Asianet Suvarna News Asianet Suvarna News
breaking news image

ಮುಸ್ಲಿಂ ಗೆಳೆಯನ ಮದ್ವೆಯಾದ ಸೊನಾಕ್ಷಿ ಸಿನ್ಹಾ ಅಪ್ಪನಿಗಿತ್ತು ಅಫೇರ್, ಗೊತ್ತಿದ್ದು ಅಮ್ಮ ಸುಮ್ಮನಿದ್ದಿದ್ದೇಕೆ?

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ತನ್ನ ಬಹುಕಾಲದ ಮುಸ್ಲಿಂ ಗೆಳೆಯ ಜಹೀರ್ ಇಕ್ಬಾಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ಮಗಳ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಸೋನಾಕ್ಷಿ ತಂದೆ ಶತ್ರುಘ್ನಾ ಸಿನ್ಹಾ ಕೊನೆಗೆ ಒಪ್ಪಿಕೊಂಡು ನವಜೋಡಿಗೆ ಹಾರೈಸಿ ಗಮನ ಸೆಳೆದಿದ್ದಾರೆ. ಆದರೆ  ಶತ್ರುಘ್ನಾ ಸಿನ್ಹಾ ಅವರ ಲವ್ ಅಫೇರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ

Bollywood actor Sonakshi Sinha father Shatrughan Sinha had affair with rina roy kvn
Author
First Published Jun 24, 2024, 2:19 PM IST

ಸಿನಿಮಾ ಲೋಕವೆಂದರೆ ಒಬ್ಬರನ್ನು ಮದ್ವೆಯಾಗೋದು, ಮತ್ತೊಬ್ಬರೊಂದಿಗೆ ಅಫೇರ್ ಇಟ್ಟು ಕೊಳ್ಳೋದು ಕಾಮನ್. ಆದರೆ, ಹೆಂಡ್ತಿ ಎನಿಸಿಕೊಂಡವಳು ಸಹಿಸಿಕೊಳ್ಳಬೇಕು ಅಂತೇನೂ ಇಲ್ಲ. ಆದರೆ, ನಿನ್ನೆ ಮುಸ್ಲಿಂ ಯುವಕನನ್ನು ವರಿಸಿದ ಬಾಲಿವುಡ್ ಬೆಡಗಿ ಸೊನಾಕ್ಷಿ ಸಿನ್ಹಾ ಅಮ್ಮ ಸಹಿಸಿಕೊಂಡಿದ್ದರು. 

ಬಾಲಿವುಡ್ ಬೆಡಗಿ ಸೊನಾಕ್ಷಿ ಸಿನ್ಙಾ (Bollywood Actress Sonakshi Sinha) ತಮ್ಮ ಆಯ್ಕೆಯ ಮುಸ್ಲಿಂ ಹುಡುಗನನ್ನು ವರಿಸಿದ್ದು ಇದೀಗ ಸಿನಿ ವಲಯದ ಬಿಗ್ ನ್ಯೂಸ್. ತಾನು ಮೆಚ್ಚಿದ ಹುಡುಗನೊಂದಿಗೆ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಡಿ ಮದುವೆಯಾದ ಸೊನಾಕ್ಷಿ, ನಂತರ ಸಿನಿ ಸ್ನೇಹಿತರಿಗೆ ರಿಸೆಪ್ಷನ್ ಮೂಲಕ ಬಿಗ್ ಪಾರ್ಟಿ ಕೊಟ್ಟರು. ತನ್ನ ಆಯ್ಕೆಯ ಹುಡುಗನನ್ನು ವರಿಸಿದ ಮಗಳ ಬಗ್ಗೆ ಮೊದ ಮೊದಲು ಮೌನವಾಗಿದ್ದ, ತೃಣಮೂಲ ಕಾಂಗ್ರೆಸ್ ಎಂಪಿ, ಬಾಲಿವುಡ್ ಹಿರಿಯ ನಟ ಶತ್ರುಘ್ನಾ ಸಿನ್ಹಾ, ಮದುವೆಯಲ್ಲಿ ಖುಷ್ ಖುಷಿಯಾಗಿರುವಂತೆ ಕಂಡರು. 

ಮಗಳ ಮದ್ವೆ ಬಗ್ಗೆ ಏನು ಅನಿಸ್ತಾ ಇದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೊನಾಕ್ಷಿ ಅಪ್ಪ, 'ಸಹಜವಾಗಿಯೇ ಮಗಳ ಮದ್ವೆ ಎಂದರೆ ಅಪ್ಪಂದಿರಿಗೆ ಸಂಭ್ರಮವಿರುತ್ತೆ. ನಾನೂ 44 ವರ್ಷದ ಹಿಂದೆ ನನ್ನ ಮನಸ್ಸಿಗೆ ಸರಿ ಅನಿಸಿದ ಯಶಸ್ವಿ, ಸೌಂದರ್ಯದ ರಾಣಿ, ಪ್ರತಿಭಾನ್ವಿತ ಪೂನಂಳನ್ನು ವರಿಸಿದ್ದೆ. ಇದೀಗ ಮಗಳ ತನ್ನಿಚ್ಛೆಯಂತೆ, ಇಷ್ಟಪಟ್ಟವನನ್ನು ಮದ್ವೆಯಾಗುತ್ತಿರುವುದಕ್ಕೆ ಸಂಭ್ರಮವಿದೆ,' ಎಂದು ಉತ್ತರಿಸಿದ್ದಾರೆ. 

ಮದುವೆ ಸೀರೆಗೆ ಖರ್ಚಿಲ್ಲ; ಅಮ್ಮನ ಸೀರೆಯನ್ನೇ ಉಟ್ಟ ಸೋನಾಕ್ಷಿ, ಆದರೆ ರಿಸೆಪ್ಶನ್ ಸೀರೆ ಮಾತ್ರ ಸಖತ್ ಕಾಸ್ಟ್ಲಿ

ಬಾಲಿವುಡ್‌ನಲ್ಲಿ ಹೀರೋಗಿಂತ ಖಳನಾಯಕನಾಗಿಯೇ ಮೆರೆದ ಶತ್ರುಘ್ನಾ ತಮ್ಮದೇ ಛಾಪು ಮೂಡಿಸಿದವರು. ನಂತರ ರಾಜಕಾರಣಕ್ಕೆ ಕಾಲಿಟ್ಟು, ಅಲ್ಲಿಯೂ ತಾವೇನು ಅಂತ ಪ್ರೂವ್ ಮಾಡಿದ್ದಾರೆ. ಡಿಸೆಂಬರ್ 9, 1945 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಶತ್ರುಘ್ನ ಸಿನ್ಹಾ ಅವರ ಗಡಸು ಮುಖದಿಂದಾಗಿಯೇ ಹೀರೋ ಆಗಲು ಸಾಧ್ಯವೇ ಎಂದು ಅವರೂ ಸೇರಿ ಎಲ್ಲರೂ ಅನುಮಾನಿಸಿದ್ದರು. ಆದರೆ, ಕಲಾವಿದನಿಗೆ ಅಗತ್ಯವಿರೋ ನಟನೆ ಗೊತ್ತಿತ್ತು. ತಮ್ಮ ಪ್ರತಿಭೆಯಿಂದಾನೇ ಉದ್ಯಮದಲ್ಲಿ ಹೆಸರು ಮಾಡಿದರು.

ಶತ್ರುಘ್ನ ರಿಯಲ್ ಲವ್ ಲೈಫ್:

ಶತ್ರುಘ್ನ ಸಿನ್ಹಾ ಅವರ ಪ್ರೇಮ ಜೀವನವೇ (Love Life) ಸಕತ್ತೂ ಇಂಟರೆಸ್ಟಿಂಗ್ ಆಗಿದೆ. ನಟಿ ರೀನಾ ರಾಯ್ (Reena Roy)ಅವರೊಂದಿಗೆ ಸುಮಾರು 7 ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಹೀಗೆ ಒಬ್ಬಳೊಂದಿಗೆ ರಿಲೇಶನ್‌ಶಿಪ್‌ನಲ್ಲಿರುವಾಗಲೇ ಪೂನಂ ಜೊತೆ ಸಪ್ತಪದಿ ತುಳಿದಿದ್ದು, ಈ ಖಳನಾಯಕನ ವಿಶೇಷ.  ಹಾಗಂಥ ಅವರೇನೂ ರೀನಾ ರಾಯ್ ಅವರನ್ನೇನು ಬಿಟ್ಟಿರಲಿಲ್ಲ! ಸದಾ ಈ ರೀನಾಗಾಗಿಯೇ ಶತ್ರುಘ್ನ ಹೃದಯ ಮಿಡಿಯುತ್ತಂತೆ. 

ಗಂಡ ಹೆಂಡ್ತಿಯಾದ ಸೋನಾಕ್ಷಿ-ಜಹೀರ್ ಇಕ್ಬಾಲ್; ಜೂನ್ 23ರಂದೇ ಮದ್ವೆಯಾಗಿದ್ದೇಕೆ? ರಟ್ಟಾಯ್ತು ಇಬ್ಬರ ಗುಟ್ಟು!

ಪತ್ನಿಗೇನೂ ರೀನಾ ರಾಯ್ ಜೊತೆ ಪತಿದೇವ ಸಂಬಂಧ ಇಟ್ಟುಕೊಂಡಿದ್ದು ಒಪ್ಪಿತ ಅಂದು ಕೊಂಡರದು ತಪ್ಪು. ಪತ್ನಿಯನ್ನು ವಂಚಿಸಿ, ಆಗಾಗ ಗೆಳತಿಯನ್ನು ಭೇಟಿಯಾಗಲು ಕದ್ದುಮುಚ್ಚಿ ಹೋಗುತ್ತಿದ್ದರಂತೆ ಈ ಸೊನಾಕ್ಷಿ ಅಪ್ಪ. ರೀನಾ ರಾಯ್ ಮತ್ತು ಶತ್ರುಘ್ನ ಸಿನ್ಹಾ ನಡುವಿನ ಪ್ರೇಮಕಥೆ ಹಲವು ವರ್ಷಗಳ ಕಾಲ ಎಗ್ಗಿಲ್ಲದೇ ನಡೆದಿತ್ತು. ಅವರ ಆಗಿನ ಕಳ್ಳ ಸಂಬಂಧ ಮಾಧ್ಯಮಗಳು ಮತ್ತು ನಿಯತಕಾಲಿಕೆಗಳಲ್ಲಿ ಈಗಲೂ ಸುದ್ದಿ ಆಗುತ್ತವೆ. 

ರೀನಾಗೆ ಮದ್ವೆ ಪ್ರಾಮೀಸ್ ಮುರಿದ ಶತ್ರುಘ್ನ:

ಗೆಳತಿ ರೀನಾ ರಾಯ್‌ಗೆ ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದರು. ಆದರೆ, ಅವಳು ಕೆಲಸದ ಮೇಲೆ ಲಂಡನ್‌ಗೆ ಹೋದಾಗ ಇವರು ಪೂನಮ್ ಕೈ ಹಿಡಿದಿದ್ದರು. ಆದರೆ, ರೀನಾ ರಾಯ್ ಕೈ ಬಿಟ್ಟಿರಲಿಲ್ಲ. ಇದು ಪೂನಂಗೆ ಗೊತ್ತಿತ್ತು. ಆದರೆ, ಯಾವುತ್ತೂ ಬಹಿರಂಗವಾಗಿ ವಿರೋಧಿಸಲೇ ಇಲ್ವಂತೆ. ಶತ್ರುಘ್ನ ಅವರು ರೀನಾ ಅವರೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದನ್ನು ಖುದ್ದು ಶತ್ರುಘ್ನ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು. ಆದರೆ, ಅದಕ್ಕೆ ಪಶ್ಚತ್ತಾಪ ಪಟ್ಟಂತೆ ಕಾಣಿಸುತ್ತಿರಲಿಲ್ಲ. ಮದುವೆ ನಂತರ ನಾನು ಅವಳಿಂದ ದೂರವಾಗಿದ್ದೇನೆ ಎಂದು ಜನರು ಭಾವಿಸುತ್ತಿದ್ದರು. ಆದರೆ ರೀನಾಳನ್ನು ಮರೆಯುವ ಬದಲು ನಾನು ಇನ್ನೂ ಹತ್ತಿರವಾದೆ ಎಂದಿದ್ದಾರೆ.

ಏನೋ ಒಟ್ಟಿನಲ್ಲಿ ಈ ಸಿನಿ ಮಂದಿಗೆ ಮದ್ವೆ, ಬಾಂಧವ್ಯ ಅಂದ್ರೆ ಅರ್ಥವೇ ಬೇರೆ ಅನ್ಸುತ್ತೆ. ಈ ಬಣ್ಣದ ಜಗತ್ತಿನಲ್ಲಿ ಎಲ್ಲವೂ ಒಪ್ಪಿತ ಸಂಬಂಧವೇ. 

Latest Videos
Follow Us:
Download App:
  • android
  • ios