ಕೆಲ ಸ್ಟಾರ್ ನಟ, ನಟಿಯರ ವೃತ್ತಿಜೀವನ ಚೆನ್ನಾಗಿದ್ದರೂ ಕೂಡ, ವೈಯಕ್ತಿಕ ಬದುಕು ಮಾತ್ರ ಮೂರಾಬಟ್ಟೆಯಾಗಿರುತ್ತದೆ. ಸಿನಿಮಾ ಸ್ಟೋರಿಗೂ ಠಕ್ಕರ್‌ ಕೊಡುವಂತೆ ಕೆಲ ಕಲಾವಿದರು ಮೂರು, ನಾಲ್ಕು ಮದುವೆ ಆಗೋದುಂಟು. ಅಂತೆಯೇ ಬಾಲಿವುಡ್‌ ನಟರೋರ್ವರು 70ನೇ ವಯಸ್ಸಿಗೆ ನಾಲ್ಕನೇ ಮದುವೆಯಾಗಿದ್ದಾರೆ. ನಾಲ್ಕನೇ ಪತ್ನಿ ಇವರಿಗಿಂತ 29 ವರ್ಷ ಚಿಕ್ಕವರು. 

ಯಾವುದೇ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಬದುಕಿರುವ ನಟ ಕಬೀರ್‌ ಬೇಡಿ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಬಾಲಿವುಡ್‌ ದಕ್ಷಿಣ ಭಾರತದಲ್ಲಿಯೂ ಹೆಸರು ಮಾಡಿರುವ ಕಬೀರ್‌ , ʼಕೂನ್‌ ಭಾರಿ ಮಾಂಗ್ʼ‌ ʼಮೇ ಹೂ ನಾʼ ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಲವ್‌ ಲೈಫ್‌ ಸಲುವಾಗಿ ಕಬೀರ್‌ ಆಗಾಗ ಸದ್ದು ಸುದ್ದಿ ಮಾಡುತ್ತಿರುತ್ತಾರೆ. 

ಮೊದಲ ಮದುವೆ
1069ರಲ್ಲಿ ಮಾಡೆಲ್‌, ಓಡಿಸ್ಸಿ ಡಾನ್ಸರ್‌ ಪ್ರತಿಮಾ ಗುಪ್ತಾ ಅವರನ್ನು ಕಬೀರ್‌ ವರಿಸುತ್ತಾರೆ. ಆ ಕಾಲದಲ್ಲಿಯೇ ಪ್ರತಿಮಾ ಮಾದಕ ನಟಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು. ಇನ್ನು ಮಾದಕತೆ ಪ್ರದರ್ಶಿಸುವ ಜಾಹೀರಾತುಗಳಲ್ಲಿಯೇ ಅವರು ಜಾಸ್ತಿ ಕಾಣಿಸುತ್ತಿದ್ದರು. ಕಬೀರ್‌ ಬೇಡಿಯನ್ನು ಮೊದಲ ಬಾರಿಗೆ ಭೇಟಿಯಾಗುವ ಸಂದರ್ಭದಲ್ಲಿಯೇ ಪ್ರತಿಮಾ ನಾಟಕಗಳಲ್ಲಿ ಹೆಸರು ಮಾಡಿದ್ದರು. ಈ ಮದುವೆಗೆ ಪ್ರತಿಮಾ ಮನೆಯವರು ಒಪ್ಪಿಗೆ ಕೊಟ್ಟಿರಲಿಲ್ಲ. ಹೀಗಾಗಿ ಲವ್‌ಮ್ಯಾರೇಜ್‌ ಆಗಬೇಕು ಎಂದುಕೊಂಡಿದ್ದ ಈ ಜೋಡಿ ಕೋರ್ಟ್‌ ಮ್ಯಾರೇಜ್‌ ಆಗಿತ್ತು. ಆರಂಭದಲ್ಲಿ ಇವರ ಸಂಸಾರ ಸುಖದಿಂದ ಸಾಗುತ್ತಿದ್ದರೂ ಕೂಡ, 1970ರ ನಂತರದಲ್ಲಿ ಮನಸ್ತಾಪ ಬಂದು, 1977ರಲ್ಲಿ ಡಿವೋರ್ಸ್‌ಆಯ್ತು. ಈ ಜೋಡಿಗೆ ಪೂಜಾ, ಸಿದ್ದಾರ್ಥ್‌ಎಂಬ ಮಕ್ಕಳಿದ್ದಾರೆ. ಅನಾರೋಗ್ಯದಿಂದ ಸಿದ್ದಾರ್ಥ್‌1977ರಲ್ಲಿ ಅಸು ನೀಗಿದರು. ಮಗನ ಸಾವು ಪ್ರತಿಮಾರನ್ನು ಡಿಪ್ರೆಶನ್‌ಗೆ ದೂಡಿತು. ಆ ನಂತರ ಅವರು ಹಿಮಾಲಯಕ್ಕೆ ತೀರ್ಥಯಾತ್ರೆ ಮಾಡಿದ್ದರು. ಉತ್ತರಾಖಾಂಡದಲ್ಲಿ 1998ರಲ್ಲಿ ಪ್ರತಿಮಾ ಸಾವನ್ನಪ್ಪಿದರು ಎನ್ನಲಾಗಿದೆ. 

ನಟ ಕಬೀರ್‌ ಬೇಡಿ ಆತ್ಮಕಥನ ಮಾರಾಟಕ್ಕೆ ನಿರ್ಬಂಧ ಇಲ್ಲ: ಹೈಕೋರ್ಟ್ ಆದೇಶ

ಡಿವೋರ್ಸ್‌ ಬಗ್ಗೆ ಪ್ರತಿಮಾ ಏನು ಹೇಳಿದ್ರು?
ಈ ಹಿಂದೆ ಡಿವೋರ್ಸ್‌ಬಗ್ಗೆ ಮಾತನಾಡಿದ್ದ ಪ್ರತಿಮಾ, "ಕಬೀರ್‌ ಜೀವನದಲ್ಲಿ ಮಹಿಳೆ ಎನ್ನೋದು ತುಂಬ ಚಿಕ್ಕ ಭಾಗ. ನನ್ನ ಜೀವನದಲ್ಲಿ ಮೊದಲು ಕರಿಯರ್‌, ಆ ನಂತರ ಕುಟುಂಬ, ಸ್ನೇಹಿತರು, ಕೊನೆಯಲ್ಲಿ ಪತ್ನಿ ಎಂದು ಅವರು ನನಗೆ ಮೊದಲೇ ಹೇಳಿದ್ದರು. ಅದೇ ರೀತಿ ಕಬೀರ್‌ ಇದ್ದರು. ಯಶಸ್ಸಿಗೋಸ್ಕರ ಅವರು ದುಡಿದರು. ಕಬೀರ್‌ ಎಂದಿಗೂ ನನ್ನ ರಾಜರೇ. ನನ್ನ ಜೀವನದಲ್ಲಿ ಕಬೀರ್‌ ಬದಲು ಬೇರೆ ಯಾರೂ ಬರೋದಿಲ್ಲ" ಎಂದು ಹೇಳಿದ್ದರು. 


ಅಕ್ರಮ ಸಂಬಂಧ-ಮದುವೆ
ಪ್ರತಿಮಾ ಗುಪ್ತರ ಜೊತೆ ಸಂಸಾರ ಮಾಡುತ್ತಿರುವಾಗಲೇ 1970ರ ಆಸುಪಾಸಿನಲ್ಲಿ ಕಬೀರ್‌ ಅವರು ಪರ್ವೀನ್‌ ಬಾಬಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಪರ್ವೀನ್‌ರಲ್ಲಿ ಲೈಂಗಿಕತೆಯ ಕೊರತೆ ಇದ್ದಿದ್ದಕ್ಕೆ ಅವರಿಬ್ಬರು ದೂರ ಆದರು.‌ಕಬೀರ್‌ಜೀವನಕ್ಕೆ ಪರ್ವೀನ್ ಎಂಟ್ರಿ ಆಗ್ತಿದ್ದಂತೆ ನನ್ನಿಂದ ದೂರ ಹೋಗಲು ನೋಡುತ್ತಿದ್ದರು. ಕಬೀರ್‌ ಬಗ್ಗೆ ನನಗೆ ನಂಬಿಕೆ ಇರಲಿಲ್ಲ. ಹೀಗಾಗಿ ಪರ್ವೀನ್‌ಗೂ ಕೂಡ ಕಬೀರ್‌ ವಿಚಾರದಲ್ಲಿ ಸೀರಿಯಸ್‌ ಆಗಬೇಡ ಎಂದು ಹೇಳಿದ್ದೆ. ಕಬೀರ್‌ ಬಗ್ಗೆ ಮಾತನಾಡಿದ್ದ ಪರ್ವೀನ್‌ "ಕಬೀರ್‌ ಕೆಲಸದಿಂದ ನಮ್ಮ ಜೀವನಶೈಲಿ ಬದಲಾಗಿತ್ತು. ನಾನು ಕಬೀರ್‌ ಜೊತೆ ಮದುವೆ ಆಗುವ ಆಲೋಚನೆ ಮಾಡದೆ, ನನ್ನ ಜೊತೆಯಲ್ಲೇ ಅವರನ್ನು ಇಟ್ಕೊಂಡಿದ್ದೆ" ಎಂದು ಹೇಳಿದ್ದರು. 1977ರಲ್ಲಿ ಪರ್ವೀನ್‌ ಕಬೀರ್‌ ದೂರ ಆದರು.

ಎರಡನೇ ಮದುವೆ 
ಕಬೀರ್‌ಬೇಡಿ ಅವರು ಅಮೆರಿಕದಲ್ಲಿ ಮಾಡೆಲಿಂಗ್‌ ಮಾಡುವಾಗ Susan Humphreys ಅವರನ್ನು ಭೇಟಿಯಾದರು. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿ, 1980ರಲ್ಲಿ ಮದುವೆಯಾಗಿ 1990ರಲ್ಲಿ ದೂರ ಆದರು. ಈ ಜೋಡಿಗೆ ಅದಾಮ್‌ ಬೇಡಿ ಎಂಬ ಮಗ ಇದ್ದಾನೆ. 

ಬೋಲ್ಡ್‌ನೆಸ್‌ನಿಂದನೇ ಬಾಲಿವುಡ್‌ನ ಟ್ರೆಂಡ್ ಬದಲಾಯಿಸಿದ ನಟಿ Parveen Babi

ಮೂರನೇ ಮದುವೆ! 
ಲಂಡನ್‌ನಲ್ಲಿ 1991ರಲ್ಲಿ ಕಬೀರ್‌ಅವರು ಬಿಬಿಸಿ ರೇಡಿಯೋ ಪ್ರೆಸೆಂಟರ್‌ ನಿಕ್ಕಿ ಮೂಲ್ಗಾಂವ್ಕರ್‌ ಅವರನ್ನು ಭೇಟಿ ಮಾಡ್ತಾರೆ. 1992ರಲ್ಲಿ ಈ ಜೋಡಿ ಮದುವೆ ಆಗುತ್ತದೆ. ಕಬೀರ್‌ಗಿಂತ ನಿಕ್ಕಿ 20 ವರ್ಷ ಚಿಕ್ಕವರು. ನಿಕ್ಕಿ ಲಂಡನ್‌ನಲ್ಲಿದ್ದರೆ, ಕಬೀರ್‌ ಭಾರತದಲ್ಲಿ ಇರುತ್ತಾರೆ. ಹೀಗೆ ಮನಸ್ತಾಪ ಬಂದು 2004ರಲ್ಲಿ ಈ ಜೋಡಿ ಬೇರೆ ಆಗುವುದು. 


ನಾಲ್ಕನೇ ಮದುವೆ!
2005ರಲ್ಲಿ ಡಿವೋರ್ಸ್‌ಆದಬಳಿಕ ನಿಕ್ಕಿ ಬೇಡಿ ಅವರು ಲಂಡನ್‌ ಮೂಲದ ಇಂಡಿಯನ್‌ ಸೋಶಿಯಲ್‌ ರಿಸರ್ಚರ್‌ ಪರ್ವೀನ್‌ ದುಸಾಂಜ್‌ ಜೊತೆ ಮತ್ತೆ ಪ್ರೀತಿಯಲ್ಲಿ ಬೀಳ್ತಾರೆ. ಈ ಜೋಡಿ ಮಧ್ಯೆ 26 ವರ್ಷದ ಗ್ಯಾಪ್‌ ಇದೆ. ಮಗಳು ಪೂಜಾ ಹೆಸರಿನಲ್ಲಿದ್ದ ಫ್ಲಾಟ್‌ನಲ್ಲಿಯೇ ಈ ಜೋಡಿ ಒಟ್ಟಿಗೆ ಬದುಕುತ್ತಿದ್ದಾರೆ. ಪರ್ವೀನ್‌ಗಿಂತ ಪೂಜಾ ಮೂರು ವರ್ಷ ದೊಡ್ಡವರು. ಮಗಳಿಗಿಂತ ಚಿಕ್ಕ ವುಯಸ್ಸಿನ ಹುಡುಗಿ ಜೊತೆ ಕಬೀರ್‌ ಬದುಕುತ್ತಿದ್ದಾರೆ. 2011ರಲ್ಲಿ ಕಬೀರ್‌ ಅವರು ಪರ್ವೀನ್‌ಗೆ ಪ್ರೇಮ ನಿವೇದನೆ ಮಾಡಿದರು. 70ನೇ ವಯಸ್ಸಿನಲ್ಲಿ ಈ ಜೋಡಿ ಮದುವೆ ಆಗಿದೆ. 

"ಪ್ರತಿ ರಿಲೇಶನ್‌ಶಿಪ್‌ನಲ್ಲಿಯೂ ಆರ್ಥಿಕವಾಗಿ ನಾನು ಅವರನ್ನು ಗಟ್ಟಿ ಮಾಡಿದ್ದೆ. ನಾನು, ಪರ್ವೀನ್‌ ಹತ್ತು ವರ್ಷ ಜೊತೆಗಿದ್ದೆವು. ಈಗ ಮದುವೆಯಾಗೋದು ಸಹಜ" ಎಂದು ಕಬೀರ್‌ ಬೇಡಿ ಹೇಳಿದ್ದರು.