18)  ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆರೋಗ್ಯ ಕ್ಷೀಣಿಸಿದ ಕಾರಣ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಕಳೆದೆರಡು ದಿನದಿಂದ ಜಾಹ್ನವಿ ಕಪೂರ್ ಅಸ್ವಸ್ಥಗೊಂಡಿದ್ದಾರೆ. ಆದರೆ ಇಂದು ಜಾಹ್ನವಿ ಆರೋಗ್ಯ ಮತ್ತಷ್ಟು ಕ್ಷೀಣಿಸಿದ ಕಾರಣ ತಂದೆ ಬೋನಿ ಕಪೂರ್ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಫುಡ್ ಪಾಯ್ಸನ್ ಕಾರಣದಿಂದ ಜಾಹ್ನವಿ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಆಸ್ಪತ್ರೆ ದಾಖಲಸಲಾಗಿದೆ. ಸದ್ಯ ಜಾಹ್ನವಿ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ತಂದೆ ಬೋನಿ ಕಪೂರ್ ಹೇಳಿದ್ದಾರೆ.

ಉಲಜ್ ಚಿತ್ರದಲ್ಲಿ ಬ್ಯೂಸಿಯಾಗಿರುವ ಜಾಹ್ನವಿ ಕಪೂರ್ ಕಳೆದೆರಡು ದಿನದಿಂದ ಆಹಾರ ಸಮಸ್ಯೆಯಾಗಿದೆ. ಫುಡ್ ಪಾಯ್ಸನ್‌ನಿಂದ ಜಾಹ್ನವಿ ಆರೋಗ್ಯ ಹದಗೆಟ್ಟಿದೆ. ಎರಡು ದಿನದಿಂದ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಜಾಹ್ನವಿ ಇಂದು ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ ಇಂದು ಬೆಳಗ್ಗೆಯಿಂದ ಜಾಹ್ನವಿ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಜ್ರಲೇಪಿತ ಟಾಪ್‌ಲೆಸ್ ಗೌನ್ ಧರಿಸಿ ಪೋಸ್ ಕೊಟ್ಟ ಜಾಹ್ನವಿ ಕಪೂರ್; ನಿನ್ನಂದಕೆ ನಿನ್ನಮ್ಮನೇ ಸರಿಸಾಟಿ ಎಂದ ಫ್ಯಾನ್ಸ್

ಆಸ್ಪತ್ರೆ ಮೂಲಗಳ ಪ್ರಕಾರ ಜಾಹ್ನವಿ ಕಪೂರ್ ಆರೋಗ್ಯ ಸ್ಥಿರವಾಗಿದೆ. ಫುಡ್ ಪಾಯ್ಸನ್ ಕಾರಣ ಜಾಹ್ನವಿ ಬಳಲಿದ್ದಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ. ಹೀಗಾಗಿ ಆಸ್ವಸ್ಥಗೊಂಡಿದ್ದಾರೆ. ಯಾರು ಆತಂಕ ಪಡಬೇಕಿಲ್ಲ. ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ.

ಉಲಜ್ ಚಿತ್ರದ ಕುರಿತು ಇತ್ತೀಚೆಗೆ ಜಾಹ್ನವಿ ಮಾತನಾಡಿದ್ದರು. ಈ ಪಾತ್ರ ನನಗೆ ಅತ್ಯಂತ ವಿಶೇಷ ಹಾಗೂ ಮಹತ್ವದ್ದಾಗಿದೆ ಎಂದಿದ್ದರು. ಈ ಚಿತ್ರದಲ್ಲಿ ಜಾಹ್ನವಿ ಡಿಪ್ಲೋಮ್ಯಾಟ್ ಪಾತ್ರ ನಿರ್ವಹಿಸುತ್ತಿದ್ದಾರೆ. ದೇಶಭಕ್ತಿ, ಸಾಮಾಜಿಕ ಕಳಕಳಿ, ಕುಟುಂಬ ಆಧಾರಿತ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರುವ ಜಾಹ್ನವಿ ಅತೀವ ಸಂತಸ ವ್ಯಕ್ತಪಡಿಸಿದ್ದರು. ಇದು ನನ್ನ ಸಿನಿಮಾ ಕರಿಯರ್‌ನಲ್ಲಿ ಅತ್ಯಂತ ಸವಾಲಿನ ಪಾತ್ರ ಎಂದಿದ್ದರು.

ಜಾಹ್ನವಿ ಕಪೂರ್ ಸಿನಿಮಾ ಮೂಲಕ ಮಾತ್ರವಲ್ಲ ಸೋಶಿಯಲ್ ಮೀಡಿಯಾ ಮೂಲಕವೂ ಸದ್ದು ಮಾಡುತ್ತಾರೆ. ತಮ್ಮ ಬೋಲ್ಡ್ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಇತ್ತೀಚೆಗೆ ತಮ್ಮ ತಾಯಿ ಶ್ರೀದೇವಿ ಅವರನ್ನು ನೆನಪಿಸುವ ಲುಕ್‌ ಒ‍ಗೊಂಡ ಫೋಟೋಶೂಟ್‌ ಮೂಲಕ ಗಮನ ಸೆಳೆದಿದ್ದರು. ನ್ಯೂಡ್ ನೆಟೆಡ್ ಕ್ರೀಮಿ ಗೌನ್‌ನಲ್ಲಿ ಜಾನ್ವಿ ಕ್ಯಾಮೆರಾ ಮುಂದೆ ಪೋಸ್ ನೀಡಿದ್ದರು. ಈ ಫೋಟೊಗಳನ್ನು ‘ಇನ್‌ ದಿ ಗಾರ್ಡೆನ್‌ ಆಫ್‌ ದಿ ಈಡೆನ್‌’ ಎನ್ನುವ ಕ್ಯಾಪ್ಷನ್ ಕೊಟ್ಟು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ಜಾಹ್ನವಿ ಅವರೇ ಹಂಚಿಕೊಂಡಿದ್ದರು.

ಶ್ರೀದೇವಿ ಮೂರನೇ ಮಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಈ ಸೀಕ್ರೆಟ್ ರಿವೀಲ್ ಆಗಿದ್ದೇಗೆ?
 

Latest Videos
Follow Us:
Download App:
  • android
  • ios