Asianet Suvarna News Asianet Suvarna News

ಮುದ್ದಿಸಿದೆ, ಚುಂಬಿಸಿದೆ, ಅದರಲ್ಲೇನು ತಪ್ಪು? ಅದೊಂದು ಕೆಟ್ಟ ಅನುಭವ ತಲೆ ಕೆಡಿಸುತ್ತಿದೆ!

ಮಗು ಯಾರದ್ದೇ ಆದರೂ ಪ್ರೀತಿ ತೋರಿಸಬಹುದು, ಮುದ್ದಾಡಬಹುದು ಎಂದು ನಾನು ಅಂದುಕೊಂಡಿದ್ದೆ. ಆದರೆ, ನನ್ನ ತಿಳುವಳಿಕೆ ತಪ್ಪು ಎಂದು ಆಕೆ ಹೇಳಿದಾಗ ನಾನು ಅಕ್ಷರಶಃ ನಡುಗಿಹೋದೆ. ನನ್ನ ಭಾವನೆ ಮತ್ತು ನಡೆ ತಪ್ಪೋ ಅಥವಾ ಆ ಮಗುವಿನ..

I am suffering from guilty feeling for that Baby incident says malayalam actress Navya Nair srb
Author
First Published May 26, 2024, 1:54 PM IST

ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಗಜ' ಚಿತ್ರದಲ್ಲಿ ನಟಿಸಿದ ನಟಿ ನವ್ಯಾ ನಾಯರ್‌ (Navya Nair) ತಾವಿನ್ನೂ ಆ ನೋವಿನಿಂದ ಹೊರಬಂದಿಲ್ಲ ಎಂದಿದ್ದಾರೆ. ಮಲಯಾಳಂ ಮೂಲದ ನಟಿ ನವ್ಯಾ ನಾಯರ್, ಮಲಯಾಳಂ ಮಾತ್ರವಲ್ಲದೇ ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ನವ್ಯಾ ನಾಯರ್ ತಮ್ಮ ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆಯನ್ನು ಹೇಳಿಕೊಂಡು ತಾವು ಅದರಿಂದ ಹೊರಬರಲಾಗದೇ ಒದ್ದಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅದೇನು ಅಂತಹ ಕೆಟ್ಟ ಘಟನೆ?

ನಾನು ಮುದ್ದಿಸಿದೆ, ಚುಂಬಿಸಿದೆ. ಅದರಲ್ಲೇನು ತಪ್ಪು? ಆ ಕೆಟ್ಟ ಅನುಭವದಿಂದ ನನಗೆ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ ನಟಿ ನವ್ಯಾ ನಾಯರ್. ಹಾಗಿದ್ದರೆ ಏನಿದು ಘಟನೆ? ನಟಿ ನವ್ಯಾ ನಾಯರ್ ಹೇಳಿರುವಂತೆ, 'ಸಂಬಂಧಿಕರ ಮಗುವನ್ನು ಎತ್ತಿಕೊಂಡು, ನಾನು ಚುಂಬಿಸಿದೆ ಹಾಗೂ ಮುದ್ದಿಸಿದೆ. ಆದರೆ, ತಕ್ಷಣ ಆ ಮಗುವಿನ ಅಮ್ಮ ಬಂದು ಅಪರಿಚಿತರ ಮಗುವಿಗೆ ಹೀಗೆ ಮತ್ತು ಕೊಡುವುದು ಎಷ್ಟು ಸರಿ? ಎಂದು ಕೇಳಿದರು. ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. 

ಏಕಾಏಕಿ ತುಟಿ ಕಚ್ಚಿ ಚುಂಬಿಸಿಬಿಟ್ಟ; ವಿಶ್ವಜಿತ್ ಚುಂಬನಕ್ಕೆ ರೇಖಾ ಕೌಂಟರ್ ಹೇಗಿತ್ತು?

ಮಗು ಯಾರದ್ದೇ ಆದರೂ ಪ್ರೀತಿ ತೋರಿಸಬಹುದು, ಮುದ್ದಾಡಬಹುದು ಎಂದು ನಾನು ಅಂದುಕೊಂಡಿದ್ದೆ. ಆದರೆ, ನನ್ನ ತಿಳುವಳಿಕೆ ತಪ್ಪು ಎಂದು ಆಕೆ ಹೇಳಿದಾಗ ನಾನು ಅಕ್ಷರಶಃ ನಡುಗಿಹೋದೆ. ನನ್ನ ಭಾವನೆ ಮತ್ತು ನಡೆ ತಪ್ಪೋ ಅಥವಾ ಆ ಮಗುವಿನ ತಾಯಿಯದ್ದೋ ಎಂಬ ಅಲ್ಪಸ್ವಲ್ಪ ಗೊಂದಲ ಈಗಲೂ ನನ್ನನ್ನು ಕಾಡುತ್ತಿದೆ. ಆದರೆ, ಮಾತು ಬಂದಿದ್ದು ನನಗೆ, ಆ ಮಾತಿನಿಂದ ನೋವಾಗಿದ್ದು ನನಗೆ. ಹೀಗಾಗಿ ನನ್ನದೇ ತಪ್ಪು ಇರಬಹುದು ಎಂಬ ಫೈನಲ್ ನಿರ್ಧಾರಕ್ಕೆ ಹತ್ತಿರ ಬಂದುಬಿಟ್ಟಿದ್ದೇನೆ. 

ಮಳೆಗಾಲದ ನೈಟ್‌ ಬೆಚ್ಚಗಿರಿಸಲು ಅಡಲ್ಟ್‌ ಸಿನಿಮಾ ನಟಿ ಸನ್ನಿ ಲಿಯೋನ್ ಮಾದಕ ಫೋಟೋಸ್!

ಮಗು ಎಂಬ ಕಾರಣಕ್ಕೆ ನಾನು ಮುದ್ದು ಮಾಡಿದೆ, ಚುಂಬಿಸಿದೆ. ಆದರೆ, ಆ ಮಗು, ಮಗುವಿನ ಮುಗ್ಧ ನಗು ನನ್ನ ಕಣ್ಣಿಗೆ ಕಾಣುತ್ತಿರಬಹುದು. ಆದರೆ, ಅದು ಇನ್ನೊಬ್ಬರ ಸ್ವತ್ತು ಎಂಬ ಸತ್ಯ ನನಗೆ ಯಾಕೆ ಅರ್ಥವಾಗಲಿಲ್ಲ. ಆ ಮಗುವಿಗೆ ಅಪ್ಪ-ಅಮ್ಮ ಅಂತ ಯಾರೋ ಇದ್ದಾರೆ, ಅದಕ್ಕೊಂದು ಮನೆಯಿದೆ, ಸ್ವಂತ ಹಾಗೂ ಬೇರೆಯದೇ ಆದ ಅಸ್ತಿತ್ವವಿದೆ. ನಾನು ಯಾಕೆ ಎಲ್ಲರೂ ನನ್ನವರು, ಈ ವಿಶ್ವಕ್ಕೆ ಸೇರಿದವರು ಎಂಬ ಭಾವನೆಯಲ್ಲಿ ಇರಬೇಕು ಎಂದು ಈಗ ನನಗೆ ಅನ್ನಿಸುತ್ತಿದೆ. ನಾನು ತುಂಬಾ ದೊಡ್ಡ ತಪ್ಪು ಮಾಡಿಬಿಟ್ಟೆನಾ? 

'ಕಾಮಕ್ಕೆ ಕಮಿಟ್‌ಮೆಂಟ್ ಯಾಕೆ ಬೇಕು' ಅಂದ್ಬಿಟ್ರಾ ಕೆಲಸ ಮುಗಿಸ್ಕೊಂಡ ಪವನ್ ಕಲ್ಯಾಣ್!

ಗೊತ್ತಿಲ್ಲ, ಆದರೆ, ನನಗೆ ಆ ಮಗುವಿನ ತಾಯಿ ಹೇಳಿದ ಮಾತಿನಿಂದ ತುಂಬಾ ನೋವಾಗಿದೆ. ಅದನ್ನು ಮಾತ್ರ ನಾನು ನ್ನ ಜನ್ಮದಲ್ಲಿ ಮರೆಯಲಾರೆ. ಮನಸ್ಸಿಗೆ ಗಾಯವಾಗಿದೆ. ಕಾಲದ ಮುಲಾಮು ಅದನ್ನು ನಿಧಾನವಾಗಿ ಮಾಯಿಸಬಹುದು. ಕಾಯಲೇಬೇಕು, ಕಾಯುತ್ತೇನೆ' ಎಂದಿದ್ದಾರೆ ನಟಿ ನವ್ಯಾ ನಾಯರ್.

Latest Videos
Follow Us:
Download App:
  • android
  • ios