ಮಂಡಲ್ ಬ್ರದರ್ಸ್ ಹೆಸರು ಕೇಳ್ತಿದ್ದಂತೆ ದಿಲ್ ಲಗಾನಾ ಮನಾ ಥಾ ಸಾಂಗ್ ನೆನಪಿಗೆ ಬರುತ್ತೆ. ಮಧುರ ಧ್ವನಿಯಲ್ಲಿ ಎಲ್ಲರ ಗಮನ ಸೆಳೆದ ಬಾಲಕರಿಬ್ಬರ ಅದೃಷ್ಟ ಈಗ ಬದಲಾಗಿದೆ. ಒಂದು ಹಿಟ್ ಸಾಂಗ್ ನೀಡಿ ಸಹೋದರರು ಕಾರು ಖರೀದಿಸಿದ್ದಾರೆ. 

ಸೋಶಿಯಲ್ ಮೀಡಿಯಾ ಅನೇಕರ ಭವಿಷ್ಯ ಬದಲಿಸ್ತಿದೆ. ಅದ್ರಲ್ಲಿ ಸಾಕಷ್ಟು ಹಾಡುಗಾರರು ಸೇರಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ʻʻ ದಿಲ್ ಲಗಾನಾ ಮನಾ ಥಾʼʼ (Dil Lagana Mana Tha )ಸಾಂಗ್ ವೈರಲ್ ಆಗ್ತಿದೆ. ದ್ರೋಹ ಅಥವಾ ಸುಳ್ಳಿನಿಂದ ಅತಿ ಹೆಚ್ಚು ನೋವಾಗೋದಿಲ್ಲ. ತಪ್ಪು ನಿರ್ಧಾರ ಎಂದು ತಿಳಿದಿದ್ದರೂ ಪ್ರೀತಿಯಲ್ಲಿ ಬಿದ್ದಾಗ ನೋವಾಗುತ್ತದೆ ಎನ್ನುವ ಅರ್ಥದಲ್ಲಿ ಈ ಹಾಡಿದೆ. ಈ ಹಾಡು ಬ್ರೇಕ್ ಅಪ್ ಸಾಂಗ್. ಹಾಡಿದ ಅರ್ಥ, ಹಾಡಿಗೆ ನೀಡಿರುವ ಮ್ಯೂಜಿಕ್ ಜೊತೆಗೆ ಹಾಡುಗಾರರ ಧ್ವನಿ ಇಲ್ಲಿ ಹೈಲೈಟ್.

Add Asianetnews Kannada as a Preferred SourcegooglePreferred

ವೈರಲ್ ಹಾಡಿಗೆ ಮಕ್ಕಳ ಧ್ವನಿ

ಎಲ್ಲರ ಬಾಯಲ್ಲಿ ಕೇಳಿ ಬರ್ತಿರುವ, ರೀಲ್ಸ್ ಮೇಲೆ ರೀಲ್ಸ್ ಆಗ್ತಿರುವ ಈ ಹಾಡನ್ನು ಇಬ್ಬರು ಮುದ್ದಾದ ಮಕ್ಕಳು ಹಾಡಿದ್ದಾರೆ. ಕಿಶೋರ್ ಮತ್ತು ಕ್ರಿಶ್ ಮಂಡಲ್ (Kishore and Krish Mandal) ಎಂಬ ಇಬ್ಬರು ಸಹೋದರರ ಧ್ವನಿಯಲ್ಲಿ ಮೂಡಿ ಬಂದ ʻʻದಿನ್ ಲಗಾನಾ ಮನಾ ಥಾʼʼ ಹಾಡು ಜನಪ್ರಿಯತೆ ಗಳಿಸಿದ್ದು ಮಾತ್ರವಲ್ಲ ಕಿಶೋರ್ ಮತ್ತು ಕ್ರಿಶ್ ಮಂಡಲ್ ಪ್ರಸಿದ್ಧಿ, ಆರ್ಥಿಕ ಸ್ಥಿತಿಯನ್ನು ದೊಡ್ಡ ಮಟ್ಟದಲ್ಲಿ ಸುಧಾರಿಸಿದೆ.

ಪ್ರಾಮಿಸ್ ಉಳಿಸಿಕೊಳ್ಳಲು ಚೆನ್ನೈನಿಂದ ಮುಂಬೈಗೆ ಊಟ ತರಿಸಿದ ನಟ ಡಾರ್ಲಿಗ್

ಯಾರು ಕಿಶೋರ್ ಕ್ರಿಶ್ ಮಂಡಲ್

ಕಿಶೋರ್ ಹಾಗೂ ಕ್ರಿಶ್ ಮಂಡಲ್ ಕಳೆದ ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ವಿಟ್ ಆಗಿದ್ದಾರೆ. ಇಬ್ಬರೂ ಸಹೋದರರು ತಮ್ಮ ಹಾಡಿನ ವೀಡಿಯೊಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಅವರ ಧ್ವನಿ ಅಭಿಮಾನಿಗಳಿಂದ ಅಪಾರ ಪ್ರೀತಿ ಗಳಿಸಿವೆ. ಇಷ್ಟು ದಿನ ಸೋಶಿಯಲ್ ಮೀಡಿಯಾಕ್ಕೆ ಸೀಮಿತವಾಗಿದ್ದ ಕಿಶನ್ ಹಾಗೂ ಕ್ರಿಶ್ ಮಂಡಲ್ ಸಹೋದರರು ತಮ್ಮ ಹಾಡನ್ನು ವೃತ್ತಿಯಾಗಿ ಬದಲಿಸಿದ್ದಾರೆ. ಅವರ ಮೊದಲ ಹಾಡೇ ದೊಡ್ಡ ಹಿಟ್ ಆಗಿದೆ. ಸುಮಾರು ಒಂದು ತಿಂಗಳ ಹಿಂದೆ, ಮಂಡಲ್ ಸಹೋದರರ ಹಾಡು "ದಿಲ್ ಲಗಾನಾ ಮನಾ ಥಾ" ರಿಲೀಸ್ ಆಗಿದೆ. ಈಗ ಈ ಇಬ್ಬರು ಸಹೋದರರು ಲಕ್ಷಗಟ್ಟಲೆ ಮೌಲ್ಯದ ಕಾರಿನ ಮಾಲೀಕರಾಗಿದ್ದಾರೆ.

ಕ್ರಿಶ್ ಮಂಡಲ್ ವಯಸ್ಸು ಕೇವಲ 7 ವರ್ಷ. ಕ್ರಿಶ್ ಧ್ವನಿ ಅಭಿಮಾನಿಗಳ ಅಪಾರ ಮೆಚ್ಚುಗೆ ಗಳಿಸಿದೆ. ಸನಮ್ ಜೋಹರ್ ಮತ್ತು ಆಶಿ ಸಿಂಗ್ ನಟಿಸಿರುವ ಈ ಹಾಡಿಗೆ ಕಿಶೋರ್ ಮತ್ತು ಕ್ರಿಶ್ ಮಂಡಲ್ ಧ್ವನಿ ನೀಡಿದ್ದಾರೆ. ಇದು ಯೂಟ್ಯೂಬ್ನಲ್ಲಿ 66 ಮಿಲಿಯನ್ ವೀವ್ಸ್ ಪಡೆದಿದೆ. RDC ಮೆಲೊಡೀಸ್ನ ಯೂಟ್ಯೂಬ್ ನಲ್ಲಿ ಈ ಸಾಂಗ್ ಲಭ್ಯವಿದೆ. ಇನ್ಸ್ಟಾಗ್ರಾಮ್ ಒಂದು ಮಿಲಿಯನ್ ಗಿಂತ ಹೆಚ್ಚು ರೀಲ್ಸ್ ಮಾಡಲಾಗಿದೆ.

ಶಕೀರಾ ಫ್ಯಾನ್ಸ್‌ ಗೆ ಗುಡ್‌ ನ್ಯೂಸ್‌, ಬೆಂಗಳೂರಿನಲ್ಲೂ ವಾಕಾ ವಾಕಾ ಬೆಡಗಿ ಲೈವ್‌ ಶೋ

ಮರ್ಸಿಡಿಸ್ ಕಾರು ಖರೀದಿ

ಲಕ್ಷಾಂತರ ಅಭಿಮಾನಿಗಳನ್ನು ತಮ್ಮ ಸಾಂಗ್ ಮೂಲಕ ರಂಜಿಸಿರುವ ಮಂಡಲ್ ಬ್ರದರ್ಸ್, ಇತ್ತೀಚೆಗೆ ತಮ್ಮ ಚೊಚ್ಚಲ ಹಾಡು "ದಿಲ್ ಲಗಾನ ಮನ ಥಾ" ಯಶಸ್ಸಿನ ನಂತರ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಎಸ್ಯುವಿ ಮರ್ಸಿಡಿಸ್-ಬೆನ್ಜ್ ಜಿಎಲ್ಇ ಅನ್ನು ಖರೀದಿಸಿದ್ದಾರೆ. ಮಂಡಲ್ ಬ್ರದರ್ಸ್ ತಮ್ಮ ಹೊಸ ಕಾರಿನ ಮುಂದೆ ಕ್ರಿಶ್ ಪೋಸ್ ನೀಡುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಂಡಲ್ ಬ್ರದರ್ಸ್ ಸಾಧಿಸಿದ ಸಾಧನೆ ಗಮನಾರ್ಹವಾಗಿದೆ. ಅವರ ಹೊಸ ಕಾರಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

YouTube video player