ಬಾಲಿವುಡ್‌ನ ಜ್ಯೂನಿಯರ್ ಅಮಿತಾಬ್ ಎಂದೇ ಕರೆಯಲ್ಪಡುವ ನಟ, ಅಭಿಷೇಕ್ ಬಚ್ಚನ್ ಅಲ್ಲ!
ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಇವತ್ತಿಗೂ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 81ನೇ ವಯಸ್ಸಿನಲ್ಲೂ ಅವರು ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಬಾಲಿವುಡ್‌ನ ಈ ಒಬ್ಬ ನಟನನ್ನು ಜ್ಯೂನಿಯರ್ ಅಮಿತಾಬ್ ಎಂದು ಕರೆಯಲಾಗುತ್ತದೆ. ಆದರೆ ಅದು ಅಭಿಷೇಕ್ ಬಚ್ಚನ್ ಅಲ್ಲ.
ಬಾಲಿವುಡ್‌ನ ಲೆಜೆಂಡ್ ನಟ ಅಮಿತಾಭ್ ಬಚ್ಚನ್. ಯುಪಿಯಲ್ಲಿ 1942 ರಲ್ಲಿ ಜನಿಸಿದ ಅಮಿತಾಬ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನೀಡಿದ್ದಾರೆ. ಹೀಗಾಗಿಯೇ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅಮಿತಾಬ್ ನಟಿ ಜಯಾ ಅವರನ್ನು ಮದುವೆಯಾಗಿದ್ದು ಬಚ್ಚನ್ ದಂಪತಿಗೆ ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಅನ್ನೋ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ. ಇವತ್ತಿಗೂ ಅಮಿತಾಬ್ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 81ನೇ ವಯಸ್ಸಿನಲ್ಲೂ ಅವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಬಾಲಿವುಡ್‌ನ ಈ ಒಬ್ಬ ನಟನನ್ನು ಜ್ಯೂನಿಯರ್ ಅಮಿತಾಬ್ ಎಂದು ಕರೆಯಲಾಗುತ್ತದೆ. ಆದರೆ ಅದು ಅಭಿಷೇಕ್ ಬಚ್ಚನ್ ಅಲ್ಲ..
ಅಮಿತಾಭ್ ಬಚ್ಚನ್ ಅವರ 'ಮುಕದ್ದರ್ ಕಾ ಸಿಕಂದರ್' ಮತ್ತು 'ಲಾವರಿಸ್' ಚಿತ್ರಗಳನ್ನು ನೋಡಿದಾಗ ಅಮಿತಾಬ್ ಬಚ್ಚನ್ ಅವರ ಬಾಲ್ಯದ ಪಾತ್ರಗಳನ್ನು ನಿರ್ವಹಿಸಿದ ಖ್ಯಾತ ಬಾಲ ನಟ (Child Actor) ನೆನಪಾಗುತ್ತಾರೆ. ಅವರು 70-80ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲ ಕಲಾವಿದರಾಗಿದ್ದರು. ಬಿ.ಆರ್.ಚೋಪ್ರಾ ಅವರ 'ಮಹಾಭಾರತ'ದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿ ಜನಪ್ರಿಯರಾದ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ನಟನೆಯಿಂದ ದೂರ ಉಳಿದರು. ಇಂದು ಅವರು ತಮ್ಮ ವ್ಯಾಪಾರದಿಂದ (Business) ಕೋಟ್ಯಂತರ ರೂ. ಗಳಿಸುತ್ತಿದ್ದಾರೆ.
ಬರೋಬ್ಬರಿ 50 ಕೋಟಿಯ ತಮ್ಮ ಬಂಗಲೆ ಗಿಫ್ಟ್ ಮಾಡಿದ ಅಮಿತಾಬ್ ಬಚ್ಚನ್; ಕೊಟ್ಟಿದ್ದು ಅಭಿಷೇಕ್, ಐಶ್ವರ್ಯಾಗೆ ಅಲ್ಲ!
ಮಾಸ್ಟರ್ ಮಯೂರ್ ಹೆಸರಿನಿಂದ ಪ್ರಸಿದ್ಧನಾದ ನಟ
ಬಾಲ ಕಲಾವಿದ 1978ರ 'ಮುಕದ್ದರ್ ಕಾ ಸಿಕಂದರ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಅವರು ಚಿತ್ರರಂಗದಲ್ಲಿ ಮಾಸ್ಟರ್ ಮಯೂರ್ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಆದರೆ ಅವರ ನಿಜವಾದ ಹೆಸರು ಮಯೂರ್ ರಾಜ್ ವರ್ಮಾ. ದೆಹಲಿ ಮೂಲದ ಈ ನಟನಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೆ ಅದೃಷ್ಟ (Luck) ಅವರನ್ನು ಚಿತ್ರರಂಗಕ್ಕೆ ಕರೆದೊಯ್ದಿದೆ. ಮಾಸ್ಟರ್ ಮಯೂರ್ ಅವರ ತಾಯಿ ಪ್ರಸಿದ್ಧ ಬರಹಗಾರರು ಮತ್ತು ಪತ್ರಕರ್ತರಾಗಿದ್ದರು, ಅವರು ಚಲನಚಿತ್ರ ತಾರೆಯರ ಸಂದರ್ಶನಗಳನ್ನು (Interview) ತೆಗೆದುಕೊಳ್ಳುತ್ತಿದ್ದರು.
ಮಯೂರ್ ರಾಜ್ ವರ್ಮಾ ಅವರ ತಾಯಿ ತಮ್ಮ ಮಗ ನಟನಾ ಜಗತ್ತಿನಲ್ಲಿ ಹೆಸರು ಗಳಿಸಬೇಕೆಂದು ಬಯಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಒಮ್ಮೆ ಅವರು ಪ್ರಕಾಶ್ ಮೆಹ್ರಾ ಅವರನ್ನು ಸಂದರ್ಶಿಸಲು ಬಂದಾಗ, ನಿರ್ದೇಶಕರು ಅಮಿತಾಬ್ ಬಚ್ಚನ್ ಅವರ ಬಾಲ್ಯದ ಪಾತ್ರಕ್ಕಾಗಿ ಬಾಲ ನಟನನ್ನು ಹುಡುಕುತ್ತಿರುವುದಾಗಿ ಹೇಳಿದರು. ಆಗ ಮಾಸ್ಟರ್ ಮಯೂರನ ತಾಯಿ ಮಗನ ಬಗ್ಗೆ ಪ್ರಸ್ತಾಪಿಸತೊಡಗಿದರು. ಫೋಟೋ ನೋಡಿದ ಪ್ರಕಾಶ್ ಮೆಹ್ರಾ ಅವರು ಮಾಸ್ಟರ್ ಮಯೂರ್ ಅವರಿಗೆ 'ಮುಕದ್ದರ್ ಕಾ ಸಿಕಂದರ್' ಚಿತ್ರದ ಆಫರ್ ನೀಡಿದರು.
30 ವರ್ಷಕ್ಕಿಂತ ಮೊದಲೇ 30 ಸೂಪರ್ ಹಿಟ್ ಸಿನ್ಮಾ ಮಾಡಿದ ನಟ; ಶಾರೂಕ್, ಅಮಿತಾಬ್, ರಜನೀಕಾಂತ್ ಅಲ್ಲ!
ಸಕ್ಸಸ್‌ಫುಲ್ ಬಿಸಿನೆಸ್ ಮ್ಯಾನ್ ಜ್ಯೂನಿಯರ್ ಅಮಿತಾಬ್
ಮಾಸ್ಟರ್ ಮಯೂರ್ ಅವರ ಮೊದಲ ಚಿತ್ರವೇ ಹಿಟ್ ಆದ ನಂತರ ಅವರಿಗೆ ಹತ್ತಾರು ಚಿತ್ರಗಳ ಆಫರ್ ಬರಲಾರಂಭಿಸಿತು. 'ಯುವ ಅಮಿತಾಭ್' ಎಂಬ ಹೆಸರಿನೊಂದಿಗೆ ಪ್ರೇಕ್ಷಕರಲ್ಲಿ ಜನಪ್ರಿಯರಾದರು. ‘ಲಾವರಿಸ್’ ಚಿತ್ರ ಅವರನ್ನು ಹೆಚ್ಚು ಪ್ರಸಿದ್ಧಿಗೊಳಿಸಿತು. ಅವರು ಆ ಯುಗದ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲ ಕಲಾವಿದರಾಗಿದ್ದರು. ಮುಂದೆ 'ಲವ್ ಇನ್ ಗೋವಾ', 'ಶರಬಿ', ಮತ್ತು 'ಕಾನೂನ್ ಅಪ್ನಾ ಅಪ್ನಾ' ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.
ಬಿಆರ್ ಚೋಪ್ರಾ ಅವರ ನಟನೆಯನ್ನು ಗಮನಿಸಿದಾಗ, ಅವರು ತಮ್ಮ ಟಿವಿ ಶೋ 'ಮಹಾಭಾರತ'ದಲ್ಲಿ ಅಭಿಮನ್ಯು ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದರು. ಈ ಪಾತ್ರದಿಂದ ಅವರು ಎಷ್ಟು ಜನಪ್ರಿಯರಾದರು ಎಂದರೆ ಪ್ರೇಕ್ಷಕರು ಅವರನ್ನು ಭವಿಷ್ಯದ ಸೂಪರ್‌ಸ್ಟಾರ್ ಎಂದು ನೋಡಲು ಪ್ರಾರಂಭಿಸಿದರು. ಆದರೆ ಮಯೂರ್ ಶರ್ಮಾ ನಟನೆಯಲ್ಲಿ ಮುಂದುವರಿಯಲು ಇಷ್ಟಪಡಲ್ಲಿಲ್ಲ. ಮಯೂರ್ ರಾಜ್ ವರ್ಮಾ ತಮ್ಮ ನಟನಾ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಬಿಸಿನೆಸ್ ಮಾಡಲು ನಿರ್ಧರಿಸಿದರು. ಯಶಸ್ವೀ ಉದ್ಯಮಿ ಎಂದು ಸಹ ಗುರುತಿಸಿಕೊಂಡರು.
ಪ್ರಸಿದ್ಧ ಶೆಫ್ ನೂರಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಯೂರ್ ಶರ್ಮಾ ಪ್ರಸ್ತುತ ಪತ್ನಿ ಹಾಗೂ ಮಕ್ಕಳ ಜೊತೆ ವೇಲ್ಸ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ 'ಇಂಡಿಯಾನಾ' ಹೆಸರಿನ ರೆಸ್ಟೋರೆಂಟ್ ನಡೆಸುತ್ತಾರೆ. ಇದು ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿರುವ ಸಕ್ಸಸ್‌ಫುಲ್ ಉದ್ಯಮವಾಗಿದೆ.