ಬಾಲಿವುಡ್ ಸ್ಟಾರ್ ನಟಿ, ವಿಕ್ರಾಂತ್ ರೋಣನ ರಕ್ಕಮ್ಮ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕೊನೆಗೂ ವಿದೇಶಕ್ಕೆ ಹಾರಲು ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ. ನಟಿ ಜಾಕ್ವೆಲಿನ್ ಅಬುಧಾಬಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಜಾಕ್ವೆಲಿನ್‌ಗೆ ಅನುಮತಿ ಸಿಕ್ಕಿದೆ.

ಬಾಲಿವುಡ್ ಸ್ಟಾರ್ ನಟಿ, ವಿಕ್ರಾಂತ್ ರೋಣನ ರಕ್ಕಮ್ಮ ಜಾಕ್ವೆಲಿನ್ ಫರ್ನಾಂಡಿಸ್‌ಗೆ(Jacqueline Fernandez ) ಕೊನೆಗೂ ವಿದೇಶಕ್ಕೆ ಹಾರಲು ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ. ನಟಿ ಜಾಕ್ವೆಲಿನ್ ಅಬುಧಾಬಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಜಾಕ್ವೆಲಿನ್‌ಗೆ ಅನುಮತಿ ಸಿಕ್ಕಿದೆ ಆದರೆ ಕೆಲವು ಕಂಡೀಷನ್‌ಗಳನ್ನು ವಿಧಿಸಿದೆ.

ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಜೊತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಟಿ ಜಾಕ್ವೆಲಿನ್‌ ಫರ್ನಾಂಡಿಸ್ ದೇಶ ಬಿಟ್ಟು ತೆರಳದಂತೆ ಇ.ಡಿ. (ಜಾರಿ ನಿರ್ದೇಶನಾಲಯ) ನಿರ್ಬಂಧ ವಿಧಿಸಿತ್ತು. ಇದೀಗ ದೆಹಲಿ ಕೋರ್ಟ್ ಇ.ಡಿ ನಿರ್ಬಂಧವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.

ಅಬುಧಾಬಿಯಲ್ಲಿ ಮೇ 31 ರಿಂದ ಜೂ.6 ರವರೆಗೆ ನಡೆಯಲಿರುವ ಐಫಾ ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಲು ಜಾಕ್ವೆಲಿನ್‌ಗೆ ಅನುಮತಿ ಸಿಕ್ಕಿದೆ. ನಟಿ ಜಾಕ್ವೆಲಿನ್ ಅಬುಧಾಬಿಯಲ್ಲಿರುವಾಗ ತಾನು ಉಳಿದುಕೊಳ್ಳಲಿರುವ ಹೋಟೆಲ್ ಬಗ್ಗೆ ವಿವರಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ತನ್ನ ಪ್ರಯಾಣದ ವಿವರಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ 50 ಲಕ್ಷ ರೂಪಾಯಿ ಠೇವಣಿಯನ್ನು ಶ್ಯೂರಿಟಿಯಾಗಿ ಸಲ್ಲಿಸುವಂತೆ ಕೋರ್ಟ್ ಕೇಳಿದೆ.

ಮೊಟ್ಟ ಮೊದಲ ಬಾರಿಗೆ ರೀಲ್ಸ್ ಅಂಗಳಕ್ಕೆ ಕಿಚ್ಚನ ಎಂಟ್ರಿ; ಸುದೀಪ್ ಮೊದಲ ರೀಲ್ಸ್ ಹೇಗಿದೆ ಗೊತ್ತಾ?‌

ಈ ಮೊದಲು ಐಫಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ವಿದೇಶ ಪ್ರವಾಸಕ್ಕಾಗಿ ಜಾಕ್ವೆಲಿನ್‌ ದೆಹಲಿ ಕೋರ್ಟಿನಲ್ಲಿ ಅನುಮತಿ ಕೇಳಿದ್ದರು. ಆದರೆ ಸುಳ್ಳು ಕಾರಣಗಳನ್ನು ನೀಡಿ ದೇಶ ಬಿಟ್ಟು ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ಆರೋಪಿಸಿದ್ದರು. ಮೇ 28 ದೆಹಲಿ ಕೋರ್ಟ್ ಜಾಕ್ವೆಲಿನ್‌ಗೆ ಕೇವಲ ಮೇ 31 ರಿಂದ ಜೂ.6 ರವರೆಗೆ ಅಬುಧಾಬಿಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಮತಿ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez ) ಹೆಸರು ಕೇಳಿಬಂದಿದ್ದು ಇತ್ತೀಚಿಗಷ್ಟೆ ಸುಕೇಶ್ ಚಂದ್ರಶೇಖರ್ ನೀಡಿದ್ದ 7 ಕೋಟಿ ಮೌಲ್ಯದ ಉಡುಗೊರೆ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ವಂಚನೆ ಆರೋಪ ಎದುರಿಸುತ್ತಿದ್ದು ಇಡಿ ಆಸ್ತಿ ಜಪ್ತಿ ಮಾಡಿತ್ತು. ನಟಿಗೆ ನೀಡಿದ್ದ ಉಡುಗೊರೆಗಳು ಮತ್ತು ಆಸ್ತಿ ಅಪರಾಧದಿಂದ ಬಂದಿದ್ದ ಆದಾಯ ಎಂದು ಇಡಿ ಹೇಳಿಕೆ ನೀಡಿದೆ.

ಜಾಕ್ವೆಲಿನ್‌ಗಾಗಿ ರೀಲ್ಸ್‌ ಮಾಡಿದ ಕಿಚ್ಚ ಸುದೀಪ್‌: ರಕ್ಕಮ್ಮ ರೀಲ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2019ರಲ್ಲಿ ಜೈಲು ಪಾಲಾಗಿದ್ದ ದೆಹಲಿ ಮೂಲದ ಉದ್ಯಮಿ, ರಾನ್ ಬಾಕ್ಸಿಯ ಮಾಜಿ ಮಾಲಿಕರಾಗಿದ್ದ ಶಿವಿಂದರ್ ಸಿಂಗ್ ಅವರ ಕುಟುಂಬದಿಂದ ಅಕ್ರಮವಾಗಿ ಪಡೆದ 200 ಕೋಟಿ ರೂಪಾಯಿಯಲ್ಲಿ 5.71 ಕೋಟಿ ರೂಪಾಯಿ ಬೆಲೆಬಾಳುವ ಉಡುಗೊರೆಯನ್ನು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ.