ಶೆಟ್ರೇ ಚೆನ್ನಾಗಿ ನೋಡ್ಕೊಂಡ್ರು ತಾನೆ ಕಿರಿಕ್ ಆಗಿದ್ರೆ ಹೇಳಿ; ಅಭಿಮಾನಿ ಕಾಮೆಂಟ್‌ಗೆ ರಿಷಬ್ ರಿಯಾಕ್ಷನ್ ವೈರಲ್
'ಶೆಟ್ರೇ ಚೆನ್ನಾಗಿ ನೋಡ್ಕೊಂಡ್ರು ತಾನೆ ಇಲ್ಲ ಅಂದರೆ ಹೇಳಿ' ಎಂದ ಅಭಿಮಾನಿಗೆ ರಿಷಬ್ ಕೊಟ್ಟ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್ ವುಡ್ ಸ್ಟಾರ್, ಕಾಂತಾರ ಹೀರೋ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಸದ್ಯ ಸಿನಿಮಾ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಬಾಲಿವುಡ್ ಮಂದಿ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್‌ನ ಅನೇಕ ಮಾಧ್ಯಮಗಳು ರಿಷಬ್ ಶೆಟ್ಟಿ ಅವರನ್ನು ಸಂದರ್ಶನ ಮಾಡಿದ್ದಾರೆ. ಬೇರೆ ಬೇರೆ ಭಾಷೆಯ ಅನೇಕ ಸ್ಟಾರ್ ಕಲಾವಿದರನ್ನು ಒಟ್ಟಿಗೆ ಸೇರಿಸಿ ಸಂದರ್ಶನ ಮಾಡುತ್ತಿದ್ದಾರೆ. ಅದರಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡ ಇರುವುದು ಕನ್ನಡಿಗರಿಗೆ ಹೆಮ್ಮೆ. ಬಾಲಿವುಡ್ ಕಲಾವಿದರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಿಷಬ್ ಇತ್ತೀಚಿಗೆ ಸಂದರ್ಶನದ ಒಂದು ಫೋಟೋ ಶೇರ್ ಮಾಡಿದ್ದರು.
ಬೇರೆ ಬೇರೆ ಭಾಷೆಯ ಕಲಾವಿದರ ಜೊತೆ ಕುಳಿತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ರಿಷಬ್ ಶೆಟ್ಟಿ ಶೇರ್ ಮಾಡಿದ್ದರು. ಶೆಟ್ರು ಶೇರ್ ಮಾಡಿದ್ದ ಫೋಟೋಗೆ ಅಭಿಮಾನಿಯೊಬ್ಬ ಮಾಡಿದ್ದ ಕಾಮೆಂಟ್ ಗಮನ ಸೆಳೆಯುತ್ತಿದೆ. ಅಭಿಮಾನಿ ಮಾತಿಗೆ ರಿಷಬ್ ಕೂಡ ಪ್ರತಿಕ್ರಿಯೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಅಭಿಮಾನಿ ಹೇಳಿದ್ದೇನು ಅಂತೀರಾ? 'ಚೆನ್ನಾಗಿ ನೋಡಿಕೊಂಡ್ರು ಅಲ್ವಾ ಶೆಟ್ಟರೇ ಏನಾದ್ರು ಕಿರಿಕ್ ಆಗಿದ್ರೆ ಹೇಳಿ ಹುಡುಗ್ರು ready ಇದ್ದಾರೆ' ಎಂದು ಹೇಳಿದ್ದರು. ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. ರಿಷಬ್ ಶೆಟ್ಟಿ, 'ಅಯ್ಯೋ ಎಲ್ಲಾ ಚೆನ್ನಾಗ್ ನೋಡಿಕೊಂಡರು, ಹಾಗೇನಾದ್ರೂ ಹೆಚ್ಚು ಕಡಿಮೆ ಆದ್ರೆ ನೀವೆಲ್ಲಾ ಇದಿರಲ್ಲ, ಧನ್ಯವಾದಗಳು' ಎಂದು ಹೇಳಿದ್ದಾರೆ. ರಿಷಬ್ ಪ್ರತಿಕ್ರಿಯೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಸ್ಕ್ರೀನ್ ಶಾಟ್ ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
Kantara Effect: ಭೂತಕೋಲ ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ ನಟ ವಿಶಾಲ್!
ರಿಷಬ್ ಶೆಟ್ಟಿ ಶೇರ್ ಮಾಡಿದ್ದ ಫೋಟೋದಲ್ಲಿ ವರುಣ್ ಧವನ್, ಆಯೂಷ್ಮಾನ್ ಖುರಾನ, ದುಲ್ಕರ್ ಸಲ್ಮಾನ್, ಜಾನ್ವಿ ಕಪೂರ್, ವಿದ್ಯಾ ಬಾಲನ್, ಅನಿಲ್ ಕಪೂರ್ ಸೇರಿದಂತೆ ಅನೇಕರು ಇದ್ದಾರೆ. ಅಂದಹಾಗೆ ರಿಷಬ್ ಶೆಟ್ಟಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ಪಂಚೆ ಶರ್ಟ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿತ್ತು ರಿಷಬ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಅನೇಕರು ಪಂಚೆ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬ, 'ಕೋಟಿ ಖರ್ಚಾದರೂ ಪರವಾಗಿಲ್ಲ ಆ ಪಂಚೆ ಬೇಕು' ಎಂದು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ, ಕಾಮೆಂಟ್ ಮಾಡಿ, 'ಆ ಜನ ಸ್ವಲ್ಪ ಸರಿ ಇಲ್ಲಾ ಮಾರಾಯರೆ, ನೀವೂ ಜಾಗ್ರತೆ ಆಯ್ತು, ಅವರು ಎಂತದು ಮಾಡಲಿಕ್ಕು ಹೇಸಲ್ಲ ಆಯ್ತಾ' ಎಂದು ಹೇಳಿದ್ದಾರೆ. ಸೂಪರ್ ಸಕ್ಸಸ್ ಕಂಡರೂ ಸರಳತೆ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.
Kantara; ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್‌ಗೆ ಅಭಿನಂದನೆ ಸಲ್ಲಿಸಿದ ನಟ ಅಲ್ಲು ಅರ್ಜುನ್
ಕಾಂತಾರ ಸಕ್ಸಸ ಬಳಿಕ ರಿಷಬ್ ಯಾವ ಸಿನಿಮಾ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಂತಹಾಗೆ ಕಾಂತಾರ-2 ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ರಿಷಬ್ ಶೆಟ್ಟಿ ಎಲ್ಲಿಯೂ ಅಧಿಕೃತ ಗೊಳಿಸಿಲ್ಲ. ಹಾಗಾಗಿ ಕಾಂತಾರ-2 ಮಾಡ್ತಾರಾ ಅಥವಾ ಬೇರೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರಾ ಎಂದು ಕಾದುನೋಡಬೇಕು.