ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ಓಂ' ಚಿತ್ರಕ್ಕೆ ಮಹತ್ವದ ಸ್ಥಾನವಿದೆ. 1995ರಲ್ಲಿ ತೆರೆಗೆ ಬಂದಿದ್ದ, ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ಶಿವರಾಜ್‌ಕುಮಾರ್-ಪ್ರೇಮಾ ನಟನೆಯ 'ಓಂ' ಚಿತ್ರವು ಹಣ ಗಳಿಕೆ ಮಾತ್ರವಲ್ಲ..

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ಓಂ' ಚಿತ್ರಕ್ಕೆ ಮಹತ್ವದ ಸ್ಥಾನವಿದೆ. 1995ರಲ್ಲಿ ತೆರೆಗೆ ಬಂದಿದ್ದ, ರಿಯಲ್ ಸ್ಟಾರ್ ಉಪೇಂದ್ರ (Upendra) ನಿರ್ದೇಶನ ಹಾಗೂ ಶಿವರಾಜ್‌ಕುಮಾರ್-ಪ್ರೇಮಾ ನಟನೆಯ 'ಓಂ (Om) ಚಿತ್ರವು ಹಣ ಗಳಿಕೆ ಮಾತ್ರವಲ್ಲ, ವಿಭಿನ್ನ ಸಿನಿಮಾ ಎಂದು ಗುರುತಿಸಿಕೊಂಡು ಅಂದು ಹೊಸ ಇತಿಹಾಸ ಸೃಷ್ಟಿಸಿತ್ತು. ಆದರೆ, ಆ ಸಿನಿಮಾ ಬಿಡುಗಡೆ ವೇಳೆಯಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿತ್ತು. ಓಂ ಚಿತ್ರವನ್ನು ರಿಲೀಸ್‌ ಮಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಓಂ ಚಿತ್ರದ ನಿರ್ಮಾಪಕರಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ (Dr Rajkumar) ಅವರು ಕಂಗಾಲಾಗಿ ಕುಳಿತಿದ್ದರು. 

ಹಾಗಿದ್ದರೆ ಅಂಥ ಬಿಕ್ಕಟನ್ನು ಪರಿಹರಿಸಿದ್ದು ಯಾರು? ಬೇರೆ ಯಾರೂ ಅಲ್ಲ, ಸ್ವತಃ ಡಾ ರಾಜ್‌ಕುಮಾರ್. ಹಲವಾರು ನಿಜವಾದ ರೌಡಿಗಳೇ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಸಂಗತಿ ಪೊಲೀಸ್ ಇಲಾಖೆಗೆ ಗೊತ್ತಾಗಿತ್ತು. ಈ ಸಿನಿಮಾ ಬಿಡುಗಡೆಯಿಂದ ಸಮಾಜದಲ್ಲಿ ದೊಡ್ಡ ಅನಾಹುತವಾಗುತ್ತೆ. ಇಂಥ ಸಿನಿಮಾ ಬಿಡುಗಡೆ ಮೂಲಕ ನಾವು ಸಮಾಜಕ್ಕೆ ಎಂತಹ ಸಂದೇಶ ಕೊಡುತ್ತೇವೆ ಎಂಬ ಬಗ್ಗೆ ಸ್ವತಃ ಪೊಲೀಸ್ ಇಲಾಖೆಯೂ ಆತಂಕಗೊಂಡಿತ್ತು. ಈ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ತರಬೇಕು ಎಂದು ಪೊಲೀಸ್ ಇಲಾಖೆ ನಿರ್ಧರಿಸಿ ಕಾರ್ಯಪ್ರವೃತ್ತವಾಗಿತ್ತು. 

ಮುದ್ದಿಸಿದೆ, ಚುಂಬಿಸಿದೆ, ಅದರಲ್ಲೇನು ತಪ್ಪು? ಅದೊಂದು ಕೆಟ್ಟ ಅನುಭವ ತಲೆ ಕೆಡಿಸುತ್ತಿದೆ!

ಅಂಥ ಸಂದರ್ಭದಲ್ಲಿ ತಮ್ಮ ಹಿರಿಯ ಪುತ್ರ ಶಿವರಾಜ್‌ಕುಮಾರ್ (Shiva Rajkumar) ನಟನೆಯ, ಹಾಗೂ ತಮ್ಮ ಪತ್ನಿ ನಿರ್ಮಾಣದ 'ಓಂ' ಚಿತ್ರದ ರಿಲೀಸ್ ಪರವಾಗಿ ನಿಂತವರು ಡಾ ರಾಜ್‌ಕುಮಾರ್. ಆ ವೇಳೆ ಪೊಲೀಸ್ ಕಮೀಷನರ್ ಹಾಗೂ ಫಿಲ್ಮ್ ಛೇಂಬರ್‌ಗೆ ಪತ್ರ ಬರೆದಿದ್ದರು ಡಾ ರಾಜ್‌ಕುಮಾರ್. 'ಈ ಸಿನಿಮಾ ಬಿಡುಗಡೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಆಗಬಾರದು. ಕಾರಣ, ಈ ಸಿನಿಮಾದ ಕ್ಲೈಮ್ಯಾಕ್ಸ್ ಇರುವುದೇ ಹಾಗೆ. ಈ ಸಿನಿಮಾವನ್ನು ಸ್ವತಃ ರೌಡಿಗಳೇ ನೋಡಿದರೆ ಅವರಲ್ಲಿ ಬಹಳಷ್ಟು ಜನರು ಬದಲಾಗುತ್ತಾರೆ. 

ಏಕಾಏಕಿ ತುಟಿ ಕಚ್ಚಿ ಚುಂಬಿಸಿಬಿಟ್ಟ; ವಿಶ್ವಜಿತ್ ಚುಂಬನಕ್ಕೆ ರೇಖಾ ಕೌಂಟರ್ ಹೇಗಿತ್ತು?

ಈ ಕಾರಣಕ್ಕೆ ಓಂ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು. ಆ ಮೂಲಕ ಸಮಾಜದಲ್ಲಿ ಹಾಗೂ ರೌಡಿಗಳಲ್ಲಿ ಆಗಬಹುದಾದ ಒಳ್ಳೆಯ ಬದಲಾವಣೆಗೆ ಕಾರಣರಾಗಬೇಕು' ಎಂದು ಡಾ ರಾಜ್‌ ಅವರು ಸುದೀರ್ಘ ಪತ್ರವೊಂದನ್ನು ಬರೆದಿದ್ದರು ಎನ್ನಲಾಗಿದೆ. ಆ ಬಳಿಕವೇ ಓಂ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಲಾಯಿತು. ರಿಲೀಸ್ ಬಳಿಕ ಓಂ ಸಿನಿಮಾ ಮಾಡಿದ ಕಲೆಕ್ಷನ್ ಹಾಗು ಕಮಾಲ್ ಬಗ್ಗೆ ಕನ್ನಡಿಗರಿಗಂತೂ ಯಾರೂ ಹೇಳಬೇಕಾಗಿಯೇ ಇಲ್ಲ. ಇಂದಿಗೂ ಕೂಡ ಓಂ ಚಿತ್ರದ ಹಕ್ಕು ಡಾ ರಾಜ್‌ಕುಮಾರ್ ಫ್ಯಾಮಿಲಿ ಬಳಿಯೇ ಇದ್ದು, ಅದನ್ನು ಅದೆಷ್ಟು ಬಾರಿ ರೀ-ರಿಲೀಸ್ ಮಾಡಿದ್ದಾರೋ ಏನೋ! 

ಮಳೆಗಾಲದ ನೈಟ್‌ ಬೆಚ್ಚಗಿರಿಸಲು ಅಡಲ್ಟ್‌ ಸಿನಿಮಾ ನಟಿ ಸನ್ನಿ ಲಿಯೋನ್ ಮಾದಕ ಫೋಟೋಸ್!

ಪ್ರತಿ ಬಾರಿ ಬಿಡುಗಡೆಯಾದಾಗಲೂ ಸಿನಿಪ್ರೇಕ್ಷಕರು ಹೊಸ ಚಿತ್ರದಂತೆ ನೋಡಿ ಚಿತ್ರವನ್ನು ಮತ್ತೆ ಮತ್ತೆ ಗೆಲ್ಲಿಸುತ್ತಿದ್ದಾರೆ. ಕನ್ನಡದ ಮಟ್ಟಿಗೆ ಓಂ ಸಿನಿಮಾ ಸೃಷ್ಟಿಸಿದ ಕ್ರೇಜ್‌ ಬಹಳ ದೊಡ್ಡದು. ಇಂದಿಗೂ ಕೂಡ ಉಪೇಂದ್ರ ನಿರ್ದೇಶನದ ಓಂ ಚಿತ್ರವು ಮಾಸ್ಟರ್ ಫೀಸ್ ಎಂಬಂತೆ ದಾಖಲೆ ಬರೆದು ಕುಳಿತಿದೆ.