ಬಾಲಿವುಡ್ ನಟಿ ಜಾಕ್ವೆಲಿನ್ ಜಾಕ್ವೆಲಿನ್ ಫರ್ನಾಂಡಿಸ್‌ಗಾಗಿ ಕಿಚ್ಚ ಸುದೀಪ್ ಮೊದಲ ರೀಲ್ಸ್ ಮಾಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕಿರುವ ಸುದೀಪ್ ಮೊದಲ ರೀಲ್ಸ್ ಇದೀಗ ವೈರಲ್ ಆಗಿದೆ.
ಬಾಲಿವುಡ್ ನಟಿ ಜಾಕ್ವೆಲಿನ್ ಜಾಕ್ವೆಲಿನ್ ಫರ್ನಾಂಡಿಸ್‌ಗಾಗಿ ಕಿಚ್ಚ ಸುದೀಪ್ ಮೊದಲ ರೀಲ್ಸ್ ಮಾಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕಿರುವ ಸುದೀಪ್ ಮೊದಲ ರೀಲ್ಸ್ ಇದೀಗ ವೈರಲ್ ಆಗಿದೆ. ಇದಕ್ಕೂ ಮುನ್ನ ಸುದೀಪ್ ಜಾಕ್ವೆಲಿನ್‌ಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಈ ವೇಳೆ ಇತ್ತೀಚೆಗೆ ಬಿಡುಗಡೆಯಾದ ‘ವಿಕ್ರಾಂತ್ ರೋಣ’ ಚಿತ್ರದ ‘ಗಡಂಗ್ ರಕ್ಕಮ್ಮ’ ಹಾಡಿಗೆ ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಇಬ್ಬರೂ ಖುಷಿ ಪಟ್ಟಿದ್ದಾರೆ. ಬಳಿಕ ಈ ಹಾಡಿನ ರೀಲ್ಸ್ ಮಾಡುವಂತೆ ಜಾಕ್ವೆಲಿನ್ ಸುದೀಪ್‌ಗೆ ಒತ್ತಾಯಿಸಿದ್ದಾರೆ.
ಈವರೆಗೆ ಒಂದೂ ರೀಲ್ಸ್ ಮಾಡದ ಸುದೀಪ್ ಈ ರಿಕ್ವೆಸ್ಟ್ ಓಕೆ ಮಾಡಿದರೂ ಜಾಕ್ವೆಲಿನ್‌ಗೆ ಒಂದು ಷರತ್ತು ವಿಧಿಸಿದ್ದಾರೆ. ತಾನು ಹೇಳುವ ಕನ್ನಡ ಮಾತನ್ನು ಪುನರುಚ್ಚರಿಸಬೇಕು ಅಂತ ಹೇಳಿದ್ದಾರೆ. ಆರಂಭದಲ್ಲಿ ‘ಕನ್ನಡದ ಈ ಸಾಲು ಉಚ್ಚರಿಸೋದು ಕಷ್ಟ. ಆದರೂ ಪ್ರಯತ್ನಿಸುತ್ತೇನೆ’ ಎಂದರೂ ಆಮೇಲೆ ಸುದೀಪ್ ಹೇಳಿದಂತೆ ‘ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದ್ದೀನಿ’ ಎಂದು ಹೇಳಿ ಅಚ್ಚರಿ ನೀಡಿದ್ದಾರೆ. ಇದಾಗಿ ಕೆಲ ಹೊತ್ತಿಗೇ ಸುದೀಪ್ ಹೊಸ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಕೆಲವೇ ಈ ಕ್ಷಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ.
Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!
ಜಾಕ್ವೆಲಿನ್ ಹೇಳಿದ 'ವಿಕ್ರಾಂತ್ ರೋಣ' ಡೈಲಾಗ್ ವೈರಲ್: ‘ಊರಲ್ಲೆಲ್ಲ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು.. ವಿಕ್ರಾಂತ್ ರೋಣ’. ಹೀಗೆ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಕೀ ಡೈಲಾಗ್ ಅನ್ನು ಉದುರಿಸಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸುದೀಪ್ ಜೊತೆಗಿನ ಸಂದರ್ಶನವೊಂದರಲ್ಲಿ ಫೋನ್ ಮೂಲಕ ಮಾತನಾಡಿದ ಜಾಕ್ವೆಲಿನ್, ಸುದೀಪ್ ಸಹಕಾರದಿಂದ ಈ ಡೈಲಾಗ್ ಹೊಡೆದರು. ‘ಗಡಂಗ್ ರಕ್ಕಮ್ಮ ಹಾಡು ರಿಲೀಸ್ ಆದ ಅರ್ಧ ಗಂಟೆಯೊಳಗೆ ನನ್ನ ಲುಕ್ ಮೆಚ್ಚಿಕೊಂಡು ಕಾಲ್‌ಗಳು ಬರಲಾರಂಭಿಸಿದವು. ಚಿತ್ರದಲ್ಲಿ ಸುದೀಪ್ ಎನರ್ಜಿ ಮ್ಯಾಚ್ ಮಾಡಲಾಗದ್ದು’ ಎಂದು ಈ ವೇಳೆ ಮೆಚ್ಚುಗೆಯ ಮಾತಾಡಿದರು.
‘ಡ್ಯಾನ್ಸ್ ಅನ್ನು ಒಂದೋ ಖುಷಿಗಾಗಿ ಇಲ್ಲವೇ ದುಡ್ಡಿಗಾಗಿ ಅಥವಾ ಮರ್ಯಾದೆ ಉಳಿಸಿಕೊಳ್ಳೋದಕ್ಕೋಸ್ಕರ ಮಾಡ್ತಾರೆ. ಇದರಲ್ಲಿ ನನ್ನದು ಮೂರನೇ ರೀತಿ. ಹೇಳಿಕೊಳ್ಳುವಂಥಾ ಉತ್ತಮ ಡ್ಯಾನ್ಸರ್ ನಾನಲ್ಲ. ಆದರೆ ಜಾನಿ ಮಾಸ್ಟರ್ ನನ್ನ ಕಂಫರ್ಟ್ ಅರ್ಥ ಮಾಡಿಕೊಂಡು ಸ್ಟೆಫ್ಸ್ ಕಲಿಸಿದ್ದಾರೆ. ಹೀಗಾಗಿ ಡ್ಯಾನ್ಸ್ ಉತ್ತಮವಾಗಿ ಮೂಡಿಬಂದಿದೆ’ ಎಂದು ಗಡಂಗ್ ರಕ್ಕಮ್ಮ ಹಾಡಿನ ಬಗ್ಗೆ ಈ ವೇಳೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಅನುಪ್ ಭಂಡಾರಿ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ , ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಡೀಂಸ್ ತಾರಾಗಣದಲ್ಲಿದ್ದಾರೆ.
'ವಿಕ್ರಾಂತ್ ರೋಣ' ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕಾರ್ ಗಿಫ್ಟ್ ಮಾಡಿದ ಕಿಚ್ಚ ಸುದೀಪ್
ನಟ ಸುದೀಪ್ ಅವರ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಗೆ ಬರುವುದಕ್ಕೆ ಹತ್ತಿರವಾಗುತ್ತಿರುವಂತೆ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕು, ವಿದೇಶಗಳಲ್ಲಿ ಬಿಡುಗಡೆ ಮಾಡುವ ಪ್ಲಾನು, ಸಲ್ಮಾನ್ ಖಾನ್ ಜತೆಯಾಗಿರುವುದರ ಜೊತೆ ಪಿವಿಆರ್ ಸಂಸ್ಥಯೂ ಉತ್ತರ ಭಾರತದ ರಾಜ್ಯಗಳಲ್ಲಿ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಈ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. ಈ ಚಿತ್ರವನ್ನು ಶಾಲಿನಿ ಆರ್ಟ್ಸ್ ಮೂಲಕ ಜಾಕ್ ಮಂಜು ಅವರು ನಿರ್ಮಿಸಿದ್ದಾರೆ. ಅಲಾಂಕಾರ್ ಪಾಂಡ್ಯನ್ ಅವರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಜುಲೈ 28ರಂದು ಪ್ರಪಂಚದಾದ್ಯಂತ ಈ ಸಿನಿಮಾ ತೆರೆಗೆ ಬರುತ್ತಿದೆ.
