23ರ ಹರೆಯದಲ್ಲೇ ಚಿತ್ರರಂಗ ತೊರೆದ ನಟಿ ಆಯೇಷಾ ಟಾಕಿಯಾ, ಫರ್ಹಾನ್ ಅಜ್ಮಿ ಜೊತೆಗಿನ ಪ್ರೇಮ, ಮತಾಂತರ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಟಾರ್ಜನ್ ಚಿತ್ರದಿಂದ ಖ್ಯಾತಿ ಪಡೆದ ಆಯೇಷಾ, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗಕ್ಕೆ ವಿದಾಯ ಹೇಳಿದರು. ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು, ಪುತ್ರನೊಂದಿಗೆ ಜೀವನ ಸವೆಸುತ್ತಿದ್ದಾರೆ. ಇತ್ತೀಚೆಗೆ ಚಿತ್ರ ಹಂಚಿಕೊಂಡು ಟ್ರೋಲ್​ಗೆ ಒಳಗಾಗಿದ್ದರು.

 ಸನ್‌ಡೇ, ವಾನ್‌ಟೆಡ್, ಶಾದಿ ನಂ 1, ಸೂಪರ್ ಸಿನಿಮಾ ಸೇರಿದಂತೆ ಹಲವು ಸೂಪರ್​ಹಿಟ್​ ಚಿತ್ರಗಳನ್ನು ನೀಡಿ, ನಟ ಸಲ್ಮಾನ್​ ಖಾನ್​ ಜೊತೆ ಆನ್ ಸ್ಕ್ರೀನ್ ಮೋಡಿ ಮಾಡಿದ್ದ ನಟಿ ಆಯೇಷಾ ಟಾಕಿಯಾ, ಇದ್ದಕ್ಕಿದ್ದಂತೆಯೇ 2009ರಿಂದ ಚಿತ್ರರಂಗದಿಂದ ಕಣ್ಮರೆಯಾಗಿಬಿಟ್ಟು ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಆಗ ಆಕೆಗಿನ್ನೂ 23 ವರ್ಷ ವಯಸ್ಸು. ಅವರು ದಿಢೀರನೆ ಕಣ್ಮರೆಯಾಗುವುದಕ್ಕೆ ಕಾರಣ, ಮದುವೆಯಾದದ್ದು. ಬಾಲಿವುಡ್​ನ ಇಂಥ ಬ್ಯೂಟಿಗಳು ಮದುವೆಯಾದರೆ ಅದು ಸಕತ್​ ಸದ್ದು ಮಾಡುತ್ತಿತ್ತು. ಆದರೆ ಆಯೇಷಾ ಅವರು ಇಸ್ಲಾಂಗೆ ಮತಾಂತರಗೊಂಡು ನಿಗೂಢವಾಗಿ ಮದುವೆಯಾಗಿದ್ದರು. ಮೂರು ವರ್ಷಗಳ ಡೇಟಿಂಗ್ ಬಳಿಕ, ಮದುವೆಯಾಗಿ ಚಿತ್ರರಂಗದಿಂದ ದೂರವಾಗಿದ್ದರು. ಇದೀಗ ಅವರು ಮತ್ತೆ ತಮ್ಮ ಹಳೆಯ ಲವ್​ಸ್ಟೋರಿಯನ್ನು ಮೆಲುಕು ಹಾಕಿದ್ದಾರೆ. 

ಅಂದಹಾಗೆ, ಆಯೇಷಾ ತಮ್ಮ ಚೊಚ್ಚಲ ಚಿತ್ರ ಟಾರ್ಜನ್​ನಿಂದಲೇ ಫೇಮಸ್​ ಆದವರು. ಈ ಚಿತ್ರ ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿ ನಟಿಗೆ ಸಾಕಷ್ಟು ಅವಕಾಶಗಳು ಹುಡುಕಿ ಬರಲಾರಂಭಿಸಿದ್ದವು. ಆದರೆ ಆಗಲೇ ನಟಿ ಸಮಾಜವಾದಿ ಪಕ್ಷದ ಶಾಸಕನ ಮಗನಾದ ಉದ್ಯಮಿ ಫರ್ಹಾನ್ ಅಜ್ಮಿ ಅವರ ಜೊತೆ ಲವ್​ನಲ್ಲಿ ಬಿದ್ದಿದ್ದರು. ಮದುವೆಯಾಗಬೇಕೆಂದರೆ ಮತಾಂತರಗೊಳ್ಳಬೇಕಿತ್ತು. ಆದ್ದರಿಂದ ಇಸ್ಲಾಂಗೆ ಮತಾಂತರಗೊಂಡ ನಟಿ ಮದುವೆಯಾದರು, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಹಿಂದೂ ಧರ್ಮದ ಜೊತೆ ಬಣ್ಣದ ಲೋಕಕ್ಕೂ ವಿದಾಯ ಹೇಳಿದರು. 

23 ವರ್ಷಗಳ ಬಳಿಕ ಶಾರುಖ್​ ಪತ್ನಿ ಗೌರಿ ಮತಾಂತರ? ವೈರಲ್​ ಫೋಟೋಗಳ ಹಿಂದೆ ಭಯಾನಕ ಸತ್ಯ!

ಫರ್ಹಾನ್ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಬು ಅಜ್ಮಿ ಅವರ ಮಗ. ಮದುವೆಯಾದ ನಂತರ, ಆಯೇಷಾ ತನ್ನ ಹೆಸರನ್ನು ಆಯೇಷಾ ಟಕಿಯಾ ಅಜ್ಮಿ ಎಂದು ಬದಲಾಯಿಸಿಕೊಂಡರು. ಅಂದಹಾಗೆ ಆಯೇಷಾ 15 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು, ಮತ್ತು 90 ರ ದಶಕದಲ್ಲಿ ಅವರು ಫಲ್ಗುಣಿ ಪಾಠಕ್ ಅವರ 'ಮೇರಿ ಚುನ್ರಿ ಉದ್ ಉದ್ ಜಾಯೆ' ಹಾಡಿನಲ್ಲಿ ನಟಿಸಿದರು. ಅವರು ಶಾಹಿದ್ ಕಪೂರ್ ಅವರೊಂದಿಗೆ ಜಾಹೀರಾತಿನೊಂದಿಗೆ ಗಮನ ಸೆಳೆದರು. ಅವರು ಮೊದಲು ಮನಿಷಾ ಕೊಯಿರಾಲಾ ಅವರ ಸಹೋದರ ಸಿದ್ಧಾರ್ಥ್ ಕೊಯಿರಾಲಾ ಅವರೊಂದಿಗೆ 3 ವರ್ಷಗಳ ಕಾಲ ಸಂಬಂಧ ಹೊಂದಿದ್ದರು.

ಈಗ ಸೋಷಿಯಲ್​ ಮೀಡಿಯಾದಲ್ಲಿ ನಟಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಈಗ ತಮ್ಮ ಜೀವನದ ಬಗ್ಗೆ ಹೆಚ್ಚಿಗೆ ಮಾತನಾಡದ ನಟಿ, ನನ್ನ ಮುಂದಿನ ತಿರುವಿನಲ್ಲಿ ಏನಾಗುತ್ತದೆ ಎಂದು ನಿಮಗೆ ತಿಳಿಯದಿದ್ದರೆ, ಅದೇ ನನಗೆ ನನ್ನ ಜೀವನದಲ್ಲಿ ಸಿಗುವ ಮೋಜು ಎಂದು ಒಗಟಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆ ಅವರು, 'ನಾನು ಫರ್ಹಾನ್ ಅವರನ್ನು ಪಡೆದುಕೊಂಡು ಅವರನ್ನು ಮದುವೆಯಾಗಿದ್ದು ನನ್ನ ಅದೃಷ್ಟ' ಎಂದಿದ್ದಾರೆ. ನನಗೆ ಚಿತ್ರಕಲೆ ಮತ್ತು ಪುಸ್ತಕಗಳನ್ನು ಓದುವುದು ತುಂಬಾ ಇಷ್ಟ. ಕೆಲಸದ ಕಾರಣದಿಂದಾಗಿ ಅವರು ತಮ್ಮ ಹವ್ಯಾಸಗಳಿಗೆ ಸಮಯವನ್ನು ನೀಡಲು ಸಾಧ್ಯವಾಗಲಿಲ್ಲ, ಆದರೆ ಅವರು ಈಗ ತಮ್ಮ ಹವ್ಯಾಸಗಳಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಮೀಸಲಿಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ಮಗ ಮಿಖಾಯಿಲ್ ಅಜ್ಮಿಯನ್ನು ನೋಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

 ಈಚೆಗಷ್ಟೇ ನಟಿ, ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಲೇಟೆಸ್ಟ್ ಫೋಟೋವೊಂದನ್ನು ಹಂಚಿಕೊಂಡು ಟ್ರೋಲ್​ಗೆ ಒಳಗಾಗಿದ್ದರು. ಆ ಫೋಟೋದಲ್ಲಿ ಗುರುತೇ ಸಿಗದಷ್ಟು ಬದಲಾಗಿ ವಿಚಿತ್ರವಾಗಿ ಕಾಣಿಸುತ್ತಿದ್ದರು. ಇದನ್ನೂ ನೋಡಿದ ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಹೀಗಾಗಿ ಬಿಟ್ಟಿದ್ದಾರೆ ಎಂದೆಲ್ಲಾ ನಟಿಗೆ ಟೀಕೆ ಮಾಡಿದ್ದರು. ಇದರಿಂದ ಬೇಸತ್ತು. ಇನ್​ಸ್ಟಾಗ್ರಾಮ್​ ಅಕೌಂಟ್ ಅನ್ನೇ ಡಿಲೀಟ್ ಮಾಡಿದ್ದರು. ಆದ್ದರಿಂದ ನಿಮ್ಮ ಈಗಿನ ಜೀವನ ಹೇಗಿದೆ ಎಂದು ಕಮೆಂಟ್​ನಲ್ಲಿ ಅವರ ಮಾಜಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. 

ಮದ್ವೆ ಬೇಡ, ಮಗು ಬೇಕೆಂದ ಮೃಣಾಲ್ ಠಾಕೂರ್​ ಕಿಸ್​ ಮಾಡದೇ ಪಟ್ಟ ಶ್ರಮದ ಬಗ್ಗೆ ಓಪನ್​ ಮಾತು: ನಟಿ ಹೇಳಿದ್ದೇನು?