Asianet Suvarna News Asianet Suvarna News

ಪರ್ಫೆಕ್ಟ್ ಪೇರೆಂಟಿಂಗ್ ಕಾನ್ಸೆಪ್ಟ್ ಅನುಸರಿಸ್ತಾರಾ ಆಲಿಯಾ? ಎಲ್ಲ ಪಾಲಕರು ತಿಳೀಬೇಕು ಈ ವಿಷ್ಯ

ಬಾಲಿವುಡ್ ನಟಿ ಆಲಿಯಾ ಭಟ್ ವೃತ್ತಿ ಜೊತೆ ವೈಯಕ್ತಿಕ ಜೀವನದಲ್ಲೂ ಸುದ್ದಿಯಲ್ಲಿರ್ತಾರೆ. ರಾಹಾ ಬಂದ್ಮೇಲೆ ಆಲಿಯಾ ಲೈಫ್ ಬದಲಾಗಿದೆ. ಪರ್ಫೆಕ್ಟ್ ಅಮ್ಮನಾಗಲು ಏನು ಮಾಡ್ತೇನೆ ಎಂಬುದನ್ನು ಆಲಿಯಾ ಸಂದರ್ಶನದಲ್ಲಿ ಹೇಳಿದ್ದಾರೆ. 
 

bollywood actress Alia Bhatt Says There Is No Perfect Parenting roo
Author
First Published Aug 3, 2024, 2:11 PM IST | Last Updated Aug 3, 2024, 2:11 PM IST

ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಹೇಗೆ ಬೆಳೆಸ್ತಾರೆ (Nurturing of kids by Bollywood celebrities) ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲ ಜನರಿಗೆ ಇದ್ದೇ ಇರುತ್ತೆ. ಅವರಿಗೇನು, ಕೈಗೊಂದು, ಕಾಲಿಗೊಂದು ಆಳುಗಳಿರ್ತಾರೆ, ಮಕ್ಕಳನ್ನು ನೋಡಿಕೊಳ್ಬೇಕು ಎನ್ನುವ ಜವಾಬ್ದಾರಿ ಇರೋದಿಲ್ಲ ಎನ್ನುವವರೇ ಹೆಚ್ಚು. ಆದ್ರೆ ಸೆಲೆಬ್ರಿಟಿಗಳು ಕೂಡ ಮಕ್ಕಳನ್ನು ಬೆಳೆಸುವ ವಿಷ್ಯದಲ್ಲಿ ಸಾಕಷ್ಟು ಎಚ್ಚರಿಕೆ ಹೆಜ್ಜೆ ಇಡ್ಬೇಕಾಗುತ್ತದೆ.  ಎರಡು ವರ್ಷದ ಹಿಂದೆ ಅಮ್ಮನಾಗಿರುವ ಬಾಲಿವುಡ್ ನಟಿ ಆಲಿಯಾ ಕೂಡ ಅಮ್ಮಂದಿರು ಅನುಭವಿಸುವ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಆಲಿಯಾ ಭಟ್, ಪರ್ಫೆಕ್ಟ್ ಪೇರೆಂಟಿಂಗ್ ಬಗ್ಗೆ ಮಾತನಾಡಿದ್ದಾರೆ. ಪರ್ಫೆಕ್ಟ್ ಪೇರೆಂಟಿಂಗ್ ಎಂಬುದು ಇಲ್ಲ ಎನ್ನುವ ಆಲಿಯಾ ಭಟ್, ಪ್ರತಿ ದಿನ ಈ ಸಂಗತಿಯನ್ನು ತಮಗೆ ತಾವೇ ಹೇಳಿಕೊಳ್ತಾರೆ.

ಪರ್ಫೆಕ್ಟ್ ಪೇರೆಂಟಿಂಗ್ (Perfect Parenting) ಇಲ್ವೇ ಇಲ್ಲ ಎನ್ನುವ ಆಲಿಯಾ ಭಟ್ (Alia Bhatt) , ಕುಟುಂಬದ ಒಂದು ವಿಷ್ಯ ನನಗೆ ಬಹಳ ಇಷ್ಟ ಎಂದಿದ್ದಾರೆ. ಅದು ಜೀವನ ನಡೆಸುವ ವಿಧಾನ. ನನ್ನ ಅಮ್ಮ – ಅಪ್ಪ ನನ್ನ ಭಾವನೆಗಳನ್ನು ನಿಯಂತ್ರಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ನನಗೆ ಅಗತ್ಯವಿದ್ದಾಗ ಅವರು ನನ್ನ ಜೊತೆಗಿದ್ದರು ಎನ್ನುತ್ತಾರೆ ರಣಬೀರ್ ಕಪೂರ್ ಪತ್ನಿ.

30 ವರ್ಷಗಳ ಬಳಿಕ ಜೀವದ ಗೆಳತಿ ಹುಡುಕಿಕೊಟ್ಟ ಫೇಸ್‌ಬುಕ್!

ಹೃದಯದ ಮಾತು ಕೇಳುವ ಆಲಿಯಾ : ಮಗಳು ರಾಹಾ ವಿಷ್ಯದಲ್ಲಿ ನಾನು ನನ್ನ ಮನಸ್ಸಿನ ಮಾತನ್ನು ಹೆಚ್ಚು ಕೇಳ್ತೇನೆ ಎನ್ನುತ್ತಾರೆ ಆಲಿಯಾ. ಈ ಬಗ್ಗೆ ನಾನು ಹೆಚ್ಚು ಆಲೋಚನೆ ಮಾಡೋದಿಲ್ಲ. ಯಾಕೆಂದ್ರೆ ನಾವು ಮಾಡಿದ ಪ್ಲಾನ್ ಯಾವುದೋ ಅಲ್ಲಿ ನಡೆಯೋದಿಲ್ಲ. ಹಾಗಾಗಿ ನಾನು ಮಗಳ ಬಗ್ಗೆ ಏನೂ ಆಲೋಚನೆ ಮಾಡೋದಿಲ್ಲ. ಏನು ಆಗ್ತಿದೆಯೋ ಅದಕ್ಕೆ ನಾನು ಹೊಂದಿಕೊಳ್ತೇನೆ ಎನ್ನುತ್ತಾರೆ ಆಲಿಯಾ. 

ಮಗಳಿಗೆ ಯಾವ ಸಿನಿಮಾ ತೋರಿಸ್ತಾರೆ ಆಲಿಯಾ : ರಾಹಾ ಬಗ್ಗೆ ಜನರ ನಿರೀಕ್ಷೆ ನಿಧಾನವಾಗಿ ಹೆಚ್ಚಾಗ್ತಿದೆ. ಈ ಹಿಂದೆ ಆಲಿಯಾ ತಂದೆ ಮಹೇಶ್ ಭಟ್ ಬಳಿ ರಾಹಾಗೆ ಯಾವ ಸಿನಿಮಾ ತೋರಿಸ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಇದೇ ಪ್ರಶ್ನೆಯನ್ನು ಆಲಿಯಾಗೆ ಕೇಳಿದಾಗ ಅವರು, ಯಾವುದೇ ಒಂದು ಚಿತ್ರದ ಹೆಸರನ್ನು ಹೇಳಿಲ್ಲ. ರಾಹಾ ಸ್ಕ್ರೀನ್ ಟೈಂ ಒಳ್ಳೆ ಚಿತ್ರದ ಜೊತೆ ಇರಬೇಕು ಎಂದಿದ್ದಾರೆ. ದೂರದಿಂದ ರಾಹಾ ಚಿತ್ರಗಳನ್ನು ವೀಕ್ಷಣೆ ಮಾಡ್ಬೇಕು ಅಂತ ನಾನು ಬಯಸ್ತೇನೆ. ಅವಳು ಒಳ್ಳೆ ಸಿನಿಮಾಗಳನ್ನು ಈ ಸಮಯದಲ್ಲಿ ನೋಡ್ಬೇಕು. ಅವಳಿಗೆ ಆ ಸಿನಿಮಾಗಳ ಮೇಲೆ ಪ್ರೀತಿ ಹುಟ್ಟಬೇಕು ಎನ್ನುತ್ತಾರೆ ಆಲಿಯಾ. 

ಪರ್ಫೆಕ್ಟ್ ಪೇರೆಂಟ್ ಬಗ್ಗೆ ಪ್ರತಿಯೊಬ್ಬ ಪಾಲಕರಿಗೆ ತಿಳಿದಿರಬೇಕು ಈ ವಿಷ್ಯ : ಆಲಿಯಾ ಭಟ್ ಪರ್ಫೆಕ್ಟ್ ಪೇರೆಂಟಿಂಗ್ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯರು ಕೂಡ ಇದ್ರ ಬಗ್ಗೆ ತಿಳಿಯುವ ಅವಶ್ಯಕತೆ ಇದೆ. ಪರ್ಫೆಕ್ಟ್ ಪೇರೆಂಟ್ ಎನ್ನುವ ವಿಷ್ಯವೇ ಇಲ್ಲ ಎಂಬ ಆಲಿಯಾ ಮಾತು ನೂರಕ್ಕೆ ನೂರು ಸತ್ಯ. ಪ್ರತಿಯೊಬ್ಬ ಮಗುವನ್ನು ಬೆಳೆಸುವ ವಿಧಾನ ಭಿನ್ನವಾಗಿರುತ್ತದೆ. ನೀವು ಒಳ್ಳೆ ಪೇರೆಂಟ್ ಆಗ್ಬೇಕೆಂದ್ರೆ ನಿಮ್ಮ ಮಕ್ಕಳ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಮಕ್ಕಳನ್ನು ಪ್ರೀತಿ ಮಾಡಿ. ಯಾವುದೇ ಸಮಯದಲ್ಲಾದ್ರೂ ಎಲ್ಲ ವಿಷ್ಯವನ್ನು ಮಕ್ಕಳು ನಿಮ್ಮೊಂದಿಗೆ ಹಂಚಿಕೊಳ್ಳುವಂತೆ ಬೆಳೆಸಿ. ಮಕ್ಕಳ ಜೊತೆ ಸದಾ ನೀವಿದ್ದೀರಿ ಎಂಬ ಭರವಸೆ ಅವರಿಗೆ ಸಿಕ್ಕಲ್ಲಿ, ಅವರಲ್ಲಿ ಆತ್ಮವಿಶ್ವಾಸ, ಭದ್ರತೆಯ ಭಾವನೆ ಬೆಳೆಯುತ್ತದೆ.

ಜೀವನ ಹೇಗೆ ಎಂಜಾಯ್ ಮಾಡಬೇಕೆಂದು ಹೇಳಿಕೊಟ್ಟ ಸುಧಾ ಮೂರ್ತಿ

ಮಕ್ಕಳಿಗೆ ಮನೆಯಲ್ಲಿ ನಿಯಮ ಪಾಲಿಸಲು ಸೂಚಿಸಿ. ಇದರಿಂದ ಅವರು ಸ್ವಯಂ ಶಿಸ್ತು ಕಲಿಯುತ್ತಾರೆ. ಅದು ಏಕೆ ಅಗತ್ಯ ಎಂಬುದು ಅವರಿಗೆ ತಿಳಿಸಿ. ಮಕ್ಕಳ ಒಳ್ಳೆ ಕೆಲಸವನ್ನು ಪ್ರೋತ್ಸಾಹಿಸಿ. ಹೆತ್ತವರನ್ನು ನೋಡಿ ಮಕ್ಕಳು ಕಲಿಯುವ ಕಾರಣ, ನೀವು ಮಕ್ಕಳಿಗೆ ಉದಾಹರಣೆಯಾಗ್ಬೇಕು. ನಿಮ್ಮಲ್ಲಿ ಪ್ರಾಮಾಣಿಕತೆ, ಪರಿಶ್ರಮವಿದ್ದರೆ ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ.

Latest Videos
Follow Us:
Download App:
  • android
  • ios