ಮಗಳೇ ಎಂದು ಕರೆದಿದ್ದವಳನ್ನೇ ಮದುವೆಯಾಗಿ ಮಕ್ಕಳನ್ನು ಕೊಟ್ಟ ಸೈಫ್ ಅಲಿ ಖಾನ್!
2004ರಲ್ಲಿ ಸೈಫ್ ಅಲಿ ಖಾನ್ ಅಮೃತಾಗೆ ಡಿವೋರ್ಸ್ ಕೊಟ್ಟ ಬಳಿಕ ಕರೀನಾ-ಸೈಫ್ ಡೇಟಿಂಗ್ ಹಾಗು ಓಡಾಟ ಓಪನ್ ಆಗಿಯೇ ನಡೆಯಿತು. ಕೊನೆಗೂ 2012ರಲ್ಲಿ ಸೈಫ್ ಹಾಗು ಕರೀನಾ ಮದುವೆಯಾದರು.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಗಂಡ-ಹೆಂಡತಿ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಕರೀನಾರನ್ನು ಮದುವೆ ಆಗುವುದಕ್ಕೂ ಮೊದಲು ನಟ ಸೈಫ್ ಅಲಿ ಖಾನ್ ಅಮೃತಾ ಸಿಂಗ್ (Amrita Singh)ಅವರನ್ನು ಮದುವೆಯಾಗಿದ್ದರು. ಸೈಫ್-ಅಮೃತಾ ಜೋಡಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳೂ ಸಹ ಇದ್ದಾರೆ. 1991ರಲ್ಲಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದ ಸೈಫ್ ಅಲಿ ಖಾನ್ 2004ರಲ್ಲಿ ಅವರಿಗೆ ಡಿವೋರ್ಸ್ ನೀಡಿದ್ದಾರೆ. ಅಷ್ಟರಲ್ಲಾಗಲೇ ಸೈಫ್ ಕರೀನಾ ಮೇಲೆ ಕಣ್ಣು ಹಾಕಿ ಆಗಿತ್ತು.
ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಜೋಡಿಯ ಲವ್ ಕಹಾನಿ ಭಾರೀ ವಿಚಿತ್ರ ಹಾಗೂ ವಿಭಿನ್ನವಾಗಿದೆ. ಅಮೃತಾ ಸಿಂಗ್ ಜತೆ ಮದುವೆ ಮಾಡಿಕೊಂಡ ವೇಳೆ ತಮ್ಮಿಬ್ಬರ ಮದುವೆಗೆ ಬಂದಿದ್ದ ಕರೀನಾರನ್ನು ಸೈಫ್ 'ಮಗಳೇ, ಮಗಳೇ..' ಎಂದೇ ಕರೆದಿದ್ದರಂತೆ. ಆದರೆ, ಯಾವಾಗ ಆಕೆಯ ಜೊತೆ ಶೂಟಿಂಗ್‌ನಲ್ಲಿ ಸಹನಟರಾಗಿ ಸೈಫ್ ನಟಿಸಲು ಶುರು ಮಾಡಿದರೋ, ಆಗ ಕರೀನಾ ಮೇಲೆ ಅವರಿಗೆ ಲವ್ ಶುರುವಾಗಿದೆ. ಲವ್ ಅದೆಷ್ಟು ಸ್ಟ್ರಾಂಗ್ ಆಗಿ ಮುಂದುವರೆಯಿತು ಎಂದರೆ, ಕೊನೆಗೆ ಪತ್ನಿ ಅಮೃತಾಗೆ ಡಿವೋರ್ಸ್ ಕೊಟ್ಟುಬಿಟ್ಟರು ಸೈಫ್ ಅಲಿಖಾನ್.
ಮಗ ಹೈದರಾಬಾದ್‌ನಲ್ಲಿ, ತಾಯಿ ಅಮೆರಿಕಾದಲ್ಲಿ; ನಾಗ ಚೈತನ್ಯ ತಾಯಿ ಇಲ್ಲದ ತಬ್ಬಲಿ!
2004ರಲ್ಲಿ ಸೈಫ್ ಅಲಿ ಖಾನ್ ಅಮೃತಾಗೆ ಡಿವೋರ್ಸ್ ಕೊಟ್ಟ ಬಳಿಕ ಕರೀನಾ-ಸೈಫ್ ಡೇಟಿಂಗ್ ಹಾಗು ಓಡಾಟ ಓಪನ್ ಆಗಿಯೇ ನಡೆಯಿತು. ಕೊನೆಗೂ 2012ರಲ್ಲಿ ಸೈಫ್ ಹಾಗು ಕರೀನಾ ಮದುವೆಯಾದರು. ಬಳಿಕ ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದ್ದು ಅವರಿಗೆ ಕ್ರಮವಾಗಿ ತೈಮೂರ್ ಅಲಿ ಖಾನ್ ಹಾಗೂ ಜೇಹ್ ಅಲಿ ಖಾನ್ ಎಂದು ಹೆಸರನ್ನು ಇಡಲಾಗಿದೆ. ಸದ್ಯಕ್ಕೆ ಸೈಫ್ ಹಾಗೂ ಕರೀನಾ ಕಪೂರ್ ಜೋಡಿಹಕ್ಕಿಗಳಂತೆ ಅನ್ಯೋನ್ಯವಾಗಿದ್ದಾರೆ. ಅಮೃತಾ ಸಿಂಗ್ ತಮ್ಮ ಇಬ್ಬರು ಮಕ್ಕಳಾದ ಸಾರಾ ಹಾಗೂ ಇಬ್ರಾಹಿಂ ಜತೆ ವಾಸವಾಗಿದ್ದಾರೆ.
ಓಂ ಬಿಡುಗಡೆಗೆ ಪೊಲೀಸ್ ಇಲಾಖೆಯೇ ಅಡ್ಡಗಾಲು, ಡಾ ರಾಜ್‌ಕುಮಾರ್ ಮಾಡಿದ್ದೇನು?
ಒಟ್ಟಿನಲ್ಲಿ, ತಮ್ಮ ಮದುವೆಗೇ ಬಂದಿದ್ದ ಕರೀನಾಗೆ ಮಗಳೇ ಎಂದು ಕರೆದು, ಬಳಿಕ ಅವಳನ್ನೇ ಮದುವೆಯಾಗಿ ಅವಳ ಕೈಗೆ ನಟ ಸೈಫ್ ಅಲಿ ಖಾನ್ ಎರಡು ಮಕ್ಕಳನ್ನು ಕೊಟ್ಟಿದ್ದಾನೆ ಎಂದು ಬಹಳಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಆದರೆ, ಅವರಿಬ್ಬರೂ ಸದ್ಯಕ್ಕೆ ಮೇಡ್ ಫಾರ್ ಈಚ್ ಅದರ್' ಎಂಬಂತೆ ಲೈಫ್ ಲೀಡ್ ಮಾಡುತ್ತಿದ್ದಾರೆ. ತಮ್ಮ ಇಬ್ಬರು ಗಂಡು ಮಕ್ಕಳನ್ನು ಸಂಭಾಳಿಸುವುದು ನನಗೆ ತುಂಬಾ ಕಷ್ಟವಾಗಿದೆ ಎಂದು ನಟಿ ಕರೀನಾ ಕಪೂರ್ ಆಗಾಗ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ.
ಮುದ್ದಿಸಿದೆ, ಚುಂಬಿಸಿದೆ, ಅದರಲ್ಲೇನು ತಪ್ಪು? ಅದೊಂದು ಕೆಟ್ಟ ಅನುಭವ ತಲೆ ಕೆಡಿಸುತ್ತಿದೆ!