Asianet Suvarna News Asianet Suvarna News

ಬೇರೆಯವರು ಏನು ಮಾಡುತ್ತಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ; ಯುವಜನತೆಗೆ ನಟ ಶಾರುಖ್ ಟಿಪ್ಸ್

ಬೇರೆಯವರನ್ನು ತುಳಿಯುವುದು ಹೇಗೆ ಎಂಬ ಬಗ್ಗೆ ಯಾವತ್ತೂ ಯೋಚಿಸಬೇಡಿ. ನೆಗೆಟಿವ್ ಥಿಂಕಿಂಗ್ ಬೇಡ, ಯಾವತ್ತೂ ಎಲ್ಲರ ವಿಷಯದಲ್ಲಿ, ಜೀವನದ ಸಂಗತಿಗಳಲ್ಲಿ ಪೊಸಿಟಿವ್ ಆಗಿರಿ. ನೀವು ಒಳ್ಳೆಯ ಸಂಗತಿಗಳನ್ನು ಯೋಚಿಸುವ ಮೂಲಕ ಯಾವತ್ತೂ ಯಂಗ್ ಆಗಿ ಕಾಣುತ್ತೀರಿ, ನಿಮ್ಮ ಕಣ್ಣುಗಳಲ್ಲಿ ತೇಜಸ್ಸು ಹೊಮ್ಮುತ್ತಿರುತ್ತದೆ. 

Bollywood actor Shah Rukh Khan says that to be positive always to youth srb
Author
First Published Nov 29, 2023, 12:05 PM IST

ಬಾಲಿವುಡ್ ನಟ ಶಾರುಖ್ ಖಾನ್ ಅವರು ಯುವಜನತೆಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶಾರುಖ್ ಖಾನ್, 'ಯುವಜನತೆ ಹಲವು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ನಿಮ್ಮ ಸುತ್ತಲಿನವರು ಏನು ಮಾಡುತ್ತಿದ್ದಾರೆ, ಯಾವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ. ಆ ಮೂಲಕ ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ವೇಸ್ಟ್ ಮಾಡಬೇಡಿ. ಅವರವರ ಕೆಲಸ ಅವರು ಮಾಡುತ್ತಾರೆ. ನೀವು ಆಯ್ದುಕೊಂಡ ಕೆಲಸವನ್ನು ಚೆನ್ನಾಗಿ ಮಾಡುವತ್ತ ಮಾತ್ರ ನೀವು ಗಮನಕೊಡಿ. ಯಾರೋ ಏನೋ ಹೇಳಿದರೆಂದು ನಿಮ್ಮ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿಲ್ಲ. 

ಬೇರೆಯವರನ್ನು ತುಳಿಯುವುದು ಹೇಗೆ ಎಂಬ ಬಗ್ಗೆ ಯಾವತ್ತೂ ಯೋಚಿಸಬೇಡಿ. ನೆಗೆಟಿವ್ ಥಿಂಕಿಂಗ್ ಬೇಡ, ಯಾವತ್ತೂ ಎಲ್ಲರ ವಿಷಯದಲ್ಲಿ, ಜೀವನದ ಸಂಗತಿಗಳಲ್ಲಿ ಪೊಸಿಟಿವ್ ಆಗಿರಿ. ನೀವು ಒಳ್ಳೆಯ ಸಂಗತಿಗಳನ್ನು ಯೋಚಿಸುವ ಮೂಲಕ ಯಾವತ್ತೂ ಯಂಗ್ ಆಗಿ ಕಾಣುತ್ತೀರಿ, ನಿಮ್ಮ ಕಣ್ಣುಗಳಲ್ಲಿ ತೇಜಸ್ಸು ಹೊಮ್ಮುತ್ತಿರುತ್ತದೆ. ಈ ರೀತಿ ನೀವು ಇರಲು ಆರಂಭಿಸಿದರೆ ನಿಮ್ಮ ಕೆಲಸದಲ್ಲಿ ನೀವು ಬೇಗ ಯಶಸ್ಸು ಸಾಧಿಸುತ್ತೀರಿ. ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ನಂಬಿ ಅದರಂತೆ ಮುಂದುವರಿಯಿರಿ. ಲೈಫ್ ಬಗ್ಗೆ ಕೃತಜ್ಞರಾಗಿರಿ' ಎಂದಿದ್ದಾರೆ ನಟ ಶಾರುಖ್ ಖಾನ್. 

ಬಿಗ್‌ಬಾಸ್‌ ಮನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ; ನವೆಂಬರ್ 14 ಎಂದು ಕಿರುಚಿದ ಅವಿನಾಶ್ ಶೆಟ್ಟಿಗೆ ಮುಖಭಂಗ!

ಬಾಲಿವುಡ್ ನಟ ಶಾರುಖ್ ಖಾನ್ ಅವರು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಕಷ್ಟಪಟ್ಟು ಬೆಳೆದುಬಂದವರು. ಅವರು ಜೀರೋದಿಂದ ಹೀರೋ ಆದವರು. ಇತ್ತೀಚೆಗಂತೂ ಶಾರುಖ್ ಖಾನ್ ನಟಿಸಿದ ಪಠಾನ್, ಜವಾನ್ ಚಿತ್ರಗಳು ಸೂಪರ್ ಹಿಟ್ ದಾಖಲಿಸುವ ಮೂಲಕ ಅವರು ಭಾರತದ ಟಾಪ್ ಸ್ಟಾರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಾರುಖ್ ರೆಡ್ ಚಿಲ್ಲೀಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ. ಗೌರಿ ಯನ್ನು ಮದುವೆಯಾಗಿರುವ ಶಾರುಖ್ ಖಾನ್ ಸುಖ ಸಂಸಾರ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಬಾದ್‌ ಶಾ ನಟ ಶಾರುಖ್ ಖಾನ್ ಅವರು ಯುವ ಜನತೆಗೆ ನೀಡಿರುವ ಸಂದೇಶ ಸೂಪರ್ ಆಗಿದೆ ಎನ್ನಬಹುದು. 

ಬೆಳಗಾದರೆ ಭಯವಾಗುತ್ತಿತ್ತು, ದಿನವನ್ನು ಎದುರಿಸಬೇಕಲ್ಲ ಎಂದು ಚಿಂತಿಸುತ್ತಿದ್ದೆ; ದೀಪಿಕಾ ಪಡುಕೋಣೆ

ನಟ ಶಾರುಖ್ ಖಾನ್ ಹಲವಾರು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಅವರು ಪ್ರಶ್ನೆ ಬಂದಾಗ ಉತ್ತರಿಸುವ ಮೂಲಕ ಜಗತ್ತಿಗೆ ಹಲವಾರು ಸಂದೇಶಗಳನ್ನು ನೀಡುತ್ತಲೇ ಇರುತ್ತಾರೆ. ಜೀವನವನ್ನು ಹಗುರವಾಗಿ, ಆದರೆ ಸಾಧನೆಗೆ ಯೋಗ್ಯವಾಗಿರುವಂತೆ, ಆರೋಗ್ಯಕರವಾಗಿ ಇಟ್ಟುಕೊಳ್ಳಿ, ಅದು ನಿಮಗೆ ಎಲ್ಲಾ ರೀತಿಯಲ್ಲಿ ಸಹಕರಿಸಿಕೊಳ್ಳುವಂತೆ  ಮಾಡಿಕೊಳ್ಳಿ ಎಂಬುದನ್ನು ನಟ ಶಾರುಖ್ ಹೇಳುತ್ತಲೇ ಇರುತ್ತಾರೆ. 

Follow Us:
Download App:
  • android
  • ios