Asianet Suvarna News Asianet Suvarna News

ವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತೆಗಳಿದ ಅನನ್ಯಾ ಪಾಂಡೆ

ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಬಗ್ಗೆ ಅನನ್ಯಾ ಪಾಂಡೆ ಮಾತನಾಡಿದ್ದು ಆ ಸಿನಿಮಾವನ್ನು ತೆಗಳಿದ್ದಾರೆ. ಈ ರೀತಿಯ ಚಿತ್ರಗಳು ಸಮಾಜವನ್ನು ಹಾಳು ಮಾಡುತ್ತವೆ ಎಂಬರ್ಥದಲ್ಲಿ ಅನನ್ಯಾ ಪಾಂಡೆ ಮಾತನಾಡಿದ್ದಾರೆ. ವಿಜಯ್ ದೇವರಕೊಂಡ ಮುಂದೆಯೇ ಅರ್ಜುನ್ ರೆಡ್ಡೆಯನ್ನು ತೆಗಳಿದ್ದು ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.

Bollywood Actress Ananya Panday Criticized Arjun Reddy film In front Of Vijay Devarakonda sgk
Author
Bengaluru, First Published Jul 30, 2022, 3:18 PM IST

ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಇಬ್ಬರು ಲೈಗರ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದು ಈ ಸಿನಿಮಾದ ಪ್ರಮೋಷಮ್ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾ ಮುಂದಿನ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತೆಲುಗು ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇಬ್ಬರೂ ಮುಂಬೈ ಮತ್ತು ಹೈದರಬಾದ್ ಸೇರಿದಂತೆ ಏನಕ ಕಡೆ ತೆರಳಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಜೋಡಿ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್​’ ಶೋಗೆ ಹಾಜರಾಗಿದ್ದರು. ಈ ವೇಳೆ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಬಗ್ಗೆ ಅನನ್ಯಾ ಪಾಂಡೆ ಮಾತನಾಡಿದ್ದು ಆ ಸಿನಿಮಾವನ್ನು ತೆಗಳಿದ್ದಾರೆ. ಈ ರೀತಿಯ ಚಿತ್ರಗಳು ಸಮಾಜವನ್ನು ಹಾಳು ಮಾಡುತ್ತವೆ ಎಂಬರ್ಥದಲ್ಲಿ ಅನನ್ಯಾ ಪಾಂಡೆ ಮಾತನಾಡಿದ್ದಾರೆ. ವಿಜಯ್ ದೇವರಕೊಂಡ ಮುಂದೆಯೇ ಅರ್ಜುನ್ ರೆಡ್ಡೆಯನ್ನು ತೆಗಳಿದ್ದು ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ನಟನೆಯ ಅರ್ಜುನ್​ ರೆಡ್ಡಿ ಸಿನಿಮಾದಲ್ಲಿ ಹೀರೋಯಿನ್ ಕಪಾಳಕ್ಕೆ  ಹೀರೋ ಹೊಡೆಯುವ ದೃಶ್ಯವಿದೆ. ಇದನ್ನು ವಿಜಯ್ ದೇವರಕೊಂಡ ಮಾಡಬಾರದಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೇ ಅನೇಕ ಮಹಿಳಾ ಸಂಘಟನೆಗಳು ಈ ದೃಶ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಕಾಫಿ ವಿತ್ ಕರಣ್​ 7ನಲ್ಲಿ ಕರಣ್ ಜೋಹರ್ ಪ್ರಶ್ನೆ ಮಾಡಿದರು.

ಇದಕ್ಕೆ ವಿಜಯ್ ದೇರವಕೊಂಡ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಾನು ಮಾಡಿದ ಎಲ್ಲಾ ದೃಶ್ಯಗಳನ್ನೂ ಒಪ್ಪುತ್ತೇನೆ ಎಂದರು. ಇದಕ್ಕೆ ಅನನ್ಯಾ ಪಾಂಡೆ ಅಪಸ್ವರ ಎತ್ತಿದ್ದರು. ವಿಜಯ್ ಹೇಳಿದ ಮಾತಿಗೆ ಅವರು ವಿರೋಧ ವ್ಯಕ್ತಪಡಿಸಿದರು.

‘ಅರ್ಜುನ್ ರೆಡ್ಡಿ ಸಿನಿಮಾ ಇಡೀ ಸಮಾಜವನ್ನು ತಪ್ಪು ದಾರಿಗೆ ಎಳೆಯಬಹುದು. ಆ ಸಾಮರ್ಥ್ಯ ಚಿತ್ರಕ್ಕಿದೆ. ಗರ್ಲ್​​ಫ್ರೆಂಡ್​ಗೆ ಬಾಯ್​ಫ್ರೆಂಡ್​ ಹೊಡೆಯಬಹುದು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ನಾನು ಅರ್ಜುನ್ ರೆಡ್ಡಿ ಸಿನಿಮಾವನ್ನು ಒಪ್ಪುವುದಿಲ್ಲ. ಇದು ಯುವಕರ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿದೆ’ ಎಂದು ಅನನ್ಯಾ ಪಾಂಡೆ ಹೇಳಿದರು. 

ಸ್ಟಾರ್ ನಟಿಯಾಗಿ ಹರಿದ ಬಟ್ಟೆ ಹಾಕ್ಕೊಂಡು ಬರೋದು ಯಾಕೆ; ಅನನ್ಯಾ ಪಾಂಡೆಗೆ ಕ್ಲಾಸ್!

ಅನನ್ಯಾ ಪಾಂಡೆ ಅವರ ಹೇಳಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಸಹ ಕಲಾವಿದರು ಹೇಳಿದ್ದನ್ನು ಹೌದು ಎಂದು ಪಕ್ಕದಲ್ಲಿ ಕುಳಿತವರು ಒಪ್ಪುವವರೇ ಜಾಸ್ತಿ. ಆದರೆ ಅನನ್ಯಾ ಪಾಂಡೆ ಈ ರೀತಿ ಮಾಡಿಲ್ಲ. ಅವರು ವಿಜಯ್ ದೇವರಕೊಂಡ ಹೇಳಿದ ಮಾತಿಗೆ ಶೋನಲ್ಲೇ ಅಸಮಾಧಾನ ಹೊರಹಾಕಿದರು. ಅನನ್ಯಾ ಮಾತು ಮೆಚ್ಚುವಂತಹದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. 

ಅನನ್ಯಾ ಜೊತೆ ಮುಂಬೈ ಲೋಕಲ್ ಟ್ರೈನ್‌ನಲ್ಲಿ ವಿಜಯ್ ದೇವರಕೊಂಡ ಸುತ್ತಾಟ; ವಿಡಿಯೋ ವೈರಲ್

ಮುಂಬೈ ಲೋಕಲ್ ಟ್ರೈನ್‌ನಲ್ಲಿ ಅನನ್ಯಾ-ವಿಜಯ್ ಸುತ್ತಾಟ

ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಇಬ್ಬರು ಮುಂಬೈ ಲೋಕಲ್ ಟ್ರೈನ್ ನಲ್ಲಿ ಓಡಾಡಿದ್ದಾರೆ. ಅನನ್ಯಾ ಜೊತೆ ಟ್ರೈನ್ ನಲ್ಲಿ ಮುಂಬೈ ಸುತ್ತಿದ ವಿಜಯ್ ದೇವರಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇಬ್ಬರು ದುಬಾರಿ ಕಾರು ಬಿಟ್ಟು ಜನಸಾಮಾನ್ಯರು ಓಡಾಡುವ ಟ್ರೈನ್ ಹತ್ತಲು ಕಾರಣ ಲೈಗರ್ ಸಿನಿಮಾ ಪ್ರಮೋಷನ್.  ಪೂರಿ ಜಗನ್ನಾಥ್ ನಿರ್ದೇಶನದ ಟೈಗರ್ ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗುತ್ತಿದೆ. ಅನನ್ಯಾ ಕೈ ಹಿಡಿದು ಟ್ರೈನ್ ನಲ್ಲಿ ನಿಂತಿದ್ದಾರೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ, ಅನನ್ಯಾ ತೊಡೆ ಮೇಲೆ ಮಲಗಿದ್ದಾರೆ. ಅನನ್ಯಾ ಪಾಂಡೆ ಡೆನಿಮ್ ಪ್ಯಾಂಟ್ ಮತ್ತು ಹಳದಿ ಬಣ್ಣದ ಟಾಪ್ ಧರಿಸಿದ್ದರು. ವಿಜಯ್ ದೇವರಕೊಂಡ ಬ್ಲ್ಯಾಕ್ ಟಿ ಶರ್ಟ್ ಮತ್ತು ಪ್ಯಾಂಟ ಧರಿಸಿದ್ದರು. ಇಬ್ಬರು ಮುಂಬೈ ಲೋಕಲ್ ಟ್ರೈನ್ ನಲ್ಲಿ ಓಡಾಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

Follow Us:
Download App:
  • android
  • ios